ಮಗು ಕೊಂದು ಮಂಚದ ಕೆಳಗೆ ಬಚ್ಚಿಟ್ಟ ದುಷ್ಕರ್ಮಿಗಳು

 ಮಂಚದ ಕೆಳಗೆ ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿ ಬಿದ್ದಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಮಗು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. 

Last Updated : Dec 24, 2018, 10:57 AM IST
ಮಗು ಕೊಂದು ಮಂಚದ ಕೆಳಗೆ ಬಚ್ಚಿಟ್ಟ ದುಷ್ಕರ್ಮಿಗಳು title=

ಬೆಂಗಳೂರು: ಒಂದು ತಿಂಗಳ ಮಗುವನ್ನು ಕೊಂದು ಮಂಚದ ಕೆಳಗೆ ಬಚ್ಚಿಟ್ಟ ಹೃದಯವಿದ್ರಾವಕ ಘಟನೆ ನಗರದ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಡಿಸೆಂಬರ್ 21ರಂದು ಈ ಘಟನೆ ನಡೆದಿದ್ದು, ನೀಲಸಂದ್ರದ ನಿವಾಸಿ ಕಾರ್ತಿಕ್ ಮತ್ತಿ ಸ್ಟೆಲ್ಲಾ ದಂಪತಿಯ ಮಗುವೇ ಮೃತಪಟ್ಟ ದುರ್ದೈವಿ. ಈ ದಂಪತಿಗೆ ನವೆಂಬರ್ 22 ರಂದು ಅವಳಿ ಗಂಡು ಮಕ್ಕಳು ಜನಿಸಿದ್ದವು. ಕೌಟುಂಬಿಕ ಕಲಹದಿಂದಾಗಿ ಈ ಮೊದಲೇ ಬೇರೆ ಮನೆ ಮಾಡಿ ವಾಸವಿದ್ದ ಕಾರ್ತಿಕ್ ದಂಪತಿ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದರು. 

ಆದರೆ, ಎರಡನೇ ಮಗುವಿಗೆ ಜ್ವರ ಬಂದ ಕಾರಣ ಡಿಸೆಂಬರ್ 21ರಂದು ಈ ದಂಪತಿ ಮೊದಲ ಮಗುವನ್ನು ತಾಯಿ ಮನೆಯಲ್ಲಿ ಬಿಟ್ಟು, ಎರಡನೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆಯಿಂದ ವಾಪಸಾಗುವಾಗ ಹೊತ್ತಿಗೆ ಮೊದಲ ಮಗು ರಚ್ಚೆ ಹಿಡಿದಿತ್ತು. ತಕ್ಷಣ ಮೊದಲ ಮಗುವನ್ನು ಎತ್ತಿಕೊಂಡು ಹಾಲು ಕುಡಿಸಲು ತಾಯಿ ಬೆಡ್‌ ರೂಂಗೆ ತೆರಳಿದ್ದರು. ಕಾರ್ತಿಕ್‌ ಎರಡನೇ ಮಗುವನ್ನು ಹಾಲ್‌ನಲ್ಲಿರುವ ಮಂಚದ ಮೇಲೆ ಮಲಗಿಸಿ ಮಾತ್ರೆ ತರಲು ಮೆಡಿಕಲ್‌ ಶಾಪ್‌ಗೆ ತೆರಳಿದ್ದರು ಎನ್ನಲಾಗಿದೆ. ಆದರೆ ಮರಳಿ ಬರುವ ಹೊತ್ತಿಗೆ ಮಗು ಕಾಣದಾದಾಗ ಎಲ್ಲೆಡೆ ಹುಡುಕಾಡಿದ್ದಾರೆ. ಕಡೆಗೆ ಮಂಚದ ಕೆಳಗೆ ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿ ಬಿದ್ದಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಮಗು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. 

ಆದರೆ, ಮಗು ಸಹಜವಾಗಿ ಸಾವನ್ನಪ್ಪಿಲ್ಲ, ಕತ್ತು ಹಿಸುಕಿ ಯಾರೋ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. 

Trending News