ಬೆಂಗಳೂರು: ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮಹಿಳೆಯರಿಗೆ ಭರ್ಜರಿ ಉಡುಗೊರೆ ನೀಡಿದೆ. ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಭರ್ಜರಿ ಗುಡ್ನ್ಯೂಸ್ ನೀಡಿರುವ ಬಿಎಂಟಿಸಿ, ಇಂದು ಮಹಿಳಾ ಮಣಿಯರಿಗೆ ಉಚಿತ ಬಸ್ ಸೇವೆ ಒದಗಿಸಲಿದೆ.
ಹೌದು, ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರು ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡಿದರೂ ಕೂಡ ಬಿಎಂಟಿಸಿ ವತಿಯಿಂದ ಫ್ರೀ ಬಸ್ ಸೇವೆ ಲಭ್ಯವಾಗಲಿದೆ.
ಇದನ್ನೂ ಓದಿ- ಇಲ್ಲಿವರೆಗೂ ನಿಮ್ಗೆ ʼಮಹಿಳಾ ದಿನಾಚರಣೆʼ ಏಕೆ ಆಚರಿಸುತ್ತಾರೆ ಅಂತ ಗೊತ್ತಿಲ್ವಾ..! ಹಾಗಿದ್ರೆ ಓದಿ
ಇಂದು ನಗರದ ಯಾವುದೇ ಭಾಗದಲ್ಲಿ ಬಿಎಂಟಿಸಿ ಬಸ್ ಹತ್ತಿದ್ರೂ ಉಚಿತ ಸೇವೆ ಲಭ್ಯವಾಗಲಿದ್ದು ಮಹಿಳೆಯರು ಯಾವುದೇ ಟಿಕೆಟ್ ಇಲ್ಲದೇ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಸಿಲಿಕಾನ್ ಸಿಟಿಯಲ್ಲಿ ಮಹಿಳಾ ಪ್ರಯಾಣಿಕರಿಗೆ ಇಂದು ಬೆಳಗ್ಗೆಯಿಂದ ಮಧ್ಯರಾತ್ರಿವರೆಗೂ ಬಿಎಂಟಿಸಿಯಲ್ಲಿ ಉಚಿತ ಪ್ರಯಾಣ ಲಭ್ಯವಾಗಲಿದೆ.
ಅಧಿಸೂಚನೆಯ ಪ್ರಕಾರ, ಮಹಿಳಾ ಪ್ರಯಾಣಿಕರು ಮಾರ್ಚ್ 8 ರಂದು ಪ್ರೀಮಿಯರ್ ಎಸಿ ಸೇವೆಗಳಾದ ವಜ್ರ ಮತ್ತು ವಾಯು ವಜ್ರ ಸೇವೆಗಳು (ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಯನಿರ್ವಹಿಸುತ್ತದೆ) ಸೇರಿದಂತೆ ಯಾವುದೇ ರೀತಿಯ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ಇದನ್ನೂ ಓದಿ- Women's Day: ಉಡುಗೊರೆಯಾಗಿ ಕೊಡಲು ಇಲ್ಲಿವೆ 5 ಬೆಸ್ಟ್ ಸ್ಮಾರ್ಟ್ ಫೋನ್ ಗಳು, 2023 ರಲ್ಲಿ ಬಂಪರ್ ಬಿಕರಿಯಾಗಿವೆ
ಈ ಬಗ್ಗೆ ನಿನ್ನೆಯೇ (ಮಾರ್ಚ್ 07) ಪ್ರಕಟಣೆ ಹೊರಡಿಸಿರುವ ಬಿಎಂಟಿಸಿ ನಿಗಮ, ಇಂದು ದಿನ ಪೂರ್ತಿ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರ ಹಿತದೃಷ್ಟಿ, ಬಸ್ಗಳ ಬಗ್ಗೆ ಉತ್ತೇಜನದಿಂದ ಈ ಸೇವೆ ಒದಗಿಸಲಾಗುತ್ತಿದೆ ಎಂದು ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.