Murugha Mutt : ಮುರುಘಾ ಶರಣರ ಆಡಿಯೋ ವೈರಲ್ : ಅದ್ರಲ್ಲಿ ಏನಿದೆ ಗೊತ್ತಾ?

ಇಂದು ಮಠದಲ್ಲಿ ಶರಣರ ಸಲಹಾ ಸಮಿತಿ ಸಭೆ ನಡೆಸಿದರು. ಸಭೆಯಲ್ಲಿ ಶರಣರು ಭಾಷಣ ಮಾಡಿದ ಆಡಿಯೋ ವೈರಲ್ ಆಗಿದೆ. ಆಡಿಯೋದಲ್ಲಿ ಶರಣರು ಮಾತಾಡಿದ್ದು ಏನು? ಇಲ್ಲಿದೆ ಸಂಪೂರ್ಣ ಮಾಹಿತಿ..

Written by - Channabasava A Kashinakunti | Last Updated : Aug 27, 2022, 08:39 PM IST
  • ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ಆರೋಪ
  • ಇಂದು ಮಠದಲ್ಲಿ ಶರಣರ ಸಲಹಾ ಸಮಿತಿ ಸಭೆ
  • ಸಭೆಯಲ್ಲಿ ಶರಣರು ಭಾಷಣ ಮಾಡಿದ ಆಡಿಯೋ ವೈರಲ್
Murugha Mutt : ಮುರುಘಾ ಶರಣರ ಆಡಿಯೋ ವೈರಲ್ : ಅದ್ರಲ್ಲಿ ಏನಿದೆ ಗೊತ್ತಾ? title=

ಚಿತ್ರದುರ್ಗ : ನಗರದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ಆರೋಪದಡಿ ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ ಆಡಳಿತಾಧಿಕಾರಿ, ಮಾಜಿ ಶಾಸಕ ಬಸವರಾಜನ್ ವಿರುದ್ಧವೂ ಅತ್ಯಾಚಾರ ಯತ್ನದಡಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಇಂದು ಮಠದಲ್ಲಿ ಶರಣರ ಸಲಹಾ ಸಮಿತಿ ಸಭೆ ನಡೆಸಿದರು. ಸಭೆಯಲ್ಲಿ ಶರಣರು ಭಾಷಣ ಮಾಡಿದ ಆಡಿಯೋ ವೈರಲ್ ಆಗಿದೆ. ಆಡಿಯೋದಲ್ಲಿ ಶರಣರು ಮಾತಾಡಿದ್ದು ಏನು? ಇಲ್ಲಿದೆ ಸಂಪೂರ್ಣ ಮಾಹಿತಿ..

ಭಾಷಣದ ಆಡಿಯೋ ವೈರಲ್ ನಲ್ಲಿ ಶರಣರು, ಗಾಳಿಪಟಕ್ಕೆ ಕೆಳಗೆ ಇದ್ದಾಗ ಗಾಳಿ ಹೊಡೆತ  ಗೊತ್ತಾಗಲ್ಲ. ಎತ್ತರಕ್ಕೆ ಹೋದಂತೆ ಗಾಳಿ ಹೊಡೆತ ಬಹಳ. ಸಣ್ಣವರಿಗೆ ಸಣ್ಣ ಕುತ್ತು ಬರುತ್ತವೆ, ದೊಡ್ಡವರಿಗೆ ದೊಡ್ಡ ಕುತ್ತು ಬರುತ್ತವೆ. ಕುತ್ತುಗಳು ಅಂದರೆ ಆಪತ್ತುಗಳು, ಕಿರುಕುಳಗಳು ಯಾವ ಸತ್ಪುರುಷರು, ಸಮಾಜ ಸುಧಾರಕರ ಕಾಲದಲ್ಲಿಯೂ ಈ ರೀತಿಯಲ್ಲಿ ದುಷ್ಟ ಶಕ್ತಿಗಳಿದ್ದವು. ಸಾತ್ವಿಕರು ಸಕಾರಾತ್ಮಕ ಧೋರಣೆಯನ್ನು ಹೊಂದಿರುತ್ತಾರೆ. ಅದಕ್ಕೆ ವ್ಯತಿರಿಕ್ತವಾದದ್ದು ನಕಾರಾತ್ಮಕ ದೋರಣೆಗಳು, ಕ್ರೈಸ್ತ ಧರ್ಮದ ಯೇಸು ಕ್ರಿಸ್ತಗೆ ಶಿಲುಬೆಗೆ ಏರಿಸಿದ್ದು ಅದೇ ಧರ್ಮದವರು ಪೈಗಂಬರ್ ಗೆ ಟಾರ್ಚರ್‌ ಮಾಡಿದ್ದು ಅದೇ ಧರ್ಮದವರು. ಬುದ್ದನಿಗೆ ಹಂದಿಯ ಮಾಂಸದ ರಸ ಉಣಿಸಿದ್ದವರ ಉದಾಹರಣೆಯನ್ನು ನಾವು ಇಲ್ಲಿ ಕಾಣಬಹುದು. ನಮಗೆ ಪ್ಲೆಟೊನಂಥ ಶಿಷ್ಯ ಸಿಗಲಿಲ್ಲ. ಶಿಷ್ಯರು ಯಾವಾಗಲೂ ಮರಣ ದಂಡನೆಯನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು.  

ಇದನ್ನೂ ಓದಿ : ಚಿತ್ರದುರ್ಗದ ಮಠದ ಮುರುಘಾಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಎಫ್ಐಆರ್ ದಾಖಲು!

ಇನ್ನು ಆಡಿಯೋದಲ್ಲಿ ಮುಂದುವರೆದು ಮಾತನಾಡಿದ ಶರಣರು, ನಾನು ವ್ಯವಸ್ಥೆ ವಿರುದ್ಧ ರಾಜಿ ಮಾಡಿಕೊಂಡರೆ ಅತ್ಯಂತ ಕಳಂಕ. ಈ ನಿಸರ್ಗ ಬ್ರಹ್ಮಾಂಡ ಈ ವ್ಯವಸ್ಥೆಯನ್ನು ಸೃಷ್ಟಿಸಿದೆ. ಇದೆ ವೇಳೆ, ಶರಣರು ಸಾಕ್ರಟೀಸ್ ಬದುಕಿನ ಕೊನೆಯ ಕ್ಷಣಗಳನ್ನ ನೆನೆಯುತ್ತಾ, ಕೊನೆ ಗಳಿಗೆಯಲ್ಲಿ ಸಾಕ್ರಟೀಸ್ ವಿಷ ಕುಡಿದ ಪ್ರಸಂಗ ಮೆಲುಕು ಹಾಕಿದರು. 

ಜಗತ್ತಿನಲ್ಲಿ ಧರ್ಮಾಂಧರು, ಕಳ್ಳರು ಕೂಡ ಈ ಇಂತಹ ಸನ್ನಿವೇಶವನ್ನು ಎದುರಿಸಿರಲಿಲ್ಲ. ಯಾವಾಗಲು ತಾತ್ವಿಕ ತಳಹದಿಯ ಮೇಲೆ ನಡೆದವರಿಗೆ ಇಂತಹ ಕುತ್ತು ಇರುತ್ತದೆ. ಗಾಂಧೀಜಿ, ಬಸವಣ್ಣರಿಗೂ ಕೂಡಾ ಇಂತಹ ನೋವಿನ ದಿನಗಳು ಇದ್ದವು. ಅಂಥ ಮಹನೀಯರ ಜೀವನದಲ್ಲಿ ದುರಂತ ನಡೆದಿವೆ. ಇದಕ್ಕೆ ನಾವು ಕೂಡಾ ಹೊರತಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. 

ಸ್ವಜಾತಿಯವರಿಂದ ಹಾಳಾಗಿದ್ದ ಸಂಸ್ಥಾನಗಳ ಇತಿಹಾಸವನ್ನು ನೆನೆದ ಶರಣರು, 'ಮುಂಜಾನೆ ಈ  ಸುದ್ದಿ ಕೇಳಿ ನೀವೆಲ್ಲಾ ಇಲ್ಲಿಗೆ ಬಂದಿದ್ದೀರಿ. ನಮಗಿಂತ ನಿಮಗೆ ತುಂಬಾ ನೋವಾಗಿದೆ. ಸರ್ವಜಾತಿ, ಧರ್ಮದವರು ಕೂಡಾ ಇಲ್ಲಿದ್ದೀರಿ. ಮುರುಘಾ ಶರಣರ ಬದುಕಿನಲ್ಲಿಯೇ ಇದು ಆತ್ಯಂತಿಕ ಕಿರುಕುಳವಾಗಿದೆ ಎಂದರು.

ಮಠದಲ್ಲಿ ಅಧಿಕಾರಕ್ಕಾಗಿ ಸಂಘರ್ಷ ನಡೆಯುತ್ತಿದೆ. ಈಗ ಮುರುಘಾಮಠಕ್ಕೆ ಜನ ಬಂದು ನೋಡುವಂತೆ ನಾವು ಮಾಡಿದ್ದೇವೆ. 21ನೇ ಶತಮಾನ ಕರಾಳ ಘಟನೆ ಎಂದರೆ ಅದು ಇದೆ. ರೋಲ್ ಕಾಲ್, ಬ್ಲಾಕ್ ಮೇಲ್ ತಂತ್ರದ ಮೂಲಕ ಅಧಿಕಾರಬೇಕು ಎಂಬ ದೋರಣೆ ಮುಖ್ಯವಾಗಿದೆ. ನಾವು ಸಂಧಾನಕ್ಕೂ ಸಿದ್ದ, ಸಮರಕ್ಕೂ ಸಿದ್ದ. ಕೆಲವರು ಸಂಧಾನ ಮಾಡುತ್ತಿದ್ದಾರೆ, ಅದು ಫೇಲ್ ಆದರೆ ಸಮರ. ಸಂಧಾನ ಬೇಡವಾದಾಗ ಸಮರ ಇದ್ದೇ ಇರುತ್ತದೆ ಎಂದು ಇದೆ ವೇಳೆ ಗುಡುಗಿದರು.

ಇದನ್ನೂ ಓದಿ : Muruga Matha : ಮಠದ ಮಾಜಿ ಆಡಳಿತಾಧಿಕಾರಿ ವಿರುದ್ದವು ಅತ್ಯಾಚಾರ ಯತ್ನ, ದೂರು ನೀಡಿದ ಮುರುಘಾ ಮಠ ವಾರ್ಡನ್‌

'ಕೆಲವು ಸ್ವಾಮೀಜಿಗಳ ಜೀವನದಲ್ಲಿ ಇಂಥ ಘಟನೆ ನಡೆದಾಗ ನಾನೆ ಕೋರ್ಟ್ ಶುಲ್ಕ ಕೊಟ್ಟಿದ್ದೇನೆ. ನಾವೇ ಧೈರ್ಯ ಹೇಳಿದ್ದೂ ಇದೆ. ಈಗ ನಮ್ಮ ವಿರುದ್ದ ಇದೊಂದು ಪಿತೂರಿ, ಒಳ ಸಂಚು ಮಾಡಿದ್ದಾರೆ. ಯಾವ ಸಮಸ್ಯೆ ಕೂಡಾ ಶಾಶ್ವತ ಅಲ್ಲ, ಎಲ್ಲವೂ ತಾತ್ಕಾಲಿಕ. ಮುರುಘಾ ಮಠದ ಮೇಲಿನ ಅಭಿಮಾನ ಬಡಿದ್ದೇಬ್ಬಿಸಲು ನಡೆದಿರುವಂತಹ ಘಟನೆ ಇದು. ಜನ ರಾಜ್ಯಾದ್ಯಂತ ಮಠಕ್ಕೆ ಆಗಮಿಸುತ್ತಿದ್ದಾರೆ. ಇದು ಗರಿಷ್ಠ ಮಟ್ಟದ ಕಿರುಕುಳ ಮತ್ತು ಪಿತೂರಿಯಾಗಿದೆ. ಈ ಷಡ್ಯಂತ್ರವನ್ನು ಮಠದಲ್ಲಿ ಇದ್ದವರೇ ಮಾಡಿದ್ದಾರೆ. ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ. ಸಾಧ್ಯವಾದರೆ ಸಮಸ್ಯೆ ಬಗೆಹರಿಸೋಣ, ಇಲ್ಲದಿದ್ದರೆ, ಹೋರಾಟ ಮಾಡೋಣ. ಈ ಎರಡು ವಿಚಾರಕ್ಕೂ ನಾವು ಸಿದ್ದ ಮತ್ತು ಬದ್ಧರಾಗಿದ್ದೇವೆ. ಯಾವ ಸುಖವೂ ಶಾಶ್ವತ ಅಲ್ಲ, ಸಮಸ್ಯೆಯೂ ಶಾಶ್ವತವಲ್ಲ. ಇದರ ಬಗ್ಗೆ ಯಾರು ಕೂಡಾ ದುಃಖ ಮಾಡಿಕೊಳ್ಳಬೇಡಿ, ನೀವೆಲ್ಲಾ ನಮ್ಮ ಜೊತೆಗೆ ಇರುವುದು ದೊಡ್ಡ ಧೈರ್ಯ ಎಂದು ಶರಣರು ಹೇಳಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News