ಕಾಂಗ್ರೇಸ್‌ನ ʼಕರ್ನಾಟಕ ಬಂದ್‌ʼ ನಾಟಕ ಯಶಸ್ವಿಯಾಗುವುದಿಲ್ಲ; ಸಿಎಂ ಬೊಮ್ಮಾಯಿ

CM Bommai : "ಲೋಕಾಯುಕ್ತವನ್ನು ಅಲ್ಲಗಳೆದು, ಎಸಿಬಿ ಮುಂದುವರೆಯ ಬೇಕೆನ್ನುವುದು ಕಾಂಗ್ರೆಸ್ ನವರ ಆಕಾಂಕ್ಷೆ, ಕಾಂಗ್ರೆಸ್ ನಿಂದ ಬಂದ್ ಮಾಡುವ ನಾಟಕ ಮಾಡಲಾಗುತ್ತಿದ್ದು, ಬಂದ್ ಯಶಸ್ವಿಯಾಗುವುದಿಲ್ಲ. ನೀತಿಯುಕ್ತವಾಗಿ ಆಪಾದನೆ ಮಾಡಿ ಹೋರಾಟ ಮಾಡಬೇಕು. ಕಾಂಗ್ರೇಸ್‌ ತಾನು ಮಾಡುವ ಭ್ರಷ್ಟಾಚಾರದಿಂದಲೇ ಸೋಲನ್ನು ಅನುಭವಿಸುತ್ತಿದೆ" ಎಂದು ಸಿಎಂ ಬೊಮ್ಮಾಯಿ ಕಾಂಗ್ರೇಸ್‌ ವಿರುದ್ದ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. 

Written by - Zee Kannada News Desk | Last Updated : Mar 7, 2023, 08:01 PM IST
  • ಕಾಂಗ್ರೆಸ್ ನಿಂದ ಬಂದ್ ಮಾಡುವ ನಾಟಕ ಮಾಡಲಾಗುತ್ತಿದ್ದು, ಬಂದ್ ಯಶಸ್ವಿಯಾಗುವುದಿಲ್ಲ.
  • ಇವರ ಬಂದ್ ಕರೆಗೆ ಜನ ಸ್ಪಂದಿಸುವುದಿಲ್ಲ.
  • ಎಸಿಬಿ ಮುಂದುವರೆಯ ಬೇಕೆನ್ನುವುದು ಕಾಂಗ್ರೆಸ್ ನವರ ಆಕಾಂಕ್ಷೆ
ಕಾಂಗ್ರೇಸ್‌ನ ʼಕರ್ನಾಟಕ ಬಂದ್‌ʼ ನಾಟಕ ಯಶಸ್ವಿಯಾಗುವುದಿಲ್ಲ; ಸಿಎಂ ಬೊಮ್ಮಾಯಿ title=

CM Basavaraj Bommai : "ಕಾಂಗ್ರೆಸ್ ನವರು ಬಂದ್ ಗೆ ಕರೆ ನೀಡಿರುವ ಬಗ್ಗೆ ಉತ್ತರಿಸಿ, ಕಾಂಗ್ರೆಸ್ ನಿಂದ ಬಂದ್ ಮಾಡುವ ನಾಟಕ ಮಾಡಲಾಗುತ್ತಿದ್ದು, ಬಂದ್ ಯಶಸ್ವಿಯಾಗುವುದಿಲ್ಲ. ನೀತಿಯುಕ್ತವಾಗಿ ಆಪಾದನೆ ಮಾಡಿ ಹೋರಾಟ ಮಾಡಬೇಕು. ಕಾಂಗ್ರೆಸ್ ನವರು ಭ್ರಷ್ಟಾಚಾರದಲ್ಲಿ ಕೈಯನ್ನು ಕಪ್ಪು ಮಾಡಿಕೊಂಡಿದ್ದು, ಇವರ ಬಂದ್ ಕರೆಗೆ ಜನ ಸ್ಪಂದಿಸುವುದಿಲ್ಲ. ಕಾಂಗ್ರೇಸ್‌ ತಾನು ಮಾಡುವ ಭ್ರಷ್ಟಾಚಾರದಿಂದಲೇ ಸೋಲನ್ನು ಅನುಭವಿಸುತ್ತಿದೆ" ಎಂದು ಸಿಎಂ ಬೊಮ್ಮಾಯಿ ಕಾಂಗ್ರೇಸ್‌ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.  

ಲೋಕಾಯುಕ್ತವನ್ನು ಅಲ್ಲಗಳೆದು, ಎಸಿಬಿ ಮುಂದುವರೆಯ ಬೇಕೆನ್ನುವುದು ಕಾಂಗ್ರೆಸ್ ನವರ ಆಕಾಂಕ್ಷೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ತಡೆ ಅಧಿನಿಯಮ ವನ್ನು ತೆಗೆದು , ಲೋಕಾಯುಕ್ತವನ್ನು ಇದ್ದೂ ಇಲ್ಲದ ಹಾಗೆ ಮಾಡಿದ್ದರು. ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಿ, ಸಂಸ್ಥೆಯನ್ನು ಬಂದ್ ಮಾಡಿಲ್ಲ ಎಂದು ಮಾತಾಡುವುದು ಸರಿಯಲ್ಲ. ಹಾಗಾದರೆ ಕಾಂಗ್ರೆಸ್ ಅವಧಿಯಲ್ಲಿ ಎಲ್ಲ ಪ್ರಕರಣಗಳನ್ನು ಎಸಿಬಿ ವಹಿಸಿದ ಕಾರಣವೇನೆಂದು ಪ್ರಶ್ನಿಸಿದರು.  

ಇದನ್ನೂ ಓದಿ-ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹೋಳಿ ಹಂಗಾಮ

ಲೋಕಾಯುಕ್ತವನ್ನು ಹೈಕೋರ್ಟ್ ಉಳಿಸಿಕೊಂಡಿದ್ದೇ ಹೊರತು, ಬಿಜೆಪಿ ಸರ್ಕಾರವಲ್ಲ ಎಂಬುದಕ್ಕೆ ಉತ್ತರಿಸಿ, ಲೋಕಾಯುಕ್ತ ಉಳಿಸಿಕೊಳ್ಳುವ ಬಗ್ಗೆ ಹೈಕೋರ್ಟ್ ನ ತೀರ್ಮಾನದ ನಂತರ ಲೋಕಾಯುಕ್ತವನ್ನು ಚುರುಕುಗೊಳಿಸಲಾಯಿತು. ಆದರೆ ನ್ಯಾಯಾಲಯದ ತೀರ್ಪಿನಂತೆ ನಮ್ಮ ಸರ್ಕಾರ ಲೋಕಾಯುಕ್ತಕ್ಕೆ ಶಕ್ತಿ ತುಂಬಿರುವುದು ನಮ್ಮ ನೈತಿಕತೆಯನ್ನು ಪ್ರದರ್ಶಿಸಿದೆ ಎಂದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ರಾಜ್ಯ ಸರ್ಕಾರ ಮಾಡುವುದಲ್ಲ. 

ಸಿದ್ದರಾಮಯ್ಯ ಅವರ ಅವಧಿಗಿಂತಲೂ ಮುಂಚಿತವಾಗಿ ಮೈಸೂರು-ಬೆಂಗಳೂರು ಅಷ್ಟಪಥ ಹೆದ್ದಾರಿ ನಿರ್ಮಾಣದ ಯೋಜನೆಯಿತ್ತು. ಆದರೆ ಈ ರಸ್ತೆ ನಿರ್ಮಾಣ ಯೋಜನೆ ಯಾರ ಅವಧಿಯಲ್ಲಿ ಅನುದಾನ, ಅನುಷ್ಠಾನವಾಯಿತು ಎಂಬುದನ್ನು ಜನರು ಗಮನಿಸಿರುತ್ತಾರೆ. ಆದ್ದರಿಂದ ಪ್ರತಿ ವಿಷಯದಲ್ಲಿಯೂ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಸಿಎಂ ಬೊಮ್ಮಾಯಿ ಕಾಂಗ್ರೇಸ್‌ ವಿರುದ್ದ ಮಾತನಾಡಿದ್ದಾರೆ. 

​ಇದನ್ನೂ ಓದಿ-ಬೆಂಗಳೂರಿಗೆ ಆರೋಗ್ಯಕ್ಕಾಗಿ ವಿಶೇಷ ವ್ಯವಸ್ಥೆ ರೂಪಿಸಲಾಗುತ್ತಿದೆ: ಸಿಎಂ ಬೊಮ್ಮಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News