ಬೆಂಗಳೂರು : ನಮ್ಮ ನಿಮ್ಮ ಡಿಎನ್ ಎ ಟೆಸ್ಟ್ ಮಾಡಿ, ಎಲ್ಲ ಒಂದೇ ಇರುತ್ತೆ ಎಂದು ಕಾಂಗ್ರೆಸ್ ಶಾಸಕ ನಲಪಾಡ್ ಅಹ್ಮದ್ ಹ್ಯಾರಿಸ್ ಸೌಹಾರ್ದದತೆ ಪ್ರತಿಪಾದಿಸಿದರು.
ವಿಧಾನಸಭ ಕಲಾಪದ ಬೇಡಿಕೆಗಳ ಮೇಲೆ ಚರ್ಚೆ ವಿಷಯದಲ್ಲಿ ಮಾತನಾಡಿದ ಶಾಸಕ ಹ್ಯಾರಿಸ್(Haris), ನಮ್ಮ ನಿಮ್ಮ ರಕ್ತವೂ ಒಂದೇ ಬಣ್ಣದ್ದು, ಅನ್ಯೋನ್ಯತೆಯಿಂದ ಅಣ್ಣ ತಮ್ಮಂದಿರಾಗಿ ಬಾಳೋಣ. ಶಾಲೆಯಲ್ಲಿ ಎಲ್ಲ ಭಾರತೀಯರು ಅಣ್ಣ ತಮ್ಮಂದಿರು ಎಂದು ಪ್ರಾರ್ಥನೆಯಲ್ಲಿತ್ತು. ಇದೇ ಪ್ರಾರ್ಥನೆ ಇಂದಿಗೂ ನಮ್ಮ ಮನದಲ್ಲಿ ಇದೆ. ನಮ್ಮಲ್ಲಿ ವ್ಯತ್ಯಾಸ ತರುವ ಪ್ರಯತ್ನ ಏಕೆ? ಅಧಿಕಾರಕ್ಕಾಗಿನಾ? ನಾವು ಸಾವಿರ ವರ್ಷ ಬದುಕಲು ಸಾಧ್ಯನಾ. ಸಿಗುವ ಮೂರು ದಿನಗಳಲ್ಲಿ ಕಿತ್ತಾಟ ಏಕೆ? ಇಂತಹ ಬದುಕು ಬೇಕಾ? ಅವರವರ ನಂಬಿಕೆ ಅವರರನ್ನು ಕಾಪಾಡುತ್ತೆ, ಕಿತ್ತಾಟ ಏಕೆ, ಎಲ್ಲರೂ ಸೇರಿ ದೇಶಕ್ಕೆ ಸ್ವಾತಂತ್ರ್ಯ ತಂದಿದ್ದೇವೆ. ಇವಾಗ ಎಲ್ಲ ಸೇರಿ ದೇಶದಲ್ಲಿ ಸಮಾಧಾನ ತರುವ ಪ್ರಯತ್ನ ಮಾಡಬೇಕು ಎಂದು ಸಂದೇಶ ನೀಡಿದರು.
ಇದನ್ನೂ ಓದಿ : ಸುಳ್ಳೇ ಸಿದ್ದರಾಮಯ್ಯನವರ ಮನೆ ದೇವರು; ಇದಕ್ಕೆ ನೂರಾರು ಸಾಕ್ಷ್ಯಗಳಿವೆ ಎಂದ ಬಿಜೆಪಿ
ಸರ್ಕಾರಿ ಶಾಲೆಗಳ ಪರಿಸ್ಥಿತಿ ಬಗ್ಗೆ ಬಗ್ಗೆ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು(Govt School) ಸುಧಾರಿಸುವುದು ಯಾವಾಗಬಡಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವುದು ಯಾವಾಗ? ಬಡ್ಡಿಗೆ ಹಣ ತಂದು ತಂದೆ-ತಾಯಿ ಮಕ್ಕಳನ್ನಓದಿಸ್ತಾರೆ. ಉತ್ತಮ ಶಾಲೆಗಳನ್ನ ತೆಗೆದರೆ ಯಾಕೆ ಇಂತ ಸ್ಥಿತಿ ಬರುತ್ತೆ? ಜನರನ್ನ ಮೇಲೆತ್ತುವ ಕೆಲಸ ಸರ್ಕಾರ ಮಾಡಲಿ. ಶಾಲೆಗಳ ಸುಧಾರಣೆಯಾದರೆ ಶಿಕ್ಷಣ ಉತ್ತಮವಾಗುತ್ತೆ. ಶಿಕ್ಷಣ ಬೆಳೆದರೆ ಆರ್ಥಿಕ ಸ್ಥಿತಿಸುಧಾರಿಸುತ್ತೆ ಎಂದರು.
ಬೆಂಗಳೂರು(Bengaluru) ಬಹಳ ವೇಗವಾಗಿ ಬೆಳೆಯುತ್ತಿದೆ, ದೇಶಕ್ಕೆ ಹೆಚ್ಚು ರೆವಿನ್ಯೂ ತಂದು ಕೊಡುತ್ತೆ. ಸರ್ಕಾರ ಬೆಂಗಳೂರಿಗೆ ಯಾವ ಸವಲತ್ತು ಕೊಡ್ತಿದೆ. ಬೆಂಗಳೂರು ಇನ್ನೆಲ್ಲಿ ಬೆಳೆಯುತ್ತೆ? ಎಂದು ಸರ್ಕಾರದ ವಿರುದ್ಧ ಹ್ಯಾರೀಸ್ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ : Siddaramaiah : ಹಿಜಾಬ್ ವಿವಾದ ಆಗಲು ಬಿಜೆಪಿಯೇ ಕಾರಣ : ಸಿದ್ದರಾಮಯ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.