ಕೊರೊನಾ ಮತ್ತೆ ಏರಿಕೆ ಹಿನ್ನೆಲೆ, ಅಧಿಕಾರಿಗಳು ಹೈಅಲರ್ಟ್

ಈ ಮೂಲಕ ಇಂದು ಬೆಂಗಳೂರಿನ ಪಾಲಿಕೆಯ ಆರೋಗ್ಯಾಧಿಕಾರಿಗಳ ತಂಡ ನಗರದ ವಿವಿಧ ಕಡೆ ಇಂದು ತಪಾಸಣೆ ಮೂಲಕ ಎರಡನೇ ಡೋಸ್ ಪಡೆದವರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಬಿಟಿಎಂ ಲೇಔಟ್ ನ ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳಿಗೆ ದಿಢೀರ್ ಭೇಟಿ ನೀಡಿದರು.

Written by - Manjunath Hosahalli | Edited by - Manjunath N | Last Updated : Dec 28, 2022, 06:18 PM IST
  • ಬಿಟಿಎಂ ಲೇಔಟ್ ನ ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳಿಗೆ ದಿಢೀರ್ ಭೇಟಿ ನೀಡಿದರು.
  • ಬಿಬಿಎಂಪಿ ದಕ್ಷಿಣ ವಲಯದ ಆರೋಗ್ಯ ಅಧಿಕಾರಿಗಳ ತಂಡ ತಪಾಸಣೆ ಮೇಲೆ ತಪಾಸಣೆ ಮಾಡಿದ್ರು.
  • ಎರಡನೇ ಡೋಸ್ ಪಡೆದವರ ಹಾಗೂ ಪಡೆಯದವರ ಬಗ್ಗೆ ಮಾಹಿತಿ ಕಲೆ ಹಾಕಿದರು.
ಕೊರೊನಾ ಮತ್ತೆ ಏರಿಕೆ ಹಿನ್ನೆಲೆ, ಅಧಿಕಾರಿಗಳು ಹೈಅಲರ್ಟ್ title=

ಬೆಂಗಳೂರು: ಚೀನಾದಲ್ಲಿ ಕೊರೊನಾ ಮತ್ತೆ ಅಬ್ಬರಿಸುತ್ತಿರೋದ್ರಿಂದ ದೇಶ ಮತ್ತು ರಾಜ್ಯದ ಆರೋಗ್ಯಾಧಿಕಾರಗಳ ತಂಡ ಅಲರ್ಟ್ ಆಗಿದ್ದಾರೆ.‌

ಇದನ್ನೂ ಓದಿ: ಕಾರು ಹಾಗೂ ಬೈಕ್ ಮಧ್ಯೆ ಡಿಕ್ಕಿ, ಸ್ಥಳದಲ್ಲಿಯೇ ಮೂವರ ಸಾವು

ಈ ಮೂಲಕ ಇಂದು ಬೆಂಗಳೂರಿನ ಪಾಲಿಕೆಯ ಆರೋಗ್ಯಾಧಿಕಾರಿಗಳ ತಂಡ ನಗರದ ವಿವಿಧ ಕಡೆ ಇಂದು ತಪಾಸಣೆ ಮೂಲಕ ಎರಡನೇ ಡೋಸ್ ಪಡೆದವರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಬಿಟಿಎಂ ಲೇಔಟ್ ನ ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳಿಗೆ ದಿಢೀರ್ ಭೇಟಿ ನೀಡಿದರು.ಮುಖ್ಯ ಆರೋಗ್ಯಧಿಕಾರಿ‌ ಡಾ ಸುರೇಶ್ ಆದೇಶ ಮೇರೆಗೆ ಕಾರ್ಯಪ್ರವೃತರಾದ ಬಿಬಿಎಂಪಿ ದಕ್ಷಿಣ ವಲಯದ ಆರೋಗ್ಯ ಅಧಿಕಾರಿಗಳ ತಂಡ ತಪಾಸಣೆ ಮೇಲೆ ತಪಾಸಣೆ ಮಾಡಿದ್ರು. ಆರೋಗ್ಯ ವೈದ್ಯಾಧಿಕಾರಿ ನೇತೃತ್ವದಲ್ಲಿ ಗೌತಮ್ ರಿಂದ ತಪಾಸಣೆ ಮೂಲಕ ಎರಡನೇ ಡೋಸ್ ಪಡೆದವರ ಹಾಗೂ ಪಡೆಯದವರ ಬಗ್ಗೆ ಮಾಹಿತಿ ಕಲೆ ಹಾಕಿದರು.

ಇದನ್ನೂ ಓದಿ: ಕಾರು ಅಪಘಾತ: ಮೋದಿ ಸಹೋದರನ ಆರೋಗ್ಯ ವಿಚಾರಿಸಿದ ಸುತ್ತೂರು ಶ್ರೀಗಳು

ಇನ್ನು ಹೋಟೆಲ್, ರೆಸ್ಟೋರೆಂಟ್ ಸಿಬ್ಬಂದಿಗಳಿಗೆ ಕಡ್ಡಾಯ ಎರಡು ಡೋಸ್ ಲಸಿಕೆ ಪಡೆದಿರಬೇಕು ಎಂಬ ಆದೇಶ ಹಿನ್ನೆಲೆಯಲ್ಲಿ ಬಿಬಿಎಂಪಿ ಆರೋಗ್ಯ ಅಧಿಕಾರಿಗಳಿಂದ ಧಿಡೀರ್ ತಪಾಸಣೆಗೆ ಇಳಿದ ಕಾರಣ ಹೊಟೆಲ್ ರೆಸ್ಟೋರೆಂಟ್ ನಲ್ಲಿದ್ದ ಸಿಬ್ಬಂದಿಗಳು ಶಾಕ್ ಗೆ ಒಳಗಾಗಿದ್ರು. ಹೋಟೆಲ್ ಸಿಬ್ಬಂದಿ ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್ ಪರಿಶೀಲನೆ ಸೇರಿ ಇಂಡಿಯ ನ್ ಕಾಫಿ ಹೌಸ್ ರೆಸ್ಟೋರೆಂಟ್ ನಲ್ಲಿಯೂ ಪರಿಶೀಲನೆ ನಡೆಸಿದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News