ಬೆಂಗಳೂರು: ರಾಜ್ಯ ಬಿಜೆಪಿಗೆ ವಲಸೆ ಬಂದ ನಾಯಕರು ಬೇರೆ ಒಂದು ಶಕ್ತಿ ಕೇಂದ್ರವನ್ನ ಸ್ಥಾಪನೆ ಮಾಡುತ್ತಿದ್ದಾರೆ. ಇದೀಗ ಅದು ಕಮಲ ಪಾಳಯದಲ್ಲಿ ಭಾರೀ ಚರ್ಚೆಗ ಗ್ರಾಸವಾಗಿದೆ. ಈ ಮೂಲಕ ರಾಜ್ಯ ಬಿಜೆಪಿಯ ಮೂಲ ವರ್ಸಸ್(V /s) ವಲಸಿಗರ ನಡುವಿನ ಜಗಳ ತಾರಕಕ್ಕೇರುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.
ಕಾಂಗ್ರೆಸ್ ತೊರೆದು ವಲಸೆ ಬಂದು ರಾಜ್ಯದಲ್ಲಿ ಬಿಜೆಪಿ(BJP) ಸರ್ಕಾರ ರಚನೆಗೆ ಕಾರಣಿಕರ್ತರಾದ ವಲಸಿಗರಿಗೆ ಪಕ್ಷದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬುವುದು ಮೂಲ ಬಿಜೆಪಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕಾರಣಕ್ಕಾಗಿ ಪಕ್ಷದಲ್ಲಿ ಆಂತರಿಕವಾಗಿ ಜಗಳಗಳು ಶುರುವಾಗಿವೆ.
ಬಿಹಾರ ಸಿಎಂ ಆಯ್ಕೆಗೆ ಇಂದು NDA ಸಭೆ: ನಿರ್ಧಾರವಾಗುತ್ತಾ ನಿತೀಶ್ ಕುಮಾರ್ ಭವಿಷ್ಯ
17 ಮಂದಿ ವಲಸಿಗರ ಪೈಕಿ ಐದು ಮಂದಿಗೆ ಸಚಿವ ಸ್ಥಾನ ನೀಡಿಲ್ಲ. ಇದೀಗ ಸಂಪುಟ ವಿಸ್ತರಣೆಯಾದಲ್ಲಿ ನಾಲ್ವರು ವಲಸಿಗರಿಗೆ ಸಚಿವ ಸ್ಥಾನ ನೀಡಬೇಕಾದ ಅನಿವಾರ್ಯತೆ ಸಿಎಂ ಬಿಎಸ್ ವೈ ಅವರಿಗಿದೆ. ಈ ಮೂಲಕ ಕೊಟ್ಟ ಮಾತನ್ನ ಉಳಿಸಿಕೊಳ್ಳುವ ಹೊಣೆಗಾರಿಕೆ ಅವರದ್ದಾಗಿದೆ.
'ಸಾರಿಗೆ ನೌಕರರಿಗೆ ಸಂಬಳ ನೀಡಲು ದುಡ್ಡಿಲ್ಲ'
ಆದರೆ ಮೂಲ ಬಿಜೆಪಿಗರಲ್ಲಿ ಸಾಕಷ್ಟು ಮಂದಿ ಸಚಿವ ಸ್ಥಾನ ಆಕಾಂಕ್ಷಿಗಳಿದ್ದಾರೆ. ಉಳಿದಿರುವ ಕೆಲವೇ ಕೆಲವು ಸ್ಥಾನಗಳನ್ನು ವಲಸಿಗರಿಗೆ ಕೊಟ್ಟರೆ ಪಕ್ಷವನ್ನು ಕಟ್ಟಿ ಬೆಳೆಸಿದ ನಮಗೇನು? ಎಂಬುವುದು ಅವರ ಪ್ರಶ್ನೆಯಾಗಿದೆ. ಮೂಲ ಬಿಜೆಪಿಗರ ಆಕ್ರೋಶ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ವಿಡಿಯೋ ವೈರಲ್: ಸಂಸದೆ ಸುಮಲತಾ ವಿರುದ್ಧ ಗಂಭೀರ ಆರೋಪ ಮಾಡಿದ ಪ್ರತಾಪ್ ಸಿಂಹ!
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಲಸೆ ಬಂದ 17 ಶಾಸಕರು ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಲು ಪ್ರರ್ಯಾಯ ಶಕ್ತಿ ಕೇಂದ್ರ ರಚನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಪತನಕ್ಕೆ ಕಾರಣವಾಗಿದ್ದ ರಮೇಶ್ ಜಾರಕಿಹೊಳಿ ಅಂಡ್ ಟೀಮ್ ಬಿಜೆಪಿಯಲ್ಲಿ ವಲಸಿಗರ ಪರ್ಯಾಯ ಶಕ್ತಿ ಕೇಂದ್ರ ರಚನೆಯಾಗುತ್ತಿದೆ.
ಬೈ ಎಲೆಕ್ಷನ್ ಫಲಿತಾಂಶದ ಬೆನ್ನಲ್ಲೇ ಸಿಎಂ ಬಿಎಸ್ ವೈ ಭೇಟಿಯಾದ ಕುಮಾರಸ್ವಾಮಿ !
ಈ ರಮೇಶ್ ಜಾರಕಿಹೊಳಿ ಅಂಡ್ ಟೀಮ್ ನಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೆಲವರು ಆಪ್ತರೂ ಸೇರಿಕೊಂಡಿದ್ದಾರೆ. ಜಲಸಂಪನ್ಮೂಲ ಸಚಿವ ಜಾರಕಿಹೊಳಿ ಅವರನ್ನು ಕೆಲ ದಿನಗಳ ಹಿಂದೆ ಸಿಎಂ ಬಿಎಸ್ ವೈ ಆಪ್ತರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಎಂಪಿ ರೇಣುಕಾಚಾರ್ಯ, ರಾಜೂಗೌಡ, ಮುರುಗೇಶ ನಿರಾಣಿ, ಬೆಳ್ಳಿ ಪ್ರಕಾಶ್, ಶಂಕರ ಪಾಟೀಲ ಮುನೇನಕೊಪ್ಪ, ಪೂರ್ಣಿಮಾ ಶ್ರೀನಿವಾಸ್ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ. ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಪರ್ಯಾಯ ಶಕ್ತಿ ಕೇಂದ್ರ ರಚನೆ ಮಾಡಿ ಈ ಮೂಲಕ ವಿರೋಧಿ ಬಣಕ್ಕೆ ಉತ್ತರ ನೀಡುವುದು ಇದರ ಹಿಂದಿರುವ ತಂತ್ರಗಾರಿಕೆಯಾಗಿದೆ.