ಶಿವಮೊಗ್ಗ: ಕಿಶೋರಕುಮಾರ ಎಂಬುವವರಿಗೆ ನಾಗರಾಜ ಎಂಬುವವರು Make free trips ಎಂಬ ಕಂಪನಿಯ ಬಗ್ಗೆ ತಿಳಿಸಿ, ನೀವು ಈ ಕಂಪನಿಗೆ 9000/- ರೂ ಹಣ ಕಟ್ಟಿ ಸದಸ್ಯರಾಗಿ. ನೀವು ಬೇರೆ 06 ಜನ ಸದಸ್ಯರನ್ನು ನಮ್ಮ ಕಂಪನಿಗೆ ಸೇರಿದರೆ ನಿಮಗೆ ಹೊರಾಜ್ಯಕ್ಕೆ ಉಚಿತವಾಗಿ ಕರೆದುಕೊಂಡು ಹೋಗುತ್ತೇವೆ, ನೀವು ಕಟ್ಟಿದ 9000/- ರೂ ಹಣವನ್ನು ವಾಪಾಸ್ ಕೊಡುತ್ತೇವೆ ಎಂದು ಹೇಳಿದ್ದು, ಹಾಗೆಯೇ Make free Money ಗೆ 90000/- ಹಣವನ್ನು ಹೂಡಿಕೆ ಮಾಡಿದರೆ ನಾವು ನಿಮಗೆ ಬೆಂಗಳೂರು ನಿಂದ ಬಾಂಬೆಗೆ ವಿಮಾನದಲ್ಲಿ ಕರೆದುಕೊಂಡು ಹೋಗಿ ತದನಂತರ ಬಾಂಬೆಯಿಂದ ಕ್ರೂಜ್ ಎಂಬ ಹಡಗಿನಲ್ಲಿ ಗೋವಾಕ್ಕೆ 02 ರಾತ್ರಿ 03 ಹಗಲು ಉಚಿತವಾಗಿ ಟ್ರಿಪ್ ಕರೆದುಕೊಂಡು ಹೋಗುತ್ತೇವೆ. ನೀವು ನಮ್ಮಲ್ಲಿ ಹಣ ಹೂಡಿಕೆ ಮಾಡಿದ್ದಕ್ಕೆ ಪ್ರತಿಫಲವಾಗಿ ಪ್ರತಿ ತಿಂಗಳು 6000/- ರೂ ನಂತೆ 33 ತಿಂಗಳು ಅಂದರೆ ಒಟ್ಟು 1,98,000/- ರೂ ಹಣವನ್ನು ನಿಮಗೆ ವಾಪಾಸ್ ಕೊಡುತ್ತೇವೆ ಎಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ಕಿಶೋರ್ ಕುಮಾರ್ ಎಂಬುವವರು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ.
ಇದನ್ನೂ ಓದಿ: ಇಷ್ಟವಿಲ್ಲದಿದ್ದರೂ ನಟಿ ಶ್ರುತಿ ಹಾಸನ್ ಜೊತೆ ಅಂಥಾ ಸೀನ್ ಮಾಡಬೇಕಾಯಿತು! ಖ್ಯಾತ ನಟನ ಹೇಳಿಕೆ
ಉಳಿದ ಆರೋಪಿಗಳಾದ ಮಹಮದ್ ಲತೀಪ್, ಕಿಶೋರ್,ಬಿ,ಕೆ, ಮಹಮದ್ ಅಶ್ರಪ್, ಇವರುಗಳು ಹರ್ಷ ಫರ್ನ್ ಇನ್ ಹೋಟೇಲ್ ಹಾಗೂ ಇತರೆ ಹೋಟೇಲ್ಗಳಲ್ಲಿ ಸಾರ್ವಜನಿಕರನ್ನು ಸೇರಿಸಿ ಕಾರ್ಯಕ್ರಮ ಮಾಡಿ Make free trips ಹಾಗೂ Make free Money ಬಗ್ಗೆ ನಂಬಿಕೆ ಬರುವಂತೆ ಮಾಡಿದ್ದರಿಂದ ಕಿಶೋರಕುಮಾರ್ ರವರು ಅವರ ಮಾತನ್ನು ನಂಬಿ ಆರೋಪಿ ನಾಗರಾಜರವರಿಗೆ ಫೋನ್ ಪೇ/ ಗೂಗಲ್ ಪೇ ಹಾಗೂ ನಗದು ರೂಪದಲ್ಲಿ ಒಟ್ಟು 7,52,370/- ರೂ ಹಣವನ್ನು ಆರೋಪಿ ಕಿಶೋರ್ ರವರಿಗೆ ಫೋನ್ ಪೇ/ ಗೂಗಲ್ ಪೇ ಮೂಲಕ 1,16,000/- ರೂ ಹಣವನ್ನು, ಆರೋಪಿ ಮಹಮದ್ ಆಶ್ರಪ್ ರವರ ಬ್ಯಾಂಕ್ ಖಾತೆ 1,00,000/- ರೂ ಹಣವನ್ನು ಹಾಗೂ ಮಹಮದ್ ಲತೀಫ್ ಅವರ ಹೆಂಡತಿ ಪಾತೀಮಾ ರವರ ಕೆನರಾ ಬ್ಯಾಂಕ್ ಖಾತೆಗೆ 2,80,000/- ರೂ.ಗಳನ್ನು ಕಳುಹಿಸಿಕೊಟ್ಟಿದ್ದರು.
ಆದರೆ ಪಿರ್ಯಾದಿ ಹಾಗೂ ಅವರ ಕುಟುಂಬದರವರಿಗೆ ಓಡಿಸ್ಸಾ ಹಾಗೂ ಗೋವಾಕ್ಕೆ ಪ್ರವಾಸ ಕರೆದುಕೊಂಡು ಹೋಗಿದ್ದು, ಪಿರ್ಯಾದಿಯವರಿಗೆ ಆ ಕಂಪನಿಯಿಂದ ಇದುವರೆಗೆ 12000/- ರೂ ಮಾತ್ರ ವಾಪಾಸ್ ಕೊಟ್ಟಿರುತ್ತಾರೆ. ಉಳಿದ ಹಣವನ್ನು ಕೊಡದೇ ಮೋಸ ಮಾಡಿರುತ್ತಾರೆ, ಪಿರ್ಯಾದಿಯಂತೆ ಈ ಕಂಪನಿಗೆ ಹೂಡಿಕೆ ಮಾಡಿದ್ದ ವಿನೋಬನಗರ ವಾಸಿ ಪ್ರಸನ್ನ ರವರಿಗೆ 90000/- ರೂ. ಶಿವಮೊಗ್ಗ, ಆರ್.ಎಂ.ಎಲ್ ನಗರ ವಾಸಿ ಗೈಬಾನ್ ಖಾನ್ 180000/-, ನವುಲೆ ವೆಂಕಟಾಪುರ ವಾಸಿಯಾದ ದೊಡ್ಡವೀರಪ್ಪ 218000/-, ಗಾಂಧಿಬಜಾರ್ ವಾಸಿ ಮೋಹನ್ 485000/-ರೂ, ಅಶ್ವಥ್ ನಗರ ವಾಸಿ ಶಿವಶಂಕರ ಶಾಸ್ತ್ರಿ 213000/-ರೂ., ಹರಿಗೆ ವಾಸಿಯಾದ ಶ್ರೀಮತಿ ಗಂಗಾವತಿ 45000/- ರೂ, ಗೋಪಾಳ ವಾಸಿಯಾದ ರಮೇಶ 9000/- ರೂ, ತೀರ್ಥಹಳ್ಳಿ ವಾಸಿಯಾದ ಅಬ್ದುಲ್ ಮುತಲಬ್ 9000/- ಹಾಗೂ ಇತರೆಯವರಿಂದ ಹಣವನ್ನು ಪಡೆದುಕೊಂಡು ಅವರಿಗೂ ವಾಪಾಸ್ ಕೊಡದೇ ಮೋಸ ಮಾಡಿದ್ದು ಆರೋಪಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಜಯನಗರ ಪೆÇಲೀಸ್ ಠಾಣೆ ಗುನ್ನೆ ನಂ: 51/2024,ಕಲಂ-406,420 ಸಹಿತ 34 ಐಪಿಸಿ ಹಾಗೂ ಕಲಂ: 21(1)(2)(3)Banning of unregulated deposit schemes Act 2019 ರೀತ್ಯಾ ಪ್ರಕರಣ ದಾಖಲಾಗಿದ್ದು ಪ್ರಕರಣ ತನಿಖೆಯಲ್ಲಿರುತ್ತದೆ.
ಇದನ್ನೂ ಓದಿ: ರಾಜ್ಯ ರಾಜಧಾನಿಯ ಅಭಿವೃದ್ದಿಗೆ ಗ್ರೇಟರ್ ಬೆಂಗಳೂರು ಬಿಲ್: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್
Make free trips ಹಾಗೂ Make free Money ಗೆ ಹಣ ಹೂಡಿಕೆ ಮಾಡಿ ಮೋಸ ಹೋದವರು ಯಾರಾದರು ಇದ್ದಲ್ಲಿ ಜಯನಗರ ಪೊಲೀಸ್ ಠಾಣೆಗೆ ಬೇಟಿ ನೀಡಿ ಮಾಹಿತಿ ನೀಡುವಂತೆ ಜಯನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ