ಬೆಂಗಳೂರು : ಕೊರೋನಾ ಸೋಂಕಿನ ಭೀತಿಯಿಂದಾಗಿ ಈ ಬಾರಿಯ ಶೈಕ್ಷಣಿಕ ಚಟುವಟಿಕೆ ತಡವಾಗಿ ಆರಂಭಗೊಂಡಿದೆ. ಇದರ ಮಧ್ಯೆ ಶಾಲಾ ತರಗತಿಯಿಂದಲೂ ವಿನಾಯಿತಿ ನೀಡಲಾಗಿದ್ದು, ಆಫ್ ಲೈನ್, ಆನ್ ಲೈನ್ ತರಗತಿಗಳಿಗೆ ವಿದ್ಯಾರ್ಥಿಗಳಿಗೆ ಹಾಜರಾಗಲು ಅವಕಾಶ ನೀಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಈ ಮೊದಲಿದ್ದಂತ ಹಾಜರಾತಿ ಕಡ್ಡಾಯ ನಿಯಮ ಕೂಡ ಬದಲಾಗಲಿದೆ ಎನ್ನಲಾಗಿದೆ. ಹಾಜರಾತಿ ಇಲ್ಲದಿದ್ದರೂ ಅಂತಿಮ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿಯ ನಂತ್ರ, ಕೊರೋನಾ ರೂಪಾಂತರ ಸೋಂಕಿನ(New Coronavirus) ಭೀತಿ ಕಾಡುತ್ತಿದೆ. ಇದರ ಮಧ್ಯೆಯೂ ಮೊದಲು ಪದವಿ, ಡಿಪ್ಲೋಮಾ, ಇಂಜಿನಿಯರ್ ತರಗತಿಗಳನ್ನು ಕೇಂದ್ರ ಮಾರ್ಗಸೂಚಿಯಂತೆ ಆರಂಭಿಸಲಾಗಿತ್ತು. ಆಪ್ ಲೈನ್ ಹಾಗೂ ಆನ್ ಲೈನ್ ತರಗತಿ ಆರಂಭಗೊಂಡಿವೆ. ಹೀಗಾಗಿ ತರಗತಿ ಹಾಜರಾತಿಯಿಂದ ವಿದ್ಯಾರ್ಥಿಗಳಿಗೆ ವಿನಾಯಿತಿ ಕೂಡ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಕಡ್ಡಾಯ ಹಾಜರಾತಿಯಿಂದ ವಿನಾಯಿತಿ ಕೂಡ ನೀಡಲಾಗಿದೆ.
Preetham Gowda: 'ಸಚಿವರಾಗಲು ಅರ್ಹತೆ-ಯೋಗ್ಯತೆ ಬೇಕು'
ಈ ಮೊದಲು ಪರೀಕ್ಷೆ ತೆಗೆದುಕೊಳ್ಳಲು ವಿದ್ಯಾರ್ಥಿಗಳಿಗೆ ಶೇ.70ರಷ್ಟು ಹಾಜರಾತಿ ಕಡ್ಡಾಯ ಎಂಬುದು ನಿಯಮವಾಗಿತ್ತು. ಇದೀಗ ತಡವಾಗಿ ಶೈಕ್ಷಣಿಕ ಚಟುವಟಿಕೆ ಆರಂಭಗೊಂಡಿವೆ. ರಾಜ್ಯದಲ್ಲಿ ಎಸ್‌ಎಸ್‌ಎಲ್ ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್, ಡಿಪ್ಲೋಮಾ ಕೋರ್ಸ್ ತರಗತಿ ಆರಂಭಗೊಂಡಿದೆ. ಆದ್ರೇ ವಿದ್ಯಾರ್ಥಿಗಳು ತರಗತಿ ಹಾಜರಾತಿಯಿಂದ ವಿನಾಯಿತಿ ನೀಡಲಾಗಿರುವುದರಿಂದಾಗಿ, ವಿದ್ಯಾರ್ಥಿಗಳಿಗೂ ಕೂಡ ಅಂತಿಮ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಲು ಶಿಕ್ಷಣ ಇಲಾಖೆ ಪ್ಲ್ಯಾನ್ ರೂಪಿಸಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ.
Cabinet Expansion : ಆ ಸುದ್ದಿ ಕೇಳಿ ಅಬಕಾರಿ ಸಚಿವ ಹೆಚ್ ನಾಗೇಶ್ ಗೆ ಶಾಕ್..! ಆಗಿದ್ದೇನು ಗೊತ್ತಾ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ