ಬೆಂಗಳೂರು: ಕನ್ನಡ ಭಾಷೆಯನ್ನೂ ಕೊಳಕು ಭಾಷೆ Ugliest Language ಎಂದು ಕರೆದಿದ್ದಕ್ಕಾಗಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಗೂಗಲ್, ಈಗ ಕನ್ನಡ ಹಾಗೂ ಕರ್ನಾಟಕದ ಜನತೆಯ ಕ್ಷಮೆ ಯಾಚಿಸಿದೆ.
ಈಗ ಕನ್ನಡ (Kannada) ಮತ್ತು ಇಂಗ್ಲೀಶ್ ಎರಡಲ್ಲಿಯೂ ಟ್ವೀಟ್ ಮಾಡಿರುವ ಗೂಗಲ್ (Google) "ಹುಡುಕುವುದು ಯಾವಾಗಲೂ ಪರಿಪೂರ್ಣವಾಗಿರುವುದಿಲ್ಲ, ಕೆಲವೊಮ್ಮೆ ಇಂಟರ್ನೆಟ್ ನಲ್ಲಿ ನಿರ್ದಿಷ್ಟವಾದ ಹುಡುಕಾಟಗಳಿಗೆ ಬರುವ ಫಲಿತಾಂಶಗಳು ಆಶ್ಚರ್ಯವನ್ನುಂಟು ಮಾಡುತ್ತವೆ.ಇದು ಸೂಕ್ತವಲ್ಲ ಎಂಬುವುದು ನಮಗೆ ಗೊತ್ತು, ಆದರೆ ಯಾವುದೇ ಒಂದು ಸಮಸ್ಯೆ ಎದುರಾದಾಗ ಮತ್ತು ನಮ್ಮ ಗಮನಕ್ಕೆ ಬಂದಾಗ ನಾವು ಕ್ಷೀಪ್ರವಾಗಿ ಸಮರ್ಪಕ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಮತ್ತು ನಮ್ಮ ಅಲ್ಗೊರಿಧಂ ನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಸದಾ ಕ್ರಿಯಾಶೀಲವಾಗಿರುವುದನ್ನು ಮುಂದುವರೆಸಿದ್ದೇವೆ.ತಪ್ಪು ಅರ್ಥ ಬಂದಿರುವುದಕ್ಕೆ ಮತ್ತು ಯಾವುದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ನಾವು ಕ್ಷಮೆ ಯಾಚನೆ ಯಾಚಿಸುತ್ತಿದ್ದೇವೆ ಎಂದು" ಎಂದು ಟ್ವೀಟ್ ನಲ್ಲಿ ಗೂಗಲ್ ಬರೆದುಕೊಂಡಿದೆ.
ಇದನ್ನೂ ಓದಿ: Anushka Shetty: ಹೆತ್ತವರಿಗೆ ಕನ್ನಡದಲ್ಲೇ ವಿಶ್ ಮಾಡಿದ ಅನುಷ್ಕಾಗೆ ನೆಟ್ಟಿಗರು ಹೇಳಿದ್ದೇನು ಗೊತ್ತಾ
We apologize for the misunderstanding and hurting any sentiments. pic.twitter.com/nltsVezdLQ
— Google India (@GoogleIndia) June 3, 2021
ಇದಕ್ಕೂ ಮೊದಲು ಸಾಮಾಜಿಕ ಮಾಧ್ಯಮಗಳಲ್ಲಿ ಗೂಗಲ್ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು, ಇನ್ನೊಂದೆಡೆಗೆ ಗೂಗಲ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಸಚಿವ ಅರವಿಂದ್ ಲಿಂಬಾವಳಿ ಅವರು ಎಚ್ಚರಿಕೆ ನೀಡಿದ್ದರು. ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಕೂಡ ಗೂಗಲ್ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ" ಭಾಷೆ ವಿಚಾರದಲ್ಲಿ @GoogleIndia @Google ಯಾಕಿಷ್ಟು ಅಸೂಕ್ಷ್ಮವಾಗಿ ನಡೆದುಕೊಳ್ಳುತ್ತದೆ? 'Ugliest language in India' ಎಂಬ ಹುಡುಕಾಟಕ್ಕೆ #Kannada ಎಂದು ಉತ್ತರ ನೀಡುತ್ತಿದ್ದ ವೆಬ್ ಪುಟ ತೆಗೆದು ಹಾಕಲು ಕನ್ನಡಿಗರು ಬಂಡೇಳಬೇಕಾಯ್ತೆ? ಯಾವುದೇ ಭಾಷೆ ವಿರುದ್ಧದ ಇಂಥ ದ್ವೇಷವನ್ನು ಮೊದಲೇ ನಿಯಂತ್ರಿಸಲು Googleಗೆ ಅಸಾಧ್ಯವೇ? ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ಕನ್ನಡಿಗರಿಗೆ ಒಂದು ಸಿಹಿ ಸುದ್ದಿ, ದೆಹಲಿಯಲ್ಲಿ ಸ್ಥಾಪನೆಯಾಗಲಿದೆ ಕನ್ನಡ ಭಾಷಾ ಅಕಾಡೆಮಿ!
ಈಗ ಗೂಗಲ್ ಕ್ಷಮೆಯಾಚಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಅವರು "ಕನ್ನಡಿಗರ ಸ್ವಾಭಿಮಾನದ ಅಲೆಗೆ @GoogleIndia @Googleಮಣಿದಿದೆ. ಕನ್ನಡಿಗರ ಕ್ಷಮೆ ಕೋರಿದೆ. ಕನ್ನಡಿಗರು ಸಹಿಷ್ಣುಗಳು. ಆದರೆ ಅದನ್ನು ನಮ್ಮವರ ಭಾಷಾ ನಿರಭಿಮಾನ ಎಂದು ಭಾವಿಸಿಕೊಳ್ಳಬೇಕಾಗಿಲ್ಲ. ಸಿಡಿದು ನಿಲ್ಲುವುದು, ತಪ್ಪಿನ ವಿರುದ್ಧ ಪ್ರತಿರೋಧ ತೋರುವುದು ಕನ್ನಡಿಗರ ಚಾರಿತ್ರಿಕ ಗುಣ. ಕನ್ನಡಿಗರ ಒಗ್ಗಟ್ಟಿನಲ್ಲಿ ಅಗಾಧ ಶಕ್ತಿಯೂ ಇದೆ ಎಂದು ಬರೆದುಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.