ಶ್ರೀಲಂಕಾ ಸ್ಪೋಟದಲ್ಲಿ ಮೃತಪಟ್ಟ ಜೆಡಿಎಸ್ ಕಾರ್ಯಕರ್ತರಿಗೆ ಅಂತಿಮ ನಮನ ಸಲ್ಲಿಸಿದ ಸಿಎಂ ಹೆಚ್ಡಿಕೆ

ಶ್ರೀಲಂಕಾದ ಕೊಲೊಂಬೋದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದಿಂದ 300 ಕ್ಕೂ ಅಧಿಕ ಜನರು ಮೃತಪಟ್ಟು 500 ಜನರು ಗಾಯಗೊಂಡಿದ್ದರು.ಇದೇ ಸ್ಪೋಟದಲ್ಲಿ  ಜೆಡಿಎಸ್ ಕಾರ್ಯಕರ್ತರು ಕೂಡ ಮೃತಪಟ್ಟಿದ್ದರು.

Last Updated : Apr 24, 2019, 03:05 PM IST
ಶ್ರೀಲಂಕಾ ಸ್ಪೋಟದಲ್ಲಿ ಮೃತಪಟ್ಟ ಜೆಡಿಎಸ್ ಕಾರ್ಯಕರ್ತರಿಗೆ ಅಂತಿಮ ನಮನ ಸಲ್ಲಿಸಿದ ಸಿಎಂ ಹೆಚ್ಡಿಕೆ  title=
Photo courtesy: Twitter

ಬೆಂಗಳೂರು: ಶ್ರೀಲಂಕಾದ ಕೊಲೊಂಬೋದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದಿಂದ 300 ಕ್ಕೂ ಅಧಿಕ ಜನರು ಮೃತಪಟ್ಟು 500 ಜನರು ಗಾಯಗೊಂಡಿದ್ದರು.ಇದೇ ಸ್ಪೋಟದಲ್ಲಿ  ಜೆಡಿಎಸ್ ಕಾರ್ಯಕರ್ತರು ಕೂಡ ಮೃತಪಟ್ಟಿದ್ದರು.

ಈ ಹಿನ್ನಲೆಯಲ್ಲಿ ಇಂದು ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ಮೃತ ಕಾರ್ಯಕರ್ತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.ಈಗ ಈ ಕುರಿತಾಗಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ "ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಮಡಿದ ನಮ್ಮ ಪಕ್ಷದ ಕಾರ್ಯಕರ್ತರಾದ ರಂಗಪ್ಪ ಮತ್ತು ಹನುಮಂತರಾಯಪ್ಪ ಅವರ ಅಂತಿಮ ದರ್ಶನವನ್ನು ಪಡೆದೆ. ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದೇನೆ. ಪಕ್ಷಕ್ಕೆ ಹಾಗೂ ಸಮಾಜಕ್ಕೆ ಈ ಇಬ್ಬರ ಕೊಡುಗೆಯೂ ಮಹತ್ವದ್ದು." ಎಂದು ಟ್ವೀಟ್ ಮಾಡಿದ್ದಾರೆ. 

ಉಗ್ರರ ದಾಳಿಯನ್ನು ಖಂಡಿಸಿ ಪ್ರಧಾನಿ ಮೋದಿ "ಶ್ರೀಲಂಕಾದಲ್ಲಿ ನಡೆದ ಭೀಕರ ಸ್ಫೋಟವನ್ನು ನಾವು ಖಂಡಿಸುತ್ತೇವೆ.ನಮ್ಮ ಪ್ರದೇಶದಲ್ಲಿ ಇಂತಹ ದುಷ್ಕೃತ್ಯಕ್ಕೆ ಯಾವುದೇ ಅವಕಾಶವಿಲ್ಲ, ಭಾರತ ದೇಶವು ಇಂತಹ ಸಮಯದಲ್ಲಿ ಶ್ರೀಲಂಕಾ ಜನರೊಂದಿಗೆ ಬೆಂಬಲವಾಗಿ ನಿಲ್ಲಲಿದೆ. ದಾಳಿಯಲ್ಲಿ ಮೃತಪಟ್ಟವರಿಗೆ ಮತ್ತು ಗಾಯಗೊಂಡಿರುವವರೆಗೆ ನನ್ನ ಸಂತಾಪ ಮತ್ತು ಪ್ರಾರ್ಥನೆಗಳು ಇರಲಿವೆ" ಎಂದು ಮೋದಿ ಟ್ವೀಟ್ ಮಾಡಿದ್ದರು.

ಈಗ ಶ್ರೀಲಂಕಾದಲ್ಲಿ ಸಂಭವಿಸಿದ ಈ ದಾಳಿಯನ್ನು ದಶಕದಲ್ಲಿಯೇ ಅತ್ಯಂತ ಭೀಕರ ಎಂದು ಹೇಳಲಾಗುತ್ತಿದೆ. ಕೊಲೊಂಬೋದಲ್ಲಿ ಹೋಟೆಲ್ ಹಾಗೂ ಚರ್ಚ್ ಗಳನ್ನು ಗುರಿಯನ್ನಾಗಿಸಿಕೊಂಡು ಉಗ್ರರು ಆತ್ಮಹತ್ಯಾ ದಾಳಿಯನ್ನು ಮಾಡಿದ್ದರು. 
 

Trending News