ಆಸ್ಪತ್ರೆಗಳಲ್ಲಿ ಹೆಣ ನೀಡಲು ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲು-ಸಿದ್ದರಾಮಯ್ಯ

ಇನ್ಮುಂದೆ ಆಸ್ಪತ್ರೆಗಳಲ್ಲಿ ಶವ ನೀಡಲು ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Last Updated : Mar 10, 2018, 05:01 PM IST
  • ಮೈಸೂರಿನ ಕೆ.ಆರ್.ಎಸ್. ರಸ್ತೆಯಲ್ಲಿ ಒಟ್ಟು 4 ಲಕ್ಷ ಚದರ ಅಡಿಯಲ್ಲಿ 350 ಹಾಸಿಗೆಗಳ ಜಯದೇವ ಆಸ್ಪತ್ರೆ ನಿರ್ಮಾಣ
  • 150 ಕೋಟಿ ರೂ. ವೆಚ್ಚದಲ್ಲಿ 4 ಅಂತಸ್ತಿನ ಕಟ್ಟಡ ನಿರ್ಮಾಣ
  • ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ 4 ಆಪರೇಷನ್ ಥಿಯೇಟರ್, 4 ಕಾರ್ಡಿಯೋ ಕ್ಯಾತ್​'ಲ್ಯಾಬ್ (ಆಂಜಿಯೋಗ್ರಾಂ), 4 ಆಪರೇಷನ್ ಥಿಯೇಟರ್ (ಸಾಮಾನ್ಯ) ಸೌಲಭ್ಯ.
  • 60 ಹಾಸಿಗೆಯುಳ್ಳ ತೀವ್ರ ನಿಗಾ ಘಟಕ(ಐಸಿಯು)
ಆಸ್ಪತ್ರೆಗಳಲ್ಲಿ ಹೆಣ ನೀಡಲು ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲು-ಸಿದ್ದರಾಮಯ್ಯ title=

ಮೈಸೂರು : ಇನ್ಮುಂದೆ ಆಸ್ಪತ್ರೆಗಳಲ್ಲಿ ಶವ ನೀಡಲು ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕೆ.ಆರ್.ಎಸ್. ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜಯದೇವ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಮೃತಪಟ್ಟರೆ, ಮೃತದೇಹವನ್ನು ನೀಡಲು ಹಣ ಪಡೆಯುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದರು.

ಮುಂದುವರಿದು ಮಾತನಾಡಿದ ಅವರು, 350 ಹಾಸಿಗೆಗಳನ್ನು ಹೊಂದಿರುವ ಜಯದೇವ ಆಸ್ಪತ್ರೆಯು ದೇಶದಲ್ಲಿಯೇ ಬೃಹತ್ ಹೃದ್ರೋಗ ಆಸ್ಪತ್ರೆಯಾಗಿದೆ. ಇಲ್ಲಿ ಎಲ್ಲಾ ಬಡವರೂ ನಮ್ಮ ಸರ್ಕಾರ ಆರೋಗ್ಯ ಯೋಜನೆಯಡಿ ಹೆಲ್ತ್ ಕಾರ್ಡ್ ನೀಡಿದೆ. ಇದರಿಂದ ಎಲ್ಲಾ ಬಡವರಿಗೂ ಅನುಕೂಲವಾಗಲಿದೆ ಎಂದು ಅವರು ಹೇಳಿದರು. 

ಮೈಸೂರು ಜಿಲಾಭಿವೃದ್ಧಿಗೆ 5000 ಕೋಟಿ ರೂ.ಗಳನ್ನೂ ವಿನಿಯೋಗಿಸಲಾಗಿದೆ. ಈ ಹಿಂದೆ ಯಾವ ಸರ್ಕಾರವೂ ಇಷ್ಟೊಂದು ಅನುದಾನ ನೀಡಿಲ್ಲ ಎಂದರು. ಅಂತೆಯೇ ಮೈಸೂರಿನಲ್ಲಿ ಲಲಿತ ಮಹಲ್ ಮಾದರಿಯಲ್ಲಿಯೇ, ಪಾರಂಪರಿಕತೆಯನ್ನು ಉಳಿಸಿಕೊಂಡು ಜಿಲ್ಲ ಸಂಕೀರ್ಣ ನಿರ್ಮಾಣ ಮಾಡಲಾಗಿದೆ ಎಂದು ಅವರು ಹೇಳಿದರು.

ಜಯದೇವ ಆಸ್ಪತ್ರೆ:
ಮೈಸೂರಿನ ಕೆ.ಆರ್.ಎಸ್. ರಸ್ತೆಯಲ್ಲಿ ಒಟ್ಟು 4 ಲಕ್ಷ ಚದರ ಅಡಿಯಲ್ಲಿ ಜಯದೇವ ಆಸ್ಪತ್ರೆಯನ್ನು ನಿರ್ವಿುಸಲಾಗಿದೆ. 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 4 ಅಂತಸ್ತಿನ ಈ ಕಟ್ಟಡದಲ್ಲಿ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ 30 ಕೋಟಿ ರೂ. ವೆಚ್ಚದ ವಿವಿಧ ಚಿಕಿತ್ಸಾ ಉಪಕರಣ ಖರೀದಿಸಲಾಗಿದೆ. ನಗರದ ಕೆ.ಆರ್.ಆಸ್ಪತ್ರೆಯ ಆವರಣದಲ್ಲಿ 2010ರಲ್ಲಿ ಪ್ರಾರಂ ಭವಾಗಿರುವ ಜಯದೇವ ಆಸ್ಪತ್ರೆ ಇಲ್ಲಿಗೆ ಸ್ಥಳಾಂತರವಾಗಲಿದೆ. 

ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ 4 ಆಪರೇಷನ್ ಥಿಯೇಟರ್, 4 ಕಾರ್ಡಿಯೋ ಕ್ಯಾತ್​'ಲ್ಯಾಬ್ (ಆಂಜಿಯೋಗ್ರಾಂ), 4 ಆಪರೇಷನ್ ಥಿಯೇಟರ್ (ಸಾಮಾನ್ಯ) ಸೌಲಭ್ಯವನ್ನು ಮೈಸೂರಿನಲ್ಲಿ ಮೊದಲ ಬಾರಿಗೆ ಕಲ್ಪಿಸಲಾಗಿದೆ. ಜತೆಗೆ ಸಾಮಾನ್ಯ ಶಸ್ತ್ರಚಿಕಿತ್ಸೆಗಾಗಿ ಹೆಚ್ಚುವರಿ 4 ಆಪರೇಷನ್ ಥಿಯೇಟರ್, 4 ಕಾರ್ಡಿಯೊ ಕ್ಯಾತ್​ಲ್ಯಾಬ್, ಕಾರ್ಡಿಯಾಕ್ ಸಿಟಿ ಸ್ಕ್ಯಾನಿಂಗ್ಗ್, ಎಂಆರ್​ಐ, ಎಕೊ, ಟ್ರೆಡ್​ವಿುಲ್ ಪರೀಕ್ಷೆ, ಆಂಜಿಯೊಗ್ರಾಂ, ಆಂಜಿಯೊ ಪ್ಲಾಸ್ಟ್ರಿ, ಎಲೆಕ್ಟ್ರೊ ಫಿಸಿಯಾಲಜಿ ಸೌಲಭ್ಯಗಳಿದ್ದು, 60 ಹಾಸಿಗೆಯುಳ್ಳ ತೀವ್ರ  ನಿಗಾ ಘಟಕ(ಐಸಿಯು) ಹೊಂದಿದೆ. 

Trending News