ಬೆಂಗಳೂರು : ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಲ್ತಾಫ್ ಖಾನ್ ಅವರನ್ನು ನಿಲ್ಲಿಸಿದರೇನು? ನಾನು ಕ್ರಿಕೆಟರ್ ಸಚಿನ್ ತರಹ ಫೇಮಸ್ಸು, ನನ್ನ ವಿರುದ್ಧ ಯಾರೇ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಗೆಲ್ಲೋದು ನಾನೇ ಎಂದು ಕಾಂಗ್ರೆಸ್'ನ ಜಮೀರ್ ಅಹಮದ್ ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್ ಖಾನ್, ನಾನು ನಾಲ್ಕೂವರೆ ಅಡಿ ಇರುವುದಾಗಿ ಅಲ್ತಾಫ್ ಖಾನ್ ಟೀಕಿಸಿದ್ದಾರೆ. ಹಾಗಾದರೆ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಹೈಟ್ ಎಷ್ಟು? ಅವರದ್ದೂ ನಾಲ್ಕು ಅಡಿ. ಆದರೆ ಅಮಿತಾಬ್ ಬಚನ್ 6 ಅಡಿ ಎತ್ತರ ಇದ್ದಾರೆ. ಆದರೂ ಅಮಿತಾಬ್'ಗಿಂತ ಸಚಿನ್ ಫೇಮಸ್ ಅಲ್ವಾ? ಎಂದು ಪ್ರಶಿಸಿದರಲ್ಲದೆ, ಅಲ್ತಾಫ್ ಖಾನ್ 6 ಅಡಿ ಎತ್ತರ ಇದ್ದರೇನಂತೆ, ನಾನು ಸಚಿನ್ ತರಹ ಫೇಮಸ್ಸು ಎಂದು ಜಮೀರ್ ಅಹಮದ್ ಖಾನ್ ಟಾಂಗ್ ನೀಡಿದರು.
ಯಾರು ಈ ಜಮೀರ್ ಅಹಮದ್ ಖಾನ್? ಹೆಚ್.ಡಿ.ದೇವೇಗೌಡರು ಖಾನ್ ವಿರುದ್ಧ ಗರಂ ಆಗಿರೋದ್ಯಾಕೆ?
ನನ್ನ ಎದುರು ಕರ್ನಾಟಕ ಮುಸ್ಲಿಂ ಸಾಕಾಗಲ್ಲ. ಜಮ್ಮು -ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಕರೆಸಿ ನನ್ನ ವಿರುದ್ಧ ಚುನಾವಣೆಗೆ ನಿಲ್ಲಿಸಿದರೂ ನಾನೇ ಗೆಲ್ಲುತ್ತೇನೆ ಎಂದು ಜಮೀರ್ ವಿಶ್ವಾಸ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ಚಿನ್ನದ ವ್ಯಾಪರ ಮಾಡಿಕೊಂಡು ದೇವೇಗೌಡರ ಮಕ್ಕಳ ಜೊತೆ ಇದ್ದು, ಎಂಎಲ್ ಸಿ ಆದರೂ ನಾನು ಚುನಾವಣೆಯಲ್ಲಿ ಸೋತರೇ ನನ್ನ ಕತ್ತು ಕತ್ತರಿಸಿ ನಿಮ್ಮ ಮುಂದೆ ಇಡುತ್ತೇನೆ. ನಾನೇದರೂ ಅಲ್ತಾಫ್ ಖಾನ್ ಕಾಲು ಹಿಡಿದುಕೊಂಡು ಸಹಾಯ ಕೇಳಿದ್ದು ಸಾಬೀತಾದರೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದರಲ್ಲದೆ, ನನ್ನ ವಿರುದ್ಧ 300ಕೋಟಿ ರೂ.ಗಳಷ್ಟೇ ಅಲ್ಲ, 1000 ಕೋಟಿ ರೂ.ಗಳ ಅಕ್ರಮ ಆಸ್ತಿ ಆರೋಪ ಇದ್ದರೂ ಪರವಾಗಿಲ್ಲ, ಸಿಬಿಐ ಮುಉಲ್ಕ ತನಿಖೆ ನಡೆಸಲಿ ಎಂದು ಜಮೀರ್ ಅಹಮದ್ ಖಾನ್ ಸವಾಲು ಹಾಕಿದರು.
ಬೆಂಗಳೂರಿನ ವ್ಯಕ್ತಿಗೆ ಸರಿಸಮನಾದ ಕುಸ್ತಿಪಟುವನ್ನು ನಾಳೆ ತಿಳಿಸುತ್ತೇನೆ : ಹೆಚ್.ಡಿ.ದೇವೇಗೌಡ
ಜೆಡಿಎಸ್ ಬಂಡಾಯ ಶಾಸಕರಾಗಿದ್ದ ಜಮೀರ್ ಅಹಮದ್ ಖಾನ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದು, ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಇವರಿಗೆ ವಿರುದ್ಧವಾಗಿ ಆ ಕ್ಷೇತ್ರದಲ್ಲಿ ಜೆಡಿಎಸ್ ಅಲ್ತಾಫ್ ಖಾನ್ ಅವರನ್ನು ಕಣಕ್ಕಿಳಿಸುವುದಾಗಿ ಇಂದು ಘೋಷಿಸಿತ್ತು.
ಜೆಡಿಎಸ್ ಸೇರ್ಪಡೆಗೊಂಡ ಅಲ್ತಾಫ್ ಖಾನ್
ಈ ಸಂದರ್ಭದಲ್ಲಿ ಮಾತನಾಡಿದ ಅಲ್ತಾಫ್ ಖಾನ್, "10 ವರ್ಷಗಳ ಹಿಂದೆ, ಚಾಮರಾಜಪೇಟೆಗೆ ಬಂದಾಗ, ಜಮೀರ್ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನಾನು ಬಲ್ಲೆ. ಜಮೀರ್ ಅವರು 300 ಕೋಟಿ ರೂ. ಆಸ್ತಿ ಮಾಡಿದ್ದಾರೆ. ಕೆ.ಆರ್. ಮಾರ್ಕೆಟ್ನಲ್ಲಿ 10 ಅಂಗಡಿಗಳನ್ನು ಅಕ್ರಮವಾಗಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದರಲ್ಲದೆ ದಾಖಲೆ ಬಿಡುಗಡೆ ಮಾಡುವುದಾಗಿ ಜಮೀರ್ ಅಹಮದ್ ಖಾನ್'ಗೆ ಸವಾಲು ಹಾಕಿದ್ದರು.