ಬೆಂಗಳೂರು: ನನಗೆ ಸಿಕ್ಕಿರುವ ರಾಷ್ಟ್ರಪ್ರಶಸ್ತಿ ವಾಪಸ್ ನೀಡಲು ನಾನು ಮೂರ್ಖ ಅಲ್ಲ ಎಂದು ಪ್ರತಿಕ್ರಿಯಿಸುವ ಮೂಲಕ ರಾಷ್ಟ್ರ ಪ್ರಶಸ್ತಿ ವಾಪಸ್ ನೀಡುತ್ತಾರೆಂಬ ಸುದ್ದಿಗೆ ಪ್ರಕಾಶ್ ರೈ ಸ್ಪಷ್ಟನೆ ನೀಡಿದ್ದಾರೆ.
ನನ್ನ ಪ್ರತಿಭೆ ಗೌರವಿಸಿ ಸಿಕ್ಕಿರುವ ರಾಷ್ಟ್ರ ಪ್ರಶಸ್ತಿಗಳನ್ನು ನಾನು ವಾಪಸ್ ಏಕೆ ನೀಡಲಿ, ಈ ರೀತಿ ಹರಡಿರುವ ಸುದ್ದಿಗಳೆಲ್ಲವೂ ಸುಳ್ಳು ಎಂದು ಬಹುಭಾಷಾ ನಟ ಪ್ರಕಾಶ್ ರೈ ಸ್ಪಷ್ಟನೆ ನೀಡಿದ್ದಾರೆ.
ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಬಗೆಗಿನ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ರೈ, ಗೌರಿ ಹತ್ಯೆ ಪ್ರಕರಣ ಕುರಿತಾಗಿ ಡಿವೈಎಫ್ಐ ಸಮ್ಮೇಳನದ ಭಾಷಣದಲ್ಲಿ ಹತ್ಯೆ ನಂತರದಲ್ಲಿ ಕೆಲವರಿಂದ ಸಾಮಾಜಿಕ ಜಾಲ ತಾಣದಲ್ಲಿ ಕೆಲವರು ಸಂಭ್ರಮಿಸುತ್ತಿದ್ದಾರೆ, ಅಲ್ಲದೆ ಆ ವಿಕೃತ ವ್ಯಕ್ತಿಗಳೆಲ್ಲಾ ಪ್ರಧಾನಿ ಅವರಿಗೆ ಟ್ವಿಟ್ಟರ್ ನಲ್ಲಿ ಫಾಲ್ಲೋವೆರ್ಸ್. ಇಷ್ಟೆಲ್ಲಾ ನೋಡಿಕೊಂಡು ಪ್ರಧಾನಿ ಏಕೆ ಮೌನವಾಗಿದ್ದಾರೆಂದು ಪ್ರಧಾನಿ ಮೋದಿ ಅವರ ಮೌನವನ್ನು ನಾನು ನನ್ನ ಭಾಷಣದಲ್ಲಿ ಪ್ರಶ್ನಿಸಿದ್ದೆ ಎಂದು ರೈ ಸ್ಪಷ್ಟೀಕರಿಸಿದ್ದಾರೆ.
ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿಲ್ಲ ಎಂದು ಹೇಳಿದ ರೈ, ನನ್ನ ಪ್ರಧಾನಿಗೆ ನಾನು ನನ್ನ ಭಾಷಣದಲ್ಲಿ ಪ್ರಶ್ನೆ ಹಾಕಿದ್ದು ಸರಿಯಷ್ಟೇ ಆದರೆ ಪ್ರಶಸ್ತಿ ವಾಪಸ್ ನಿದುತ್ತೆನೆಂಬ ಸುದ್ದಿ ಕೇಳಿ ನಕ್ಕಿದ್ದೇನೆ. ಪ್ರಧಾನಿ ಅವರ ಮೌನ ನಡೆ ನನಗೆ ತುಂಬಾ ನೋವುಂಟು ಮಾಡಿದೆ ಎಂದು ತಿಳಿಸಿದರು.
What's said...n what's not said. For all out there .. thank you pic.twitter.com/zIT7rnkFxb
— Prakash Raj (@prakashraaj) October 2, 2017
ಉತ್ತರ ಪ್ರದೇಶದಲ್ಲಿ ಚೀಫ್ ಮಿನಿಸ್ತ್ರಾ or ದೇವಸ್ಥಾನದ ಪೂಜಾರಿನಾ? ಎಂದು ನಾನು ಒಂದು ವಿಡಿಯೋ ಪ್ರಸ್ತಾಪಿಸುತ್ತಾ ಹೇಳಿದ್ದು, ಯೋಗಿ ನಟನೆ ನೋಡಿದರೆ, ಅವರು ಡಬಲ್ ರೋಲ್ ಮಾಡುತ್ತಿದ್ದಾರೆ ಗೊತ್ತಾಗ್ತಿಲ್ಲಾ. ಯೋಗಿ ನಟನೆ ನೋಡಿದರೆ ನನ್ನ ಪ್ರಶಸ್ತಿ ಅವರಿಗೆ ಕೊಡಬೇಕೆಂದು ನನ್ನ ಅನಿಸಿಕೆ ಎಂದು ನಾವು ವ್ಯಂಗ್ಯವಾಗಿ ಹೇಳಿದ್ದನ್ನು ಗಂಭೀರವಾಗಿ ಏಕೆ ಪರಿಗಣಿಸಿದ್ದೀರೆಂದು ರೈ ಪ್ರಶ್ನಿಸಿದರು.