SSLC Exam 2021 : 'SSLC' ಪರೀಕ್ಷೆ 2021 ಬರೆಯುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ!

ಎಸ್‌ಎಸ್‌ಎಲ್‌ಸಿ ​2021ರ ಮುಖ್ಯ ಪರೀಕ್ಷೆಯ ಮಕ್ಕಳ ಕೇಂದ್ರ ಬದಲಾವಣೆ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಪರೀಕ್ಷಾ ಕೇಂದ್ರ ಬದಲಾವಣೆಯ ಮಾಹಿತಿಯನ್ನು ದಿನಾಂಕ 25-06-2021ರ ಒಳಗಾಗಿ ಆನ್ ಲೈನ್ ಮೂಲಕ ಮಾಹಿತಿ ದಾಖಲಿಸುವಂತೆ ಸೂಚಿಸಿದೆ.

Last Updated : Jun 22, 2021, 10:48 AM IST
  • ಎಸ್‌ಎಸ್‌ಎಲ್‌ಸಿ ​2021ರ ಮುಖ್ಯ ಪರೀಕ್ಷೆ
  • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ
  • ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಪರೀಕ್ಷಾ ಕೇಂದ್ರ ಬದಲಾವಣೆಯ ಮಾಹಿತಿ
SSLC Exam 2021 : 'SSLC' ಪರೀಕ್ಷೆ 2021 ಬರೆಯುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ! title=

ಬೆಂಗಳೂರು : ಎಸ್‌ಎಸ್‌ಎಲ್‌ಸಿ ​2021ರ ಮುಖ್ಯ ಪರೀಕ್ಷೆಯ ಮಕ್ಕಳ ಕೇಂದ್ರ ಬದಲಾವಣೆ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಪರೀಕ್ಷಾ ಕೇಂದ್ರ ಬದಲಾವಣೆಯ ಮಾಹಿತಿಯನ್ನು ದಿನಾಂಕ 25-06-2021ರ ಒಳಗಾಗಿ ಆನ್ ಲೈನ್ ಮೂಲಕ ಮಾಹಿತಿ ದಾಖಲಿಸುವಂತೆ ಸೂಚಿಸಿದೆ.

ಈ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(Karnataka Secondary Education Examination Board)ಯ ನಿರ್ದೇಶಕಿ ಸುಮಂಗಲ ವಿ ಅವರು ರಾಜ್ಯದ ಎಲ್ಲಾ ಉಪ ನಿರ್ದೇಶಕರು, ಜಿಲ್ಲಾ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿಗಳು, ಉಪನಿರ್ದೇಶಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಶಾಲಾ ಮುಖ್ಯಸ್ಥರಿಗೆ ಪತ್ರ ಬರೆದಿದ್ದು, ಕೋವಿಡ್-19 ಹಿನ್ನಲೆಯಲ್ಲಿ ಎಸ್‌ಎಸ್‌ಎಲ್‌ಸಿ 2021ರ ಮುಖ್ಯ ಪರೀಕ್ಷೆಯನ್ನು ಮುಂದೂಡಿರುವುದರಿಂದ ಮುಂದಿನ ದಿನಗಳಲ್ಲಿ ಪರೀಕ್ಷೆಯನ್ನು ನಡೆಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ.

ಇದನ್ನೂ ಓದಿ : ಸಂವಿಧಾನದ ಮೌಲ್ಯಗಳನ್ನು ಸಾರಿದ ವಿವಾಹ

ಕೋವಿಡ್-19(COVID-19) ಹಿನ್ನಲೆಯಲ್ಲಿ ವಲಸಿ ಕಾರ್ಮಿಕರು, ವಸತಿ ಶಾಲೆಯಲ್ಲಿದ್ದಂತಹ ವಿದ್ಯಾರ್ಥಿಗಳು ಹಾಗೂ ಹಾಸ್ಟೆಲ್ ಗಳ ವಿದ್ಯಾರ್ಥಿಗಳು ತಮ್ಮ ಸ್ವಂತ ಊರುಗಳಿಗೆ ತೆರಳಿರುವುದು ಗಮನಕ್ಕೆ ಬಂದಿರುತ್ತದೆ. ಸದರಿ ಕಾರ್ಮಿಕರ ಮಕ್ಕಳು ಹಾಗೂ ವಸತಿ ಶಾಲೆಯಲ್ಲಿದ್ದಂತಹ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು, ತಾವು ಮರಳಿ ಹೋಗಿರುವ ಸ್ವ ಗ್ರಾಮ, ಪ್ರದೇಶದ ಹತ್ತಿರದ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕಾಗಿರುತ್ತದೆ. ಇಂತಹ ವಿದ್ಯಾರ್ಥಿಗಳಿಗೆ ಆಯ್ಕೆ ಮಾಡಿಕೊಂಡಿರುವ ಕೇಂದ್ರದಲ್ಲಿ ಆಸನದ ಮತ್ತು ಪ್ರಶ್ನೆ ಪತ್ರಿಕೆಯ ವ್ಯವಸ್ಥೆ ಕಲ್ಪಿಸಬೇಕಾಗಿರುವುದರಿಂದ, ಈ ಮಾಹಿತಿಯನ್ನು ಪಡೆಯಲು ತಂತ್ರಾಂಶವನ್ನು ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ : ಕರಾವಳಿ, ಮಲೆನಾಡಿನಲ್ಲಿ ಮುಂಗಾರು ಮಳೆ ಬಿರುಸು, 24 ಗಂಟೆ ಭರ್ಜರಿ ಮಳೆಯ ಮುನ್ಸೂಚನೆ

ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯ ಶಿಕ್ಷಕರು ಅವರ ಶಾಲೆ(School)ಯಲ್ಲಿನ ವಲಸೆ ಕಾರ್ಮಿಕರ ಮಕ್ಕಳು ವಸತಿ ಶಾಲೆಗಳ ಹಾಗೂ ಹಾಸ್ಟೆಲ್ ಗಳ ವಿದ್ಯಾರ್ಥಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಅವರ ಮೂಲಕ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ಬದಲಾಗಿ, ತಮ್ಮ ಮೂಲ ಜಿಲ್ಲೆ, ತಾಲೂಕಿನ ಯಾವ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಇಚ್ಛಿಸಿದ್ದಾರೆ ಎನ್ನುವ ಮಾಹಿತಿ ಪಡೆದು ಶಾಲಾ ಲಾಗಿನ್ ನಲ್ಲಿ ನಮೂದಿಸುವುದು. ಮಂಡಳಿಯ ಜಾಲತಾಣ https://sslc.karnataka.gov.in/ ನ ಶಾಲಾ ಲಾಗಿನ್ ನಲ್ಲಿ ತಂತ್ರಾಂಶ ಭ್ಯವಿದೆ.

ಇದನ್ನೂ ಓದಿ : Ration Card: ಮನೆಯಲ್ಲಿಯೇ ಕುಳಿತು ರೇಷನ್ ಕಾರ್ಡ್‌ನಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸಲು ಇದು ಸುಲಭ ಪ್ರಕ್ರಿಯೆ

ಈಗಾಗಲೇ ಪ್ರವೇಶ ಪತ್ರ(Hall Ticket)ಗಳನ್ನು ಡೌನ್ ಲೋಡ್ ಮಾಡಿಕೊಂಡಿರುವ ತಂತ್ರಾಂಶದ ಯೂಸರ್ ನೇಮ್ ಹಾಗೂ ಪಾಸ್ ವರ್ಡ್ ಗಳನ್ನು ಬಳಸಿ, ಕೇಂದ್ರ ಬದಲಾವಣೆಯ ಮಾಹಿತಿಯನ್ನು ಕೀಲೀಕರಿಸಲು ಬಳಸುವುದು.
ಲಾಗಿನ್ ಆದ ನಂತ್ರ ಮೊದರು Reallocation of Centers For migrants and Hostelites ಮೇಲೆ ಕ್ಲಿಕ್ ಮಾಡಬೇಕು. ಆನಂತ್ರ ತೆರೆಯಲಾಗುವ ವೆಬ್ ಪೇಜ್ ನ ಎಸ್ ಎ ಟಿ ಎಸ್ ಮೆನುವಿನ ಡ್ರಾಪ್ ಡೌನ್ ನಲ್ಲಿ ವಿದ್ಯಾರ್ಥಿಯ ಎಸ್ ಎ ಟಿ ಎಸ್ ಮತ್ತು ವಿದ್ಯಾರ್ಥಿಯ ಹೆಸರನ್ನು ಆಯ್ಕೆ ಮಾಡಿಕೊಳ್ಳುವುದು. ಆಗ ವಿದ್ಯಾರ್ಥಿಯ ಮಾಹಿತಿಗಳು ಹಾಗೂ ವಿದ್ಯಾರ್ಥಿಯ ಪ್ರಸ್ತುತ ಪರೀಕ್ಷಾ ಕೇಂದ್ರದ ವಿವರ Display ಆಗುತ್ತದೆ. New Examination Center Selection ಅಡಿಯಲ್ಲಿ ವಿದ್ಯಾರ್ಥಿ ಪರೀಕ್ಷೆ ಬರೆಯಲು ಇಚ್ಛಿಸುವ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ : ಲಾಕ್ ಡೌನ್ ನಲ್ಲಿ ಮತ್ತಷ್ಟು ಸಡಿಲಿಕೆ ಘೋಷಿಸಿದ ರಾಜ್ಯ ಸರ್ಕಾರ

ಜಿಲ್ಲಾ ಹೆಸರು, ತಾಲೂಕು ಹೆಸರು ಆಯ್ಕೆ ಮಾಡಿಕೊಂಡಲ್ಲಿ, ಆ ತಾಲೂಕಿನ ಕೇಂದ್ರ ಸಂಕೇತ ಮತ್ತು ಕೇಂದ್ರದ ಹೆಸರುಗಳು ಡ್ರಾಪ್ ಮನೆವಿನಲ್ಲಿ ಡಿಸ್ ಪ್ಲೇ ಆಗುತ್ತವೆ. ವಿದ್ಯಾರ್ಥಿ(Students)ಯು ಇಚ್ಛಿಸುವ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡ ನಂತ್ರ, ಕೇಂದ್ರದ ಸಾಮರ್ಥ್ಯ ಆ ಕೇಂದ್ರಕ್ಕೆ ಹಂಚಿಕೆಯಾಗಿರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಆ ಕೇಂದ್ರದಲ್ಲಿ ಲಭ್ಯವಿರುವ ಆಸನಗಳ ಸಂಖ್ಯೆ ಡಿಸ್ ಪ್ಲೇ ಆಗುತ್ತದೆ. ಆ ಪರೀಕ್ಷಾ ಕೇಂದ್ರದಲ್ಲಿ ಆಸನಗಳು ಲಭ್ಯವಿದ್ದಲ್ಲಿ, ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡು ಸೇವ್ ಬಟನ್ ಮೇಲೆ ಕ್ಲಿಕ್ಕಿಸುವುದು. ಒಂದು ವೇಳೆ ಆಸನಗಳ ಸಂಖ್ಯೆ ಭರ್ತಿ ಆಗಿದ್ದಲ್ಲಿ, ವಿದ್ಯಾರ್ಥಿಯು ಸಮೀಪದ ಬೇರೆ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕಾಗಿರುತ್ತದೆ.

ಇದನ್ನೂ ಓದಿ : Unlock 2.O Karnataka : ರಾಜ್ಯದಲ್ಲಿ ಸೋಮವಾರದಿಂದ 'ಸಾರಿಗೆ ಸಂಚಾರ ಆರಂಭ'..!

ವಿದ್ಯಾರ್ಥಿಯು ಹೊಸ ಕೇಂದ್ರವನ್ನು ಆಯ್ಕೆ ಮಾಡಿಕೊಂಡಲ್ಲಿ, ಮತ್ತೊಮ್ಮೆ ಬದಲಾವಣೆಗೆ ಅವಕಾಶವಿರುವುದಿಲ್ಲ ಹಾಗೂ ಹಳೇ ಕೇಂದ್ರದಲ್ಲಿ ಪರೀಕ್ಷೆ(Exam) ಬರೆಯಲು ಸಹ ಸಾಧ್ಯವಿರುವುದಿಲ್ಲ.
ಆಯಾ ಶಾಲೆಯಲ್ಲಿ ಹೊಸ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ನೀಡಲಾಗಿದ್ದು, ಶಾಲೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಹೊಸ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿಕೊಂಡಿರುತ್ತಾರೆ ಎಂದು ಪರಿಶೀಲಿಸಬಹುದಾಗಿದೆ.

ಇದನ್ನೂ ಓದಿ : Karnataka Congress : ಮಕ್ಕಳಿಗೆ 'ಟ್ಯಾಬ್ಲೆಟ್' ಗೆಲ್ಲುವ ಸುವರ್ಣ ಅವಕಾಶ ನೀಡಿದ ಕಾಂಗ್ರೆಸ್..!

ವಿದ್ಯಾರ್ಥಿಗಳು ಬದಲಾದ ಪರೀಕ್ಷಾ ಕೇಂದ್ರವು ನಮೂದಾಗಿರುವ ಪ್ರವೇಶ ಪತ್ರವನ್ನು ತಾವು ಅಭ್ಯಾಸ ಮಾಡಿದ ಶಾಲೆ, ಬದಲಾದ ಪರೀಕ್ಷಾ ಕೇಂದ್ರವಿರುವ ಬ್ಲಾಕ್ ನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪಡೆಯಬಹುದಾಗಿದೆ. ಈ ಮೇಲ್ಕಂಡ ಮಾಹಿತಿಯು ಪರೀಕ್ಷೆ ನಡೆಸಲು ಅತ್ಯವಶ್ಯಕವಾಗಿರುವುದರಿಂದ, ದಿನಾಂಕ 25-06-2021ರೊಳಗೆ ಆನ್ ಲೈನ್ ನಲ್ಲಿ ಮಾಹಿತಿಯನ್ನು ಕಡ್ಡಾಯವಾಗಿ ಕೀಯಿಂಗ್ ಮಾಡಲು ಮುಖ್ಯ ಶಿಕ್ಷಕರಿಗೆ ಸೂಚಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News