prajwal revanna court case: ಅಣ್ಣ ಸೂರಜ್ ನನ್ನು ಸಿಐಡಿ ಅಧಿಕಾರಿಗಳು 8 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸ್ತಾ ಇದ್ದಾರೆ,ಇಂದು ಎಸ್.ಐ.ಟಿ ಅಧಿಕಾರಿಗಳು ಪೆನ್ ಡ್ರೈವ್ ಪ್ರಕರಣದ ಆರೋಪಿ ಪ್ರಜ್ವಲ್ ನನ್ನು ನಾಲ್ಕು ದಿನ ಕಸ್ಟಡಿಗೆ ಪಡೆದು ಸಿಐಡಿ ಕಚೇರಿಗೆ ಕರೆತಂದಿದ್ದಾರೆ.ಒಂದೇ ಕಟ್ಟಡದ ಎರಡು ಕೊಠಡಿಯಲ್ಲಿ ಅಣ್ಣ ತಮ್ಮ ಮಾತಿಲ್ಲದೇ ವಿಚಾರಣೆ ಎದುರಿಸುವಂತಾಗಿದೆ.
ಅತ್ಯಾಚಾರ ಪ್ರಕರಣ ಆರೋಪಿ ಪೆನ್ ಡ್ರೈವ್ ಪ್ರಜ್ವಲ್ ಕೇಸ್ ಇದೀಗ ಹಾಸನದ ಮಾಜಿ ಶಾಸಕ ಹಾಗೂ ಶಿಷ್ಯಂದಿರಿಗೆ ಸುತ್ತಿಕೊಂಡಿದ್ದೆ. ಪೆನ್ ಡ್ರೈವ್ ಕೇಸ್ ನಲ್ಲಿ ಹಾಸನ ಮಾಜಿ ಶಾಸಕ ಹಾಗು ಶಿಷ್ಯಂದಿರ ಮೇಲೆ ಎಫ್.ಐ.ಆರ್ ದಾಖಲಾಗಿದೆ.
ಇದನ್ನೂ ಓದಿ-ಕಲಬುರಗಿ ಹೊಟೆಲ್ ನಲ್ಲಿ ಸಿಲಿಂಡರ್ ಸ್ಫೋಟ, 10 ಜನರಿಗೆ ಗಂಭೀರ ಗಾಯ
ಪೆನ್ ಡ್ರೈವ್ ಹಂಚಿಕೆ ಆರೋಪದಡಿಯಲ್ಲಿ ಪ್ರೀತಂ ಗೌಡ ಶಿಷ್ಯಂದಿರಾದ ,ಕ್ವಾಲಿಟಿ ಬಾರ್ ಶರತ್, ಕಿರಣ್ ವಿರುದ್ಧ ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಪ್ರಕರಣದಲ್ಲಿ ಪ್ರೀತಂ ಗೌಡ ಅವರನ್ನು ಎ೪ ಆರೋಪಿಯನ್ನಾಗಿ ಮಾಡಿದ್ದಾರೆ. ಇನ್ನು ಪ್ರೀತಂಗೌಡ , ಶಿಷ್ಯಂದಿರಾದ ಕಿರಣ್ , ಕ್ವಾಲಿಟಿ ಬಾರ್ ಶರತ್ ಮೇಲೆ ಐಪಿಸಿ ಸೆಕ್ಷನ್ ೩೫೬ಎ , ೩೫೪ಬಿ, ೫೫೪ಡಿ, ೬೬ಇ ಐಟಿ ಆಕ್ಟ್ ಅಡಿಯಲ್ಲಿ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.ಪ್ರಕರಣ ಸಂಬಂದ ಮಾಜಿ ಶಾಸಕ ಹಾಗೂ ಶಿಷ್ಯಂದಿರಿಗೆ ಎಸ್ ಐಟಿ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆ ಮಾಡಲು ಮುಂದಾಗಿದ್ದಾರೆ. ಇನ್ನು ಪ್ರಜ್ವಲ್ ನನ್ನು ನಾಲ್ಕನೇ ಪ್ರಕರಣದಲ್ಲಿ ವಿಚಾರಣೆ ನಡೆಸಿ ಇನ್ನುಳಿದ ಆರೋಪಿಗಲ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಿದ್ದಾರೆ..
ಒಟ್ಟಾರೆ ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಎಫ್ ಐಆರ್ ದಾಖಲಾಗಿದ್ದು. ನಾಲ್ಕನೇ ಎಫ್ ಐ ಆರ್ ನಲ್ಲಿ ಮತ್ತೆ ಎಸ್ ಐಟಿ ಅಧಿಕಾರಿಗಳು ಆರೋಪಿ ಪ್ರಜ್ವಲ್ ನನ್ನ ನಾಲ್ಕು ದಿನ ಕಸ್ಟಡಿಗೆ ಪಡೆದಿದ್ದು ವಿಚಾರಣೆ ಮಾಡಲು ಮುಂದಾಗಿದ್ದಾರೆ. ಮತ್ತೊಂದೆಡೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಲಾಕ್ ಆಗಿರುವ ಸೂರಜ್ ಗೆ ಸಿಐಡಿ ಅಧಿಕಾರಿಗಳು ಲೆಫ್ಟ್ ರೈಟ್ ತೆಗೆದುಕೊಂಡು ಬಾಯ್ಬಿಡಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ-ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.