ಬಿಎಂಟಿಸಿ ಮೊರೆಹೋದ ಸಿಲಿಕಾನ್ ಸಿಟಿಯ ಐಟಿ-ಬಿಟಿ, ಎಂ ಎನ್ ಸಿ ಕಂಪನಿಗಳು

ಬಿಎಂಟಿಸಿ ಸೇವೆಯತ್ತ ಆಸಕ್ತಿ ತೋರಿದ ಸಿಲಿಕಾನ್ ಸಿಟಿಯ ಐಟಿ-ಬಿಟಿ, ಎಂ.ಎನ್.ಸಿ ಕಂಪನಿಗಳು.

Last Updated : Oct 11, 2017, 06:14 PM IST
ಬಿಎಂಟಿಸಿ ಮೊರೆಹೋದ ಸಿಲಿಕಾನ್ ಸಿಟಿಯ ಐಟಿ-ಬಿಟಿ, ಎಂ ಎನ್ ಸಿ ಕಂಪನಿಗಳು  title=
Pic: DNA

ಬೆಂಗಳೂರು: ಐಟಿ-ಬಿಟಿ, ಎಂ.ಎನ್.ಸಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಟ್ಯಾಕ್ಸಿ ಸೇವೆ ಬದಲು ಬಿಎಂಟಿಸಿ ಸೇವೆ ನೀಡುವ ಬಗ್ಗೆ ಮಾತುಕತೆ ನಡೆಸಿವೆ.

ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಇಂದು ಸಂಜೆ 4 ಗಂಟೆಗೆ ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ಜೊತೆ ಸಭೆ ನಡೆಸಿದ ನಗರದ ನೂರಾರು ಐಟಿ-ಬಿಟಿ ಕಂಪನಿಗಳ ಮುಖ್ಯಸ್ಥರು ಕಂಪನಿಗಳಿಗೆ ಬಿಎಂಟಿಸಿ ಬಸ್ಸುಗಳ ಸೇವೆ ಪಡೆಯುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಇಂದಿಗೂ ಸಾವಿರಾರು ಟ್ಯಾಕ್ಸಿ ಸೇವೆ ಪಡೆಯುತ್ತಿರುವ ನಗರದ ಬಹುತೇಕ ಕಂಪನಿಗಳು, ಪ್ರತಿಯೊಬ್ಬ ಉದ್ಯೋಗಿಗೆ ಒಂದೊಂದು ಟ್ಯಾಕ್ಸಿ ನೀಡುತ್ತಿರುವುದರಿಂದ ಕಂಪನಿಗೂ ಹೊರೆ, ಜೊತೆಗೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೆ ಟ್ಯಾಕ್ಸಿ ಸೇವೆಯಿಂದಾಗಿ ಎಲ್ಲಾ ಉದ್ಯೋಗಿಗಳು ನಿಗದಿತ ಸಮಯಕ್ಕೆ ಕಂಪನಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಮೊರೆ ಹೋಗಲಾಗಿದೆ ಎಂದು ತಿಳಿದು ಬಂದಿದೆ.

ಗುಣಮಟ್ಟದ ಬಸ್ಸುಗಳನ್ನು ನೀಡೋ ಬಗ್ಗೆ ಬಿಎಂಟಿಸಿ ಗ್ರೀನ್ ಸಿಗ್ನಲ್ ನೀದಿದೆ. ಬಿಎಂಟಿಸಿ ಜೊತೆಗಿನ ಸಭೆ ಯಶಸ್ವಿಯಾದರೆ ನಗರದ ಟ್ಯಾಕ್ಸಿಗಳಿಗೆ ಹೊಡೆತ ಬೀಳಲಿದೆ. ಆದರೆ, ನಗರದ ವಿಪರೀತ ಟ್ರಾಫಿಕ್ ಜಾಮ್ ಸುಧಾರಿಸಲಿದೆ.

Trending News