Karnataka Congress: 'ಬಿಜೆಪಿ ಸರ್ಕಾರ ಸಾರಿಗೆ ನೌಕರರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ' 

ಸಾರಿಗೆ ನೌಕರರ ಧ್ವನಿ ಹತ್ತಿಕ್ಕುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ. ದುರಾಡಳಿತ ಪ್ರಶ್ನಿಸಿದ ರೈತರ ಮೇಲೆ ಲಾಠಿ ಬೀಸಿದ್ದರು, ಈಗ ಸಾರಿಗೆ ನೌಕರರಿಗೆ ಬೆದರಿಕೆ ಹಾಕುತ್ತಿದ್ದಾರೆ.

Last Updated : Apr 6, 2021, 04:54 PM IST
  • ನಾಳೆ ಸಾರಿಗೆ ನೌಕರರು 6 ನೇ ವೇತನ ಆಯೋಗ ಜಾರಿಗೊಳಿಸುವಂತೆ ನಾಳೆ(ಏಪ್ರಿಲ್ 7) ಮುಷ್ಕರ
  • ಸಾರಿಗೆ ನೌಕರರ ಧ್ವನಿ ಹತ್ತಿಕ್ಕುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ.
  • ದುರಾಡಳಿತ ಪ್ರಶ್ನಿಸಿದ ರೈತರ ಮೇಲೆ ಲಾಠಿ ಬೀಸಿದ್ದರು, ಈಗ ಸಾರಿಗೆ ನೌಕರರಿಗೆ ಬೆದರಿಕೆ ಹಾಕುತ್ತಿದ್ದಾರೆ.
Karnataka Congress: 'ಬಿಜೆಪಿ ಸರ್ಕಾರ ಸಾರಿಗೆ ನೌಕರರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ'  title=

ಬೆಂಗಳೂರು: ನಾಳೆ ಸಾರಿಗೆ ನೌಕರರು 6 ನೇ ವೇತನ ಆಯೋಗ ಜಾರಿಗೊಳಿಸುವಂತೆ ನಾಳೆ(ಏಪ್ರಿಲ್ 7) ಮುಷ್ಕರಕ್ಕೆ ಮುಂದಾಗಿದ್ದಾರೆ. ಈ ಕುರಿತು ರಾಜ್ಯ ಕಾಂಗ್ರೆಸ್ ಬಿಜೆಪಿ ಸರ್ಕಾರವನ್ನ ಕುಟುಕಿದೆ.  

ಸಾರಿಗೆ ನೌಕರರ ಮುಷ್ಕರ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್, ಸಾರಿಗೆ ನೌಕರ(Transport Employees)ರ ಧ್ವನಿ ಹತ್ತಿಕ್ಕುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ. ದುರಾಡಳಿತ ಪ್ರಶ್ನಿಸಿದ ರೈತರ ಮೇಲೆ ಲಾಠಿ ಬೀಸಿದ್ದರು, ಈಗ ಸಾರಿಗೆ ನೌಕರರಿಗೆ ಬೆದರಿಕೆ ಹಾಕುತ್ತಿದ್ದಾರೆ.

ಇದನ್ನೂ ಓದಿ : Sarkari Naukri 2021: 10ನೇ ತರಗತಿ ಪಾಸದವರಿಗೆ KSCCF ಯ ಈ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ವಾಧಿಕಾರಿ ನೀತಿಗಳಿಂದ ಪ್ರಜೆಗಳನ್ನು ಬೆದರಿಸಿ, ದಬ್ಬಾಳಿಕೆ ನಡೆಸಿ ಆಡಳಿತ ನಡೆಸಬಹುದು ಎಂದುಕೊಂಡಿದ್ದರೆ ಅದು ಬಿಜೆಪಿ(BJP)ಯ ಭ್ರಮೆ ಅಷ್ಟೇ ಎಂದು ರಾಜ್ಯ ಸರ್ಕಾರವನ್ನ ಕಾಂಗ್ರೆಸ್ ತಿವಿದಿದೆ.

ಇದನ್ನೂ ಓದಿ : HD Deve Gowda: ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಬಿಡುಗಡೆ!

ಅಲ್ಲದೆ ಈ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ  ಶಿವಕುಮಾರ್(DK Shivakumar), ಬಿಜೆಪಿ ಸರ್ಕಾರಕ್ಕೆ ಯಾವುದನ್ನೂ ನಿಭಾಯಿಸಲು ಆಗುತ್ತಿಲ್ಲ. ಸಾರಿಗೆ ನೌಕರರ ಪ್ರತಿಭಟನೆ, ಹೆಚ್ಚುತ್ತಿರುವ ಕೊರೊನ ಸೋಂಕು, ಚಿತ್ರಮಂದಿರಗಳಲ್ಲಿ ಶೇಕಡಾ 50 ರಷ್ಟು ಅವಕಾಶ ಎನ್ನುವುದು, ಜಿಮ್ ಗಳನ್ನು ಅರೆಬರೆ ತೆರೆದಿರುವುದನ್ನೂ ಸೇರಿ ಯಾವುದನ್ನೂ ವಾಸ್ತವಿಕ ನೆಲೆಗಟ್ಟಿನಲ್ಲಿ ತೀರ್ಮಾನಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : Basavaraj Bommai: 'ಮೀಸಲಾತಿ ಹೆಚ್ಚಿಸಲು 'ಸುಪ್ರೀಂ ಕೋರ್ಟ್' ನಲ್ಲಿ ಅಫಿಡವಿಟ್ ಸಲ್ಲಿಸಲಾಗಿದೆ'

ನಾಳೆ ಸಾರಿಗೆ ನೌಕರರು ಮಾಡುತ್ತಿರುವ ಮುಷ್ಕರ(Transport Employees Strike) ಕಾನೂನುಬಾಹಿರ. ಈ ಕುರಿತು ಮಾರ್ಚ್ 16 ರಂದು ನೌಕರರಿಗೆ ನೋಟಿಸ್ ನೀಡಲಾಗಿತ್ತು. ಅಲ್ಲದೆ ಕೆಲವು ಭಾರಿ ಸಂಧಾನ ಸಭೆ ಕೂಡ ಮಾಡಲಾಗಿದೆ. ಕೋವಿಡ್ ನಿಂದ ಸಾರಿಗೆ ಇಲಾಖೆ ನಷ್ಟದಲ್ಲಿದೆ. ಸಾರಿಗೆ ನೌಕರರಿಗೆ ಸರ್ಕಾರದ ಬೊಕ್ಕಸದಿಂದ  ವೇತನ ನೀಡಲಾಗುತ್ತಿದೆ ಎಂದು ಕೆಎಸ್ ಆರ್ ಟಿಸ್ ಎಂಡಿ ಶಿವಯೋಗಿ ಕಳಸದ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

 

 

 

Trending News