ಚಿಲುಮೆ ಸಂಸ್ಥೆಯ ಅಕ್ರಮ ಡಾಟಾ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಅವಧಿಯಲ್ಲಿ ಡಾಟಾ ಕಳವು ಆಗಿದ್ರೆ ಕ್ರಮ ಜರುಗಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಪ್ತ ವಿಜಯ್ ಮುಳುಗುಂದ ಅವರಿಗೆ ಸಿ ಬಿ ಐ ನೋಟಿಸ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಿರುಕುಳ ಕೊಡಕ್ಕೂ ಒಂದು ಲಿಮಿಟ್ ಇರಬೇಕು ಎಂದು ಕಿಡಿಕಾರಿದರು.
ನಾನು ಸಾಮಾನ್ಯವಾಗಿ ಯಾರ ಹುಟ್ಟುಹಬ್ಬಕ್ಕೂ ಹೋಗೋದಿಲ್ಲ. ನಾನು ಸಿದ್ದರಾಮಯ್ಯ ಜತೆಗೆ ವಿಶೇಷ ಸಂಬಂಧ ಹೊಂದಿದ್ದೇನೆ, ಹಾಗಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಸಿದ್ದರಾಮೋತ್ಸವ ಸಮಾವೇಶದಲ್ಲಿ ಮಾತಾಡುತ್ತಾ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಹೇಳಿದರು. ಒಬ್ಬ ವ್ಯಕ್ತಿಯಾಗಿ ಸಿದ್ದರಾಮಯ್ಯ ಅವರನ್ನು ಇಷ್ಟಪಡುತ್ತೇನೆ. ಸಿದ್ದರಾಮಯ್ಯ ವಿಚಾರಗಳ ಬಗ್ಗೆ ನನ್ನ ಸಹಮತ ಇದೆ. ಇವರು ನಡೆಸಿದ 5 ವರ್ಷಗಳ ಆಡಳಿತ ಬಗ್ಗೆ ನನಗೆ ಹೆಮ್ಮೆ ಇದೆ. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬ ಸಿದ್ದರಾಮಯ್ಯ ಆಲೋಚನೆ ನನಗೆ ಇಷ್ಟ ಅಂತ ಹೇಳಿದ್ರು.
ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಕಾರ್ಯಕ್ರಮದ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದರು. ದೇಶಕ್ಕೆ 75 ವರ್ಷ ಆಗುತ್ತಿರುವ ಹೊತ್ತಲ್ಲೇ ಸಿದ್ದರಾಮಯ್ಯ ಅವರಿಗೂ 75 ವರ್ಷ ಆಗಿದೆ. ಈ ರಾಜ್ಯಕ್ಕೆ ನ್ಯಾಯ ಒದಗಿಸಬೇಕು ಅನ್ನೋದೇ ನಮ್ಮ ಉದ್ದೇಶ. ಕಾಂಗ್ರೆಸ್ ಇತಿಹಾಸವೇ ಈ ದೇಶದ ಇತಿಹಾಸ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು, ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿದ್ರು.
ನಾನು ಸಾಮಾನ್ಯವಾಗಿ ಯಾರ ಹುಟ್ಟುಹಬ್ಬಕ್ಕೂ ಹೋಗೋದಿಲ್ಲ. ನಾನು ಸಿದ್ದರಾಮಯ್ಯ ಜತೆಗೆ ವಿಶೇಷ ಸಂಬಂಧ ಹೊಂದಿದ್ದೇನೆ, ಹಾಗಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಸಿದ್ದರಾಮೋತ್ಸವ ಸಮಾವೇಶದಲ್ಲಿ ಮಾತಾಡುತ್ತಾ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಹೇಳಿದರು. ಒಬ್ಬ ವ್ಯಕ್ತಿಯಾಗಿ ಸಿದ್ದರಾಮಯ್ಯ ಅವರನ್ನು ಇಷ್ಟಪಡುತ್ತೇನೆ. ಸಿದ್ದರಾಮಯ್ಯ ವಿಚಾರಗಳ ಬಗ್ಗೆ ನನ್ನ ಸಹಮತ ಇದೆ. ಇವರು ನಡೆಸಿದ 5 ವರ್ಷಗಳ ಆಡಳಿತ ಬಗ್ಗೆ ನನಗೆ ಹೆಮ್ಮೆ ಇದೆ. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬ ಸಿದ್ದರಾಮಯ್ಯ ಆಲೋಚನೆ ನನಗೆ ಇಷ್ಟ ಅಂತ ಹೇಳಿದ್ರು.
ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಉದ್ಘಾಟಿಸಿದ್ರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯಗೆ ಸನ್ಮಾನ ಮಾಡಲಾಯ್ತು.
ಕಿರುಕುಳ ಕೊಡಿ, ಜೈಲಿಗೆ ಹಾಕಿ ನಮ್ಮ ನಾಯಕರು ಹೋರಾಡುತ್ತಾರೆ. ನಾವು ಅವ್ರ ಜೊತೆಗಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ವೇಳೆ ಮಾತನಾಡಿದ ಡಿಕೆಶಿ, ನ್ಯಾಷನಲ್ ಹೆರಾಲ್ಡ್ ಬಗ್ಗೆ ಅಂದು ಅರುಣ್ ಜೇಟ್ಲಿಯೇ ಸಂಸತ್ನಲ್ಲಿ ಕೇಸು ಏನಿಲ್ಲ ಎಂದಿದ್ದರು ಎಂದಿದ್ದಾರೆ.
ವಿಪಕ್ಷ ನಾಯಕರ ಬಾಯಿ ಮುಚ್ಚಿಸೋದಕ್ಕಾಗಿ ED, IT ದಾಳಿ ಮಾಡ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದಾರೆ. ಬೆಂಗಳೂರಲ್ಲಿ ನಡೆದ ಬಿಜೆಪಿ ನಾಯಕರ ಪ್ರತಿಭಟನೆ ವೇಳೆ ಮಾತನಾಡಿದ ಡಿಕೆಶಿ ಕೇಂದ್ರ ಸರ್ಕಾರದ ನಡೆ ಖಂಡಿಸಿದ್ದಾರೆ.
ಸೋನಿಯಾ, ರಾಹುಲ್ ಗಾಂಧಿ ಜೊತೆ ದೇಶದ ಜನ ಇದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಡಿಕೆಶಿ, ಗಾಂಧಿ ಕುಟುಂಬ ದೇಶಕ್ಕೆ ಗುಲಾಮರು. ಹಾಗಾಗಿ ನಾವು ಗಾಂಧಿ ಕುಟುಂಬಕ್ಕೆ ಗುಲಾಮರೇ ಎಂದು ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ, ಡಿ.ಕೆ.ಶಿವಕುಮಾರ್, ಸೋನಿಯಾ ಗಾಂಧಿ, ಬಿಜೆಪಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.