COVID 19 ರೋಗಿಗೆ ಆಸ್ಪತ್ರೆ ವಿಧಿಸಿದ ಬಿಲ್ ಕೇಳಿ ಸಚಿವರೇ ಕಂಗಾಲು

ಕೊರೊನಾ ರೋಗಿ ಕಂಗಾಲಾಗುವಂತೆ ಬಿಲ್ ವಿಧಿಸಿರುವುದು ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆ. 

Last Updated : Jul 29, 2020, 11:44 AM IST
COVID 19 ರೋಗಿಗೆ ಆಸ್ಪತ್ರೆ ವಿಧಿಸಿದ ಬಿಲ್ ಕೇಳಿ ಸಚಿವರೇ ಕಂಗಾಲು title=
File Image

ಬೆಂಗಳೂರು: ಕಂಡು ಕೇಳರಿಯದ COVID 19 ರೋಗ ಬಂತು ಎಂದಾಗಲೇ ಜನ ದಿಗಿಲಾಗುತ್ತಿದ್ದಾರೆ. ಈ ಮಾರಕ ಕಾಯಿಲೆಗೆ ಮದ್ದಿಲ್ಲ ಎಂಬ ಸಂಗತಿ ಇನ್ನಷ್ಟು ಕಂಗೆಡಿಸಿದೆ. ಇದರ ಜೊತೆಗೀಗ ಬಡವರಿಗೆ  ಕೋವಿಡ್ -19 (COVID-19)  ಸೋಂಕು ತಗುಲಿ ಆಸ್ಪತ್ರೆ ಸೇರಿದರೆ ಬಿಲ್ ಕೇಳಿ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ‌. ಆಸ್ಪತ್ರೆಯ ಬಿಲ್ ಗೆ ಪಾಮರರಿರಲಿ, ಸ್ವತಃ ಸಚಿವರೇ ಬೆಚ್ಚಿಬಿದ್ದಿದ್ದಾರೆ.

ಈ ರೀತಿ ಆಸ್ಪತ್ರೆ ಬಿಲ್ ಕೇಳಿ ಬೆಚ್ಚಿ ಬಿದ್ದಿರುವವರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ‌‌. ಸುಧಾಕರ್ (Dr K Sudhakar). ಕೊರೊನಾ ರೋಗಿ ಕಂಗಾಲಾಗುವಂತೆ ಬಿಲ್ ವಿಧಿಸಿರುವುದು ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆ. ಈ ಆಸ್ಪತ್ರೆ  ಕರೋನವೈರಸ್ (Coronavirus) COVID-19 ರೋಗಿಗೆ ವಿಧಿಸಿರುವ ಬಿಲ್ ಬರೊಬ್ಬರಿ 5 ಲಕ್ಷ.

COVID-19 ಲಸಿಕೆಗಳನ್ನು ತಯಾರಿಸುವ ಸ್ಪರ್ಧೆಯಲ್ಲಿ ವಿಶ್ವದ ಯಾವ ದೇಶ ಮುಂದಿದೆ?

ಈ ಬಗ್ಗೆ ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ‌‌. ಸುಧಾಕರ್, 'ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಅನೇಕ ಬಾರಿ ಆ ಆಸ್ಪತ್ರೆಗೆ ವಾರ್ನ್‌ ಮಾಡಿದ್ದೇನೆ. ಆದರೂ ಇಂದು ಕೊರೊನಾ ರೋಗಿಗೆ 5 ಲಕ್ಷ ಬಿಲ್‌ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಆಘಾತವಾಯಿತು' ಎಂದಿದ್ದಾರೆ.

ಇದಲ್ಲದೆ 'ಸರ್ಕಾರದ ಆದೇಶವನ್ನು ಸಂಪೂರ್ಣವಾಗಿ ಗಾಳಿಗೆ ತೂರುತ್ತಿರುವ ಆಸ್ಪತ್ರೆ ಆಡಳಿತ ಮಂಡಳಿ, ನಿಗದಿ ಮಾಡಿರುವ ದರಕ್ಕಿಂತಲೂ ಹೆಚ್ಚು ಹಣ ಪಡೆದಿದೆ. ಈ ವಿಷಯ ನನ್ನ ಗಮನಕ್ಕೆ ಬಂದಿದ್ದುಇಂದು ಆ ಖಾಸಗಿ ಆಸ್ಪತ್ರೆಯ ವಿರುದ್ಧ ಮುಲಾಜಿಲ್ಲದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ' ಎಂದು ಇನ್ನೊಂದು ಟ್ವೀಟಿನಲ್ಲಿ ಎಚ್ಚರಿಸಿದ್ದಾರೆ.
 

Trending News