ಬೆಂಗಳೂರು : ಮೇ 12 ರ ಬಳಿಕೆ ಅಗತ್ಯಬಿದ್ದರೆ ರಾಜ್ಯದಲ್ಲಿ ಕರ್ಪ್ಯೂ ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರ ಜೊತೆ ಮಾತನಾಡಿದ ಸಚಿವ ಆರ್. ಅಶೋಕ್(R Ashok), ರಾಜ್ಯ ಸರ್ಕಾರ ವಿಧಿಸಿರುವ ಕರ್ಪ್ಯೂಗೆ ಜನರು ಸಹಕರಿಸಬೇಕು. ಇಲ್ಲದಿದ್ದರೆ ಕರ್ಪ್ಯೂ ಮುಂದುವರೆಸಲು ನಮಗೆ ಅವಕಾಶವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : "ಸರ್ಕಾರ ಪಾರದರ್ಶಕವಾಗಿಲ್ಲ, ಸಾವಿನ ಸಂಖ್ಯೆಯನ್ನೂ ಮುಚ್ಚಿಡುತ್ತಿದೆ" -ಸಿದ್ಧರಾಮಯ್ಯ
ಇನ್ನು ಮೇ 12 ರವರಿಗೆ ರಾಜ್ಯಾದ್ಯಂತ ಕರ್ಪ್ಯೂ(Curfew) ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಸೇವೆಗಳನ್ನು ಬಂದ್ ಮಾಡಲಾಗಿದೆ.
ಇದನ್ನೂ ಓದಿ : "ಕರ್ನಾಟಕದ ಪರಿಸ್ಥಿತಿ ಗಂಭೀರ, ಸಿಎಂ ಜನರನ್ನು ನಡು ನೀರಲ್ಲಿ ಕೈಬಿಟ್ಟಿದ್ದಾರೆ"
ಇನ್ನು ರಾಜ್ಯಾದ್ಯಂತ ಸೋಮವಾರ ಒಂದೇ ದಿನ 10,663 ಮಂದಿ ವಿವಿಧ ಆಸ್ಪತ್ರೆಗಳಲ್ಲಿ(Hospital) ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಷ್ಟಾದ್ರೂ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,81,042ಕ್ಕೆ ಏರಿಕೆ ಕಂಡಿದೆ. ಈವರೆಗೂ ರಾಜ್ಯದಲ್ಲಿ ಒಟ್ಟು 13,68,945 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದಂತಾಗಿದೆ. ಈ ಪೈಕಿ ಗುಣಮುಖರಾದವರ ಸಂಖ್ಯೆ 10,73,257ಕ್ಕೆ ಏರಿಕೆ ಕಂಡಿದೆ.
ಇದನ್ನೂ ಓದಿ : Lockdown: ಲಾಕ್‌ಡೌನ್ ನಿಂದ ಗಾಭರಿಗೊಂಡ ರಾಜ್ಯ ಜನತೆ : ದಿನಸಿ-ತರಕಾರಿ ಖರೀದಿಗೆ ಮುಗಿ ಬಿದ್ದ ಜನರು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.