ತ್ಯಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಹೊಸ ಪ್ರಾಣಿಗಳ ಸೇರ್ಪಡೆ

ಕೇಂದ್ರಿಯ ಮೃಗಾಲಯ ಪ್ರಾಧಿಕಾರ ನವದೆಹಲಿರವರಿಂದ ಶಿವಮೊಗ್ಗ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಿಂದ ಕೇರಳದ ತಿರುವನಂತಪುರಂನ ಝೋಲಾಜಿಕಲ್ ಪಾರ್ಕ್ ಮೃಗಾಲಯಗಳ ನಡುವೆ ಹೆಚ್ಚುವರಿಯಾಗಿರುವ ಪ್ರಾಣಿಗಳನ್ನು ನ.11 ರಿಂದ ನ.16ರ ವರೆಗೆ ವಿನಿಮಯ ಕಾರ್ಯಕ್ರಮ ನಡೆಸಲಾಗಿದೆ.

Written by - Manjunath N | Last Updated : Nov 19, 2024, 03:50 PM IST
  • ಹುಲಿ-ಸಿಂಹಧಾಮ ತ್ಯಾವರೆಕೊಪ್ಪ ಮೃಗಾಲಯಕ್ಕೆ ಸಂಬಂಧಿಸಿದ ಅನಿಮಲ್ ಕಲೆಕ್ಷನ್ ಪ್ಲಾನ್‌ಗೆ ಮತ್ತೊಂದು ಸೇರ್ಪಡೆಯಾಗಿದೆ.
  • ಗಂಡು ಕತ್ತೆ ಕಿರುಬ ಪ್ರಾಣಿಯನ್ನು ಬ್ಲಡ್‌ಲೈನ್ ಎಕ್ಸಚೆಂಗ್‌ಗಾಗಿ ವಿನಿಮಯ ಮಾಡಿಕೊಳ್ಳಲಾಗಿದೆ.
ತ್ಯಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಹೊಸ ಪ್ರಾಣಿಗಳ ಸೇರ್ಪಡೆ title=

ಶಿವಮೊಗ್ಗ: ಕೇಂದ್ರಿಯ ಮೃಗಾಲಯ ಪ್ರಾಧಿಕಾರ ನವದೆಹಲಿರವರಿಂದ ಶಿವಮೊಗ್ಗ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಿಂದ ಕೇರಳದ ತಿರುವನಂತಪುರಂನ ಝೋಲಾಜಿಕಲ್ ಪಾರ್ಕ್ ಮೃಗಾಲಯಗಳ ನಡುವೆ ಹೆಚ್ಚುವರಿಯಾಗಿರುವ ಪ್ರಾಣಿಗಳನ್ನು ನ.11 ರಿಂದ ನ.16ರ ವರೆಗೆ ವಿನಿಮಯ ಕಾರ್ಯಕ್ರಮ ನಡೆಸಲಾಗಿದೆ.

ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಿಂದ ಮಾರ್ಶ್ ಕ್ರೋಕಡೈಲ್, ಸ್ಟ್ರೀಪಿಡ್ ಹೈನಾ, ಇಂಡಿಯನ್ ಗೋಲ್ಡನ್ ಜಾಕಲ್, ಏ಼ಷೀಯನ್ ಪ್ಲಾಮ್ ಸಿವೀಟ್ ಪ್ರಾಣಿಗಳು ಕೇರಳದ ತಿರುವನಂತಪುರಂನ ಝೋಲಾಜಿಕಲ್ ಪಾರ್ಕ್ಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ರಾತ್ರಿ ಬೆಚ್ಚಗಿನ ನೀರಿನಲ್ಲಿ 1 ಚಮಚ ಅಜವಾನ್ ತಿನ್ನುವುದರಿಂದ ಈ ಕಾಯಿಲೆ ಗುಣಮುಖವಾಗುತ್ತದೆ..!

ಕೇರಳದ ತಿರುವನಂತಪುರಂನ ಝೋಲಾಜಿಕಲ್ ಪಾರ್ಕ್ನಿಂದ ಘಾರಿಯಾಲ, ಲೇಸ್ಸರ್ ರೀಹಾ, ಸ್ಟ್ರೀಪಿಡ್ ಹೈನಾ, ಇಂಡಿಯನ್ ಕ್ರೈಸ್ಟೇಡ್ ಪೋರ್‌ಕಪೈನ್, ಸನ್ ಕೌನ್ಸರ್ ಪ್ರಾಣಿಗಳನ್ನು ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ತರಲಾಗಿದೆ.

ಹುಲಿ-ಸಿಂಹಧಾಮ ತ್ಯಾವರೆಕೊಪ್ಪ ಮೃಗಾಲಯಕ್ಕೆ ಘಾರಿಯಾಲ ಸೇರ್ಪಡೆಗೊಂಡಿದ್ದು ಹಾಗೂ ಪ್ರಥಮ ಬಾರಿ ಮೃಗಾಲಯಕ್ಕೆ ತೀವ್ರವಾಗಿ ಅಳಿವಿನಂಚಿನಲ್ಲಿರುವ ಜಾತಿ ಸಂರಕ್ಷಣೆಯ ಬಗ್ಗೆ ಪ್ರಕೃತಿ ಶಿಕ್ಷಣ ನೀಡಲು ಈ ಪ್ರಭೇದದಿಂದ ಸಹಾಯಕವಾಗಲಿದೆ. ಪ್ರಥಮ ಬಾರಿ ಮೃಗಾಲಯಕ್ಕೆ ಸೌತ್ ಆಫ್ರೀಕನ್‌ಕ್ಕೆ ಸಂಬಂಧಿಸಿದ ಪಕ್ಷಿಗಳ ಪ್ರಭೇದವಾದ ಲೇಸ್ಸರ್ ರೀಹಾ ಮತ್ತು ಸನ್ ಕೌನ್ಸರ್ ಸೇರ್ಪಡೆಯಾಗಿರುತ್ತವೆ. ಭಾರತೀಯ ಕ್ರೆಸ್ಟೆಡ್ ಮುಳ್ಳುಹಂದಿ ಬಹುದಿನಗಳ ನಂತರ ಹುಲಿ-ಸಿಂಹಧಾಮ ತ್ಯಾವರೆಕೊಪ್ಪ ಮೃಗಾಲಯಕ್ಕೆ ಸಂಬಂಧಿಸಿದ ಅನಿಮಲ್ ಕಲೆಕ್ಷನ್ ಪ್ಲಾನ್‌ಗೆ ಮತ್ತೊಂದು ಸೇರ್ಪಡೆಯಾಗಿದೆ. ಗಂಡು ಕತ್ತೆ ಕಿರುಬ ಪ್ರಾಣಿಯನ್ನು ಬ್ಲಡ್‌ಲೈನ್ ಎಕ್ಸಚೆಂಗ್‌ಗಾಗಿ ವಿನಿಮಯ ಮಾಡಿಕೊಳ್ಳಲಾಗಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ

ಹುಲಿ-ಸಿಂಹಧಾಮ, ತ್ಯಾವರೆಕೊಪ್ಪ ವೈದ್ಯಾಧಿಕಾರಿಗಳು ಪ್ರಾಣಿಗಳು ಆರೋಗ್ಯದಿಂದಿರುವುದಾಗಿ ತಿಳಿಸಿರುತ್ತಾರೆ. ಈ ಪ್ರಾಣಿಗಳ ಆಗಮನದಿಂದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮ ಮೃಗಾಲಯದಲ್ಲಿ ಪ್ರಾಣಿ-ಪಕ್ಷಿ ಪ್ರಭೇದಗಳ ಸಂಖ್ಯೆ ಒಟ್ಟು 30 ರಿಂದ 34ಕ್ಕೆ ಹೆಚ್ಚಳವಾಗಿದೆ ಎಂದು ಹುಲಿ-ಸಿಂಹಧಾಮ, ತ್ಯಾವರೆಕೊಪ್ಪದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News