ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್ (Omicron) ಪ್ರಕರಣಗಳ ಬಗ್ಗೆ ಕಳವಳದ ನಡುವೆ, ಆರೋಗ್ಯ ಸಚಿವ ಸುಧಾಕರ್ (Health Minister Sudhakar) ಬುಧವಾರ ಹೊಸ ಕೋವಿಡ್ -19 ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿದೆ. ಜನರು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಅನುಸರಿಸುವ ಅಗತ್ಯವಿದೆ ಎಂದು ಎಚ್ಚರಿಸಿದ್ದಾರೆ.
ಒಮಿಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದೆ. ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಅಭ್ಯಾಸ ಮಾಡಬೇಕು. ಜನರು ಮಾಸ್ಕ್ ಧರಿಸದೇ ಇರುವುದು ದುರದೃಷ್ಟಕರ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರದ COVID-19 ಮಾರ್ಗಸೂಚಿಗಳನ್ನು (COVID-19 guidelines)ಕಟ್ಟುನಿಟ್ಟಾಗಿ ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಶೀಘ್ರದಲ್ಲೇ "ಸಲಹೆಗಳು ಮತ್ತು ನಿಬಂಧನೆಗಳನ್ನು" ರವಾನಿಸಲಿದೆ ಎಂದು ಅವರು ಹೇಳಿದ್ದಾರೆ.
ಒಮಿಕ್ರಾನ್ ಬಗ್ಗೆ ಸೋಮವಾರ ಸದನಕ್ಕೆ ಮಾಹಿತಿ ನೀಡುತ್ತೇನೆ. ಸದ್ಯ ರಾಜ್ಯದಲ್ಲಿ ಒಮಿಕ್ರಾನ್ ನಿಯಂತ್ರಣದಲ್ಲಿದೆ. ಆದ್ರೆ, ಬಹಳ ಬೇಗ ಹರಡುತ್ತದೆ ಎಂದು WHO ಮಾಹಿತಿ ನೀಡಿದೆ. ಲಸಿಕೆ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಹಾಕಬೇಕಿದೆ ಎಂದಿದ್ದಾರೆ.
ನಮಗೆ ಮತ ಕಡಿಮೆಯಾಗಿದೆ:
ಇದೇ ವೇಳೆ ವಿಧಾನ ಪರಿಷತ್ ಚುನಾವಣೆ (Karnataka Council Election) ಫಲಿತಾಂಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವ್ರು, ಕೋಲಾರದಲ್ಲಿ ಬಿಜೆಪಿ ಹೆಚ್ಚು ಮತ ಪಡೆದಿದೆ. ಇನ್ನೂ 220 ಮತ ಪಡೆದಿದ್ರೆ ಗೆಲ್ಲುತ್ತಿದ್ದೆವು. ಮಂಡ್ಯದಲ್ಲಿ ಮತ ಪ್ರಮಾಣ ಕಡಿಮೆಯಾಗಿರುವುದು ದುರದೃಷ್ಟಕರ. ಆರು ವರ್ಷದಲ್ಲಿ ಶೇ.34ರಷ್ಟು ಮತ ಪಡೆದಿದ್ದೇವೆ. ನಮಗೆ ಮತ ಕಡಿಮೆಯಾಗಿದೆ. ಸ್ವಲ್ಪ ಅಂತರದಲ್ಲಿ ಸೋತಿದ್ದೇವೆ. 2023ರಲ್ಲಿ ಹೆಚ್ಚು ಸೀಟು ಗೆಲ್ಲುತ್ತೇವೆ ಎಂಡಿದ್ದಾರೆ.
WHO ಎಚ್ಚರಿಕೆ:
Omicron ರೂಪಾಂತರವು ಅಭೂತಪೂರ್ವ ಪ್ರಮಾಣದಲ್ಲಿ ಹರಡುತ್ತಿದೆ ಎಂದು WHO ಎಚ್ಚರಿಸಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. WHO ಡೈರೆಕ್ಟರ್-ಜನರಲ್ ಟೆಡ್ರೊಸ್ ಎ. ಘೆಬ್ರೆಯೆಸಸ್ ಅವರು ಇಲ್ಲಿಯವರೆಗೆ ಒಟ್ಟು 77 ದೇಶಗಳು ಒಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿದ್ದಾರೆ. ಆದರೆ ವಾಸ್ತವವೆಂದರೆ ಈ ರೂಪಾಂತರವು ಇನ್ನೂ ಕೆಲವು ದೇಶಗಳಲ್ಲಿ ಪತ್ತೆಯಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Miss Universe 2021: ಸ್ಪರ್ಧೆಯಲ್ಲಿ ಹರ್ನಾಜ್ ಸಂಧು ತೊಟ್ಟ ಗೌನ್ ವಿನ್ಯಾಸಗೊಳಿಸಿದ್ದು ಒಬ್ಬ ತೃತೀಯ ಲಿಂಗಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.