ಫೆಬ್ರವರಿ 15ರಂದು ಆಮ್‌ ಆದ್ಮಿ ಪಾರ್ಟಿಯಿಂದ "ಪೊರಕೆಯೇ ಪರಿಹಾರ" ಯಾತ್ರೆ

ಸ್ವಚ್ಛತೆ, ಶಿಕ್ಷಣ, ಆರೋಗ್ಯ, ವಿದ್ಯುತ್‌ ಮುಂತಾದ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಆಮ್‌ ಆದ್ಮಿ ಪಾರ್ಟಿಯೊಂದೇ ಪರಿಹಾರವಾಗಿದೆ. ಇದನ್ನು ಜನರಿಗೆ ತಿಳಿಸುವ ಉದ್ದೇಶದಿಂದ ʻಪೊರಕೆಯೇ ಪರಿಹಾರʼ ಹೆಸರಿನಲ್ಲಿ ಯಾತ್ರೆ ಆಯೋಜಿಸಲಾಗಿದೆ.

Written by - Yashaswini V | Last Updated : Feb 13, 2023, 04:08 PM IST
  • ಆಮ್ ಆದ್ಮಿ ಪಕ್ಷದಿಂದ ವಿನೂತನ ಯಾತ್ರೆ
  • ʻಪೊರಕೆಯೇ ಪರಿಹಾರʼ ಹೆಸರಿನಲ್ಲಿ ಯಾತ್ರೆ ಆಯೋಜಿಸಿರುವ ಎಎಪಿ
  • ಫೆಬ್ರವರಿ 15ರ ಬುಧವಾರದಂದು 'ಪೊರಕೆಯೇ ಪರಿಹಾರ' ಯಾತ್ರೆಗೆ ಚಾಲನೆ
ಫೆಬ್ರವರಿ 15ರಂದು ಆಮ್‌ ಆದ್ಮಿ ಪಾರ್ಟಿಯಿಂದ "ಪೊರಕೆಯೇ ಪರಿಹಾರ" ಯಾತ್ರೆ title=
Porakaye Parihara

ಬೆಂಗಳೂರು: ರಾಜ್ಯ ವಿಧಾಸಭಾ ಚುನಾವಣೆಗಾಗಿ ತನ್ನ ಪ್ರಚಾರ ಕಾರ್ಯ ಆರಂಭಿಸಿರುವ ಆಮ್ ಆದ್ಮಿ ಪಕ್ಷ, ಬೆಂಗಳೂರು ನಗರದಲ್ಲಿನ ಪ್ರಚಾರಕ್ಕೆ 'ಪೊರಕೆಯೇ ಪರಿಹಾರ' ಎಂಬ ಯಾತ್ರೆಯನ್ನು ಆರಂಭಿಸಲಿದೆ. ಫೆಬ್ರವರಿ 15ರ ಬುಧವಾರದಂದು  'ಪೊರಕೆಯೇ ಪರಿಹಾರ' ಯಾತ್ರೆಗೆ ಚಾಲನೆ ನೀಡಲಾಗುತ್ತದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯಾಧ್ಯಕ್ಷ ಮೋಹನ್‌ ದಾಸರಿ ತಿಳಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್‌ ದಾಸರಿ, “ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮುಂಭಾಗದಿಂದ ಯಾತ್ರೆ ಆರಂಭವಾಗಲಿದೆ. ಸಂಗೊಳ್ಳಿ ರಾಯಣ್ಣ ವೃತ್ತ, ಆನಂದ್‌ ರಾವ್‌ ವೃತ್ತದ ಮೂಲಕ ಫೀಡಂ ಪಾರ್ಕ್‌ ತಲುಪಿ, ಅಲ್ಲಿ ಸಭೆ ನಡೆಸಲಿದ್ದೇವೆ. ಸ್ವಚ್ಛತೆ, ಶಿಕ್ಷಣ, ಆರೋಗ್ಯ, ವಿದ್ಯುತ್‌ ಮುಂತಾದ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಆಮ್‌ ಆದ್ಮಿ ಪಾರ್ಟಿಯೊಂದೇ ಪರಿಹಾರವಾಗಿದೆ. ಇದನ್ನು ಜನರಿಗೆ ತಿಳಿಸುವ ಉದ್ದೇಶದಿಂದ ʻಪೊರಕೆಯೇ ಪರಿಹಾರʼ ಹೆಸರಿನಲ್ಲಿ ಯಾತ್ರೆ ಆಯೋಜಿಸಲಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ- ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆಗೆ 250 ರೂ. ಟೋಲ್ ನಿಗದಿ ಸಾಧ್ಯತೆ

ಆಮ್‌ ಆದ್ಮಿ ಪಾರ್ಟಿ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್‌ ಕುಮಾರ್‌ ಮಾತನಾಡಿ, “ಫೆಬ್ರವರಿ 15ರಂದು ನಡೆಯಲಿರುವ ಯಾತ್ರೆಯಲ್ಲಿ ಪಕ್ಷದ ರಾಜ್ಯ ಹಾಗೂ ಬೆಂಗಳೂರು ಮಟ್ಟದ ಪದಾಧಿಕಾರಿಗಳು, ಸ್ಪರ್ಧಾಕಾಂಕ್ಷಿಗಳು, ಕಾರ್ಯಕರ್ತರು, ಬೆಂಬಲಿಗರು ಭಾಗವಹಿಸಲಿದ್ದಾರೆ. ರಾಜ್ಯವನ್ನಾಳಿದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಆಡಳಿತದಿಂದ ಕರ್ನಾಟಕದ ಜನರು, ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಜನರು ಬೇಸತ್ತಿದ್ದಾರೆ. ಆಮ್‌ ಆದ್ಮಿ ಪಾರ್ಟಿಯೊಂದೇ ರಾಜ್ಯದ ಜನತೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರವೆಂಬುದು ಅವರಿಗೆ ಮನವರಿಕೆ ಆಗುತ್ತಿದೆ. ದೆಹಲಿಯಲ್ಲಿ ಆಮ್‌ ಆದ್ಮಿ ಪಾರ್ಟಿ ನೀಡುತ್ತಿರುವ ಜನಪರ ಆಡಳಿತವನ್ನು ಕರ್ನಾಟಕದಲ್ಲೂ ಕಾಣಬೇಕೆಂದು ಜನತೆ ಬಯಸುತ್ತಿದ್ದಾರೆ” ಎಂದು ಹೇಳಿದರು.

ಇದನ್ನೂ ಓದಿ- ಬೆಂಗಳೂರಿನಲ್ಲಿ ಇಂದಿನಿಂದ ಏರೋಶೋ - ಸಿಲಿಕಾನ್‌ ಸಿಟಿ ಮಂದಿಗೆ ಟ್ರಾಫಿಕ್‌ ಬಿಸಿ

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಉಪಾಧ್ಯಕ್ಷ ಅಶೋಕ್‌ ಮೃತ್ಯುಂಜಯ ಉಪಸ್ಥಿತರಿದ್ದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News