ಬೆಂಗಳೂರು: ಹುಲಿ ಯೋಜನೆಗೆ 50 ವರ್ಷ ಪೂರೈಸಿದ ಹಿನ್ನೆಲೆ ಪ್ರಧಾನಿ ಮೋದಿಯವರು ಭಾನುವಾರ(ಏ.9) ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಒಂದೂವರೆ ಗಂಟೆ ತೆರೆದ ಜೀಪ್ ಸಫಾರಿ ನಡೆಸಿದ್ದರು. ಸುಮಾರು 20 ಕಿಮೀ ಕಾಡಿನಲ್ಲಿ ಸಂಚಾರ ನಡೆಸಿದರೂ ಪ್ರಧಾನಿ ಮೋದಿಯವರಿಗೆ ಒಂದೇ ಒಂದು ಹುಲಿಯೂ ಕಣ್ಣಿಗೆ ಬಿದ್ದಿರಲಿಲ್ಲ. ಇದರಿಂದ ಪ್ರಧಾನಿ ಮೋದಿಯವರು ಅಸಮಾಧಾನಗೊಂಡಿದ್ದಾರಂತೆ.
ಇದನ್ನೂ ಓದಿ: Amul vs Nandini: "ಹಾಲುಂಡ ತವರಿಗೆ" ಏಕೆ ದ್ರೋಹ ಮಾಡುವಿರಿ? ಎಂದ ಕಾಂಗ್ರೆಸ್
ಇದೇ ವಿಚಾರವಾಗಿ ಬುಧವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದೆ. ‘ಬಂಡೀಪುರದಲ್ಲಿ ಪ್ರಧಾನಿ ಮೋದಿಯವರಿಗೆ ಹುಲಿಗಳು ಕಾಣಿಸದೆ ಇರುವುದರಿಂದ ಸಫಾರಿ ಜೀಪ್ ಚಾಲಕನ ವಿರುದ್ಧ ಕ್ರಮ ಜರುಗಿಸಲು ಒತ್ತಾಯವಂತೆ.. ಬಂಡೀಪುರದ ಹುಲಿಗಳ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸದಿದ್ದರೆ ಹುಲಿಗಳ ಪುಣ್ಯ! ಪ್ರಧಾನಿಗಳೇ ಅವು ನವಿಲುಗಳಲ್ಲ, ಕರ್ನಾಟಕದ ಹುಲಿಗಳು, ತಾವು ಕರೆದು ಕಾಳು ಹಾಕುತ್ತೇನೆ ಎಂಬ ಭ್ರಮೆ ಬಿಟ್ಟುಬಿಡಿ!’ ಎಂದು ವ್ಯಂಗ್ಯವಾಡಿದೆ.
ಪಿ ಆರ್ ಸ್ಟಂಟ್ ವಿಫಲವಾಗಿದ್ದಕ್ಕೆ ಪ್ರಧಾನಿಗೆ ಇಷ್ಟೊಂದು ಕೋಪವೇ!
40% ಕಮಿಷನ್ ಬಗ್ಗೆ ತಲೆಕೆಡಿಸಿಕೊಳ್ಳದ ಪ್ರಚಾರ ಮಂತ್ರಿ ಮೋದಿ ಬಂಡೀಪುರದಲ್ಲಿ ಹುಲಿ ಕಾಣಿಸದಿರುವುದಕ್ಕೆ ಕುಪಿತರಾಗಿದ್ದರಂತೆ,
ಬಿಜೆಪಿ ನಾಯಕರು ಬಡಪಾಯಿ ಚಾಲಕನ ಮೇಲೆ ಮುಗಿಬಿದ್ದಿದ್ದಾರಂತೆ!ಇಂತಹ ಬಾಲಿಶ ಪ್ರಧಾನಿ ಹಿಂದೆಂದೂ ಬಂದಿಲ್ಲ, ಮುಂದೆಯೂ ಬರುವುದಿಲ್ಲ! pic.twitter.com/sQNRmlTJZx
— Karnataka Congress (@INCKarnataka) April 12, 2023
ಇದನ್ನೂ ಓದಿ: ಕನ್ನಡದಲ್ಲಿಯೂ CRPF ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ: ಸಿದ್ದರಾಮಯ್ಯ ಆಗ್ರಹ
ಬಂಡೀಪುರದಲ್ಲಿ ಮೋದಿಯವರಿಗೆ ಹುಲಿಗಳು ಕಾಣಿಸದೆ ಇರುವುದರಿಂದ ಸಫಾರಿ ಜೀಪ್ ಚಾಲಕನ ವಿರುದ್ಧ ಕ್ರಮ ಜರುಗಿಸಲು ಒತ್ತಾಯವಂತೆ..
ಬಂಡೀಪುರದ ಹುಲಿಗಳ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸದಿದ್ದರೆ ಹುಲಿಗಳ ಪುಣ್ಯ!
ಪ್ರಧಾನಿಗಳೇ ಅವು ನವಿಲುಗಳಲ್ಲ, ಕರ್ನಾಟಕದ ಹುಲಿಗಳು, ತಾವು ಕರೆದು ಕಾಳು ಹಾಕುತ್ತೇನೆ ಎಂಬ ಭ್ರಮೆ ಬಿಟ್ಟುಬಿಡಿ!
— Karnataka Congress (@INCKarnataka) April 12, 2023
‘ಪಿ ಆರ್ ಸ್ಟಂಟ್ ವಿಫಲವಾಗಿದ್ದಕ್ಕೆ ಪ್ರಧಾನಿ ಮೋದಿಯವರಿಗೆ ಇಷ್ಟೊಂದು ಕೋಪವೇ! 40% ಕಮಿಷನ್ ಬಗ್ಗೆ ತಲೆಕೆಡಿಸಿಕೊಳ್ಳದ ಪ್ರಚಾರ ಮಂತ್ರಿ ಮೋದಿ ಬಂಡೀಪುರದಲ್ಲಿ ಹುಲಿ ಕಾಣಿಸದಿರುವುದಕ್ಕೆ ಕುಪಿತರಾಗಿದ್ದರಂತೆ, ಬಿಜೆಪಿ ನಾಯಕರು ಬಡಪಾಯಿ ಚಾಲಕನ ಮೇಲೆ ಮುಗಿಬಿದ್ದಿದ್ದಾರಂತೆ! ಇಂತಹ ಬಾಲಿಶ ಪ್ರಧಾನಿ ಹಿಂದೆಂದೂ ಬಂದಿಲ್ಲ, ಮುಂದೆಯೂ ಬರುವುದಿಲ್ಲ!’ವೆಂದು ಕಾಂಗ್ರೆಸ್ ಕುಟುಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.