ಐಎಎಸ್‌ Vs ಐಪಿಎಸ್‌ ವಾರ್‌ : 8 ವರ್ಷಗಳ ನಂತರ ಡಿಕೆ ರವಿ ಸಾವಿನ ಸುದ್ದಿ ಕೆದಕಿದ್ಯಾಕೆ..!

ಬರೋಬ್ಬರಿ 8 ವರ್ಷಗಳ ಸನಿಹ ಮತ್ತೆ ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಸುದ್ದಿ ಮುನ್ನಲೆಗೆ ಬಂದಿದೆ. ಡಿಕೆ ರವಿ ಸಾವಿನ ವಿಚಾರವನ್ನೇ ಪ್ರಶ್ನಿಸುತ್ತಾ ಐಎಎಸ್ ಅಧಿಕಾರಿ‌‌ ರೋಹಿಣಿ ಸಿಂಧೂರಿ ಮೇಲೆ ಐಪಿಎಸ್ ಅಧಿಕಾರಿ ಡಿ.ರೂಪ ಆರೋಪಗಳ ಬಾಣವನ್ನೇ ಬಿಟ್ಟಿದ್ದಾರೆ. ಹಾಗಾದ್ರೆ ಡಿ.ಕೆ ರವಿ ಸಾವಿನ ವಿಚಾರ ಈಗ ಪ್ರಸ್ತಾಪ‌‌ ಆಗಿದ್ದು ಯಾಕೆ..? ಅದಕ್ಕೆ ರೋಹಿಣಿ ಸಿಂಧೂರಿ ಕೊಟ್ಟ ಸ್ಪಷ್ಟನೇ ಏನು. ಪತ್ನಿ ಕುಸುಮಾ ಕರ್ಮದ ಬಗ್ಗೆ ಮಾತಾಡಿದ್ಯಾಕೆ..? ಅಂತ ಗೊತ್ತಾಗ್ಬೇಕು ಅಂದ್ರೆ ಈ ಸುದ್ದಿ ತಪ್ಪದೆ ಓದಿ..

Written by - VISHWANATH HARIHARA | Edited by - Krishna N K | Last Updated : Feb 19, 2023, 09:24 PM IST
  • ಬರೋಬ್ಬರಿ 8 ವರ್ಷಗಳ ಸನಿಹ ಮತ್ತೆ ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಸುದ್ದಿ ಮುನ್ನಲೆಗೆ ಬಂದಿದೆ.
  • ಐಎಎಸ್ ಅಧಿಕಾರಿ‌‌ ರೋಹಿಣಿ ಸಿಂಧೂರಿ ಮೇಲೆ ಐಪಿಎಸ್ ಅಧಿಕಾರಿ ಡಿ.ರೂಪ ಆರೋಪಗಳ ಬಾಣವನ್ನೇ ಬಿಟ್ಟಿದ್ದಾರೆ.
  • ಪರೋಕ್ಷವಾಗಿ ಡಿ.ಕೆ ರವಿ ಸಾವಿಗೆ ರೋಹಿಣಿ ಸಿಂಧೂರಿಯೇ ಕಾರಣ ಅನ್ನೋ ಗಂಭೀರ ಆರೋಪವನ್ನು ಡಿ.ರೂಪ ಮಾಡಿದ್ದಾರೆ.
ಐಎಎಸ್‌ Vs ಐಪಿಎಸ್‌ ವಾರ್‌ : 8 ವರ್ಷಗಳ ನಂತರ ಡಿಕೆ ರವಿ ಸಾವಿನ ಸುದ್ದಿ ಕೆದಕಿದ್ಯಾಕೆ..! title=

Rohini Sindhuri D Roopa controversy : ಬರೋಬ್ಬರಿ 8 ವರ್ಷಗಳ ಸನಿಹ ಮತ್ತೆ ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಸುದ್ದಿ ಮುನ್ನಲೆಗೆ ಬಂದಿದೆ. ಡಿಕೆ ರವಿ ಸಾವಿನ ವಿಚಾರವನ್ನೇ ಪ್ರಶ್ನಿಸುತ್ತಾ ಐಎಎಸ್ ಅಧಿಕಾರಿ‌‌ ರೋಹಿಣಿ ಸಿಂಧೂರಿ ಮೇಲೆ ಐಪಿಎಸ್ ಅಧಿಕಾರಿ ಡಿ.ರೂಪ ಆರೋಪಗಳ ಬಾಣವನ್ನೇ ಬಿಟ್ಟಿದ್ದಾರೆ. ಹಾಗಾದ್ರೆ ಡಿ.ಕೆ ರವಿ ಸಾವಿನ ವಿಚಾರ ಈಗ ಪ್ರಸ್ತಾಪ‌‌ ಆಗಿದ್ದು ಯಾಕೆ..? ಅದಕ್ಕೆ ರೋಹಿಣಿ ಸಿಂಧೂರಿ ಕೊಟ್ಟ ಸ್ಪಷ್ಟನೇ ಏನು. ಪತ್ನಿ ಕುಸುಮಾ ಕರ್ಮದ ಬಗ್ಗೆ ಮಾತಾಡಿದ್ಯಾಕೆ..? ಅಂತ ಗೊತ್ತಾಗ್ಬೇಕು ಅಂದ್ರೆ ಈ ಸುದ್ದಿ ತಪ್ಪದೆ ಓದಿ..

ಡಿಕೆ ರವಿ ಐಎಎಸ್, ಸಂಭಾವಿತ ವ್ಯಕ್ತಿ. ಸಿಬಿಐ ರಿಪೋರ್ಟ್ ನಲ್ಲಿ ಅವರ ಚಾಟ್ಸ್ ಬಗ್ಗೆ ಉಲ್ಲೇಖ ಇದ್ದು, ರವಿ ಅವರು ಎಂದಾದರೂ limit cross ಮಾಡಿದ ತಕ್ಷಣವೇ ಅವರನ್ನು ಬ್ಲಾಕ್ ಮಾಡಬಹುದಿತ್ತು. ಪರ್ಮನೆಂಟ್ ಆಗಿ ಬ್ಲಾಕ್ ಮಾಡಲಿಲ್ಲ ಈಕೆ. ಬ್ಲಾಕ್ ಮಾಡದೆ ಇದ್ದದ್ದು ಉತ್ತೇಜನ ಕೊಡುವ ಹಾಗೆ ಎಂಬಂತೆಯೇ ಕಾಣುತ್ತದೆ ಎಂಬುದು ಅನೇಕರ ಅಭಿಪ್ರಾಯ.

ಹೌದು.. ಐಪಿಎಸ್ ಅಧಿಕಾರಿ ಡಿ.ರೂಪ‌ ತನ್ನ‌ ಫೇಸ್ ಬುಕ್ ನಲ್ಲಿ‌ ಮಾಡಿದ್ದ ಇದೇ ಪೋಸ್ಟ್ 8 ವರ್ಷಗಳ ಹಿಂದೆ ನಡೆದ ದಿವಾಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಸತ್ಯವನ್ನ ಕೆದಕಿದೆ. ಹೌದು 16 ಮಾರ್ಚ್ 2015 ರಲ್ಲಿ ಡಿ.ಕೆ‌.ರವಿ ಕೋರಮಂಗಲದ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ರು. ಇದೇ ಪ್ರಕರಣ ಹಲವು ಪ್ರಭಾವಿಗಳಿಗೂ ಉರುಳಾಗಿತ್ತು. ಆದ್ರೆ ಸಿಬಿಐ ಸಲ್ಲಿಸಿದ್ದ ಚಾರ್ಜ್ ಶೀಟ್ ಮಾತ್ರ ಇದೊಂದು ವೈಯಕ್ತಿಕ‌ ಕಾರಣಕ್ಕೆ ಆದ ಆತ್ಮಹತ್ಯೆ ಎಂದು ಹೇಳಿತ್ತು. ಇದು ಹಳೇ ವಿಚಾರ ಆದ್ರೆ. ಇದೇ ವಿಚಾರವನ್ನು ಡಿ.ರೂಪ‌ ಮತ್ತೆ ಕೆದಕಿದ್ದು ರಾಜ್ಯದಲ್ಲಿ ಸಂಚಲನವೇ ಸೃಷ್ಟಿಯಾಗಿದೆ..

ಇದನ್ನೂ ಓದಿ: Rohini Sindhuri :ನನ್ನ ಪ್ರಶ್ನೆ ಇಷ್ಟೇ..ʼರೋಹಿಣಿ ಸಿಂಧೂರಿ ಯಾಕೆ ಡಿ ಕೆ ರವಿನ ಬ್ಲಾಕ್ ಮಾಡಲಿಲ್ಲʼ ?

ಯೆಸ್.. ಪರೋಕ್ಷವಾಗಿ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿ ಸಾವಿಗೆ ರೋಹಿಣಿ ಸಿಂಧೂರಿಯೇ ಕಾರಣ ಅನ್ನೋ ಗಂಭೀರ ಆರೋಪವನ್ನು ಡಿ.ರೂಪ ಮಾಡಿದ್ದಾರೆ. ಅಷ್ಟೇ ಅಲ್ಲ ಪುರುಷನೊಬ್ಬ ಎಲ್ಲೆ ಮೀರಿ ವರ್ತಿಸಿದಾಗ ಅವರ ನಂಬರ್ ಬ್ಲಾಕ್ ಮಾಡಬಹುದಿತ್ತು. ಆದರೆ ಮಾಡದೇ ಇದ್ದಿದ್ದು ಉತ್ತೇಜನ ಕೊಟ್ಟ ಹಾಗಲ್ಲವಾ ಎಂದು ಪ್ರಶ್ನಿಸಿದ್ದಾರೆ

ರೂಪ ಆರೋಪಕ್ಕೆ ಪತ್ರಿಕಾ ಪ್ರಕಟಣೆ ಮೂಲಕ ಉತ್ತರ ಕೊಟ್ಟ ಐಎಎಸ್ ಅಧಿಕಾರಿ ರೋಹಿಣಿ‌ ಸಿಂಧೂರಿ. ಮೆಂಟಲ್‌ಇಲ್ನೆಸ್ ಅನ್ನೋದು ಅತೀದೊಡ್ಡ ಸಮಸ್ಯೆ. ಇದರಿಂದ ಪಾರಾಗಲು ಚಿಕಿತ್ಸೆ ಮತ್ತು ಕೌನ್ಸಲಿಂಗ್ ನ ಅವಶ್ಯಕತೆ ಇದೆ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರೋರ ಮೇಲೆ ಪ್ರಭಾವ ಬೀರಿದರೆ. ಇದು ಅಪಾಯಕಾರಿಗಲಿದೆ ಅಂತಾ ಹೇಳಿದ್ರು. ಅಲ್ಲದೇ ರೂಪ ಆಧಾರ ರಹಿತ ಆರೋಪ‌ ಮಾಡ್ತಿದ್ದಾರೆ ಅಂತಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಈಕೆ ಮಾಡಿದ್ದು ಭ್ರಷ್ಟಾಚಾರವೋ, ಅನೈತಿಕ ನಡತೆಯೋ, ಆಕೆಯೇ ಉತ್ತರಿಸಬೇಕು..!

ಇದಕ್ಕೆ ಟಕ್ಕರ್ ಕೊಟ್ಟ ಡಿ.ರೂಪ ಫೇಸ್ ಬುಕ್ ನಲ್ಲೇ ಸಮರ ಸಾರಿದ್ರು.ಡಿಕೆ.ರವಿ ಸತ್ತಿದ್ದೇ ಮೆಂಟಲ್ ಇಲ್ನೆಸ್ ನಿಂದ ಅಂತಾ ರೋಹಿಣಿ ಹೇಳ್ತಿದ್ದಾರೆ‌. ರವಿಯನ್ನು ಇಷ್ಟು ನಿಕೃಷ್ಟವಾಗಿ ಹೀಯಾಳಿಸಿದರೆ ಹೇಗೆ..? ನನ್ನ ಪ್ರಶ್ನೆ ಇಷ್ಟೇ. ರೋಹಿಣಿ ಸಿಂಧೂರಿ ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್ ನಲ್ಲಿ ಎಲ್ಲರ ಕೈ ಸೇರಿದೆ. ಒಬ್ಬ ಪುರುಷ ಎಲ್ಲೆ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ. ಅಂದರೆ ಉತ್ತೇಜನ ಕೊಟ್ಟಂತೆ ಅಲ್ಲವೇ? ಅದೇ ರೀತಿ ಐಎಎಸ್ ಅಧಿಕಾರಿಗಳಿಗೆ ಕಳಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗೋದಿಲ್ವಾ. ಅವರು ಯಾವ ಫೋರಂ ಹೋದರೂ, ಸತ್ಯ ಸತ್ಯವೇ. ಸತ್ಯ ಮಣಿಸಲು ಸಾಧ್ಯವಿಲ್ಲ. ಈ ಬಾರಿ ಸಾಧ್ಯವೇ ಇಲ್ಲ ಎಂದು ಅಖಾಡಕ್ಕೆ ಇಳಿದೇ ಬಿಟ್ಟಿದ್ದಾರೆ..

ಯೆಸ್..ರೋಹಿಣಿ ಸಿಂಧೂರಿ ಮತ್ತು ಡಿ. ರೂಪ‌ ನಡುವಿನ ಕಾಳಗಕ್ಕೆ ಡಿ.ಕೆ ರವಿ ಪತ್ನಿ ಕುಸುಮಾ ಇಳಿದಿದ್ದಾರೆ.ಡಿ.ರೂಪ ವೈಲೆಂಟ್ ಆಗ್ತಿದ್ದಂತೆ ಆ್ಯಕ್ಟಿವ್ ಆದ ಕುಸುಮಾ ಹನುಂತರಾಯಪ್ಪ.ತಾನು ಮಾಡಿದ ಪಾಪವು ತನಗೆ ವಾಪಸ್ಸು ಬರುತ್ತದೆ.ತಕ್ಷಣಕ್ಕೆ ಆಗಬಹುದು ಅಥವಾ ತಡವಾಗಬಹುದು.ಆದರೆ ಖಂಡಿತಾ ಒಂದಲ್ಲ ಒಂದು ದಿನ ಕರ್ಮ ಅವರನ್ನ ಬಿಡೋದಿಲ್ಲ ಎನ್ನುವುದರ ಮೂಲಕ ತನ್ನ ಪತಿ ಸಾವಿಗೆ ರೋಹಿಣಿ ಸಿಂಧೂರಿ ಕಾರಣ ಅಂತಾ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: IAS vs IPS : ರೋಹಿಣಿ ಸಿಂಧೂರು ವಿರುದ್ಧ ಮತ್ತೆ ಗುಡುಗಿದ ಡಿ.ರೂಪ!

ಕುಸುಮಾ ನೋವಿನ‌ ಮಾತಿಗೆ ಮತ್ತೆ ದನಿಯಾದ ಡಿ.ರೂಪ.ಕುಸುಮಾ ಒಂದು ಹೆಣ್ಣಾಗಿ ನಿಮ್ಮ ನೋವು ನನಗೆ ಅರ್ಥ ಆಗುತ್ತೆ.ಕೆಲವು ಮಹಿಳೆಯರು ಇನ್ನೂ ಅಸಾಯಕರಾಗಿದ್ದಾರೆ..ಆದರೆ ಅಂತಿಮವಾಗಿ ಆರೋಪಿ ವಿರುದ್ದ ನಿಲ್ಲಲೇ ಬೇಕು ಅಲ್ಲವಾ.ಅದು ಹೆಣ್ಣಾದರು ಸರಿಯೇ.ಇದು ಮತ್ತೆ ಮರುಕಳಿಸದಂತೆ ಆಕೆಗೆ ದೇವರು ಸದ್ಬುದ್ಧಿ ಕೊಡಲಿ ಎಂದು ಸಿಂಧೂರಿಗೆ ಮತ್ತೆ ಕುಟುಕಿದ್ದಾರೆ. 

ಮಹಿಳಾ ಅಧಿಕಾರಿಗಳ ವಾರ್ ಐಎಎಸ್ ಅಧಿಕಾರಿಯಾಗಿದ್ದ ಡಿಕೆ ರವಿ ಸಾವಿನ ವಿಚಾರವನ್ನೇ ಕೆದಕಿದ್ದು.ಪತ್ನಿ‌ ಕುಸುಮಾ ಕೂಡ ಎಂಟ್ರಿ ಕೊಟ್ಟಿದ್ದಾರೆ‌.ಸದ್ಯ ಇವರ ವಾರ್ ಮತ್ತೆ ಇನ್ಯಾವೆಲ್ಲಾ ತಿರುವು ಪಡೆದುಕೊಳ್ಳುತ್ತದೋ ಕಾದುನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News