ಮಂಗಳೂರು: ಸಿದ್ದರಾಮಯ್ಯ ಒಳ್ಳೆಯ ಸಿಎಂ ಆದರೆ, ಅವರು ಹುಚ್ಚುಚ್ಚಾಗಿ ಮಾತನಾಡುವುದನ್ನು ಬಿಡಬೇಕು ಎಂದು RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್(Kalladka Prabhakar Bhat) ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ವಿರೋಧಿಸಿದ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ದನ-ದೇವರುಗಳನ್ನು ಪೂಜಿಸುವ ಪತ್ನಿ ಮತ್ತು ತಾಯಿಯನ್ನು ಸಿದ್ದರಾಮಯ್ಯ(Siddaramaiah) ಮನೆಯಿಂದ ಹೊರ ಹಾಕುತ್ತಾರೆಯೇ’ ಎಂದು ಪ್ರಭಾಕರ್ ಭಟ್ ಪ್ರಶ್ನಿಸಿದ್ದಾರೆ. ಗುಜರಾತ್ ಹತ್ಯಾಕಾಂಡ(Gujarat Riots Incident)ಮಾಡಿದಿದ್ರೆ ಸಿದ್ದರಾಮಯ್ಯ ಓದಬೇಕು. ಅಲ್ಲಿ ಮುಸಲ್ಮಾನರು ಮಾಡಿರುವ ಅತ್ಯಾಚಾರ ಯಾರೂ ಒಪ್ಪಲು ಸಾಧ್ಯವಿಲ್ಲ. ಸಾಧ್ಯವಾದರೆ ಸಿದ್ದರಾಮಯ್ಯ ಗುಜರಾತ್ ಗೆ ಹೋಗಿ ಸತ್ಯ ಏನೆಂದು ತಿಳಿದುಕೊಳ್ಳಲಿ. ರೈಲಿಗೆ ಬೆಂಕಿ ಹಾಕಿ ಕೊಂದರಲ್ಲ ಅವರ ಮನೆಗೆ ಹೋಗಿ ಕೇಳಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೇಶದ್ರೋಹಿ ಶಕ್ತಿಗಳನ್ನು ಸಹಿಸಲಾಗುವುದಿಲ್ಲ -ಸಿಎಂ ಬಸವರಾಜ ಬೊಮ್ಮಾಯಿ
ಹಿಜಾಬ್ ವಿವಾದ(Hijab Row) ವಿಚಾರದಲ್ಲಿ ಸಿದ್ದರಾಮಯ್ಯ(Siddaramaiah)ಮಾತನಾಡುವುದಿಲ್ಲ. ಏಕೆಂದರೆ ಸ್ವಲ್ಪ ಆಚೀಚೆ ಆದರೂ ವೋಟ್(Vote)ಹೋಗುತ್ತದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಒಳ್ಳೆಯ ಮುಖ್ಯಮಂತ್ರಿ ಆಗಿದ್ದವರು, ಅವರ ಬಗ್ಗೆ ನನಗೆ ಗೌರವ ಇದೆ. ಆದರೆ ಅವರು ಹುಚ್ಚುಚ್ಚಾಗಿ ಮಾತನಾಡಬಾರದು. ನಾನು ದನದ ಮಾಂಸ ತಿಂತೇನೇ ಯಾರು ಕೇಳೋರು ಅಂತಾ ಸಿದ್ದರಾಮಯ್ಯ ಹೇಳ್ತಾರೆ. ಸಿದ್ದರಾಮಯ್ಯನವರ ತಾಯಿ ದನವನ್ನು ಪೂಜಿಸುತ್ತಾರೆ, ರಾತ್ರಿಯವರೆಗೆ ದೇವರನ್ನೂ ಪೂಜಿಸ್ತಾರೆ. ಅವರ ಹೆಂಡತಿ ದೇವರನ್ನು ಪೂಜಿಸ್ತಾರೆ, ಇವರಿಗೆ ಅರ್ಥ ಆಗಲ್ಲ. ಹಾಗೆಂದು ಸಿದ್ದರಾಮಯ್ಯ ತಮ್ಮ ತಾಯಿ ಮತ್ತು ಹೆಂಡತಿಯನ್ನು ಮನೆಯಿಂದ ಹೊರಗೆ ಹಾಕ್ತಾರಾ? ಅವರ ಪುಣ್ಯದ ಫಲದಿಂದ ಸಿದ್ದರಾಮಯ್ಯ ಈಗ ಬದುಕಿರೋದು. ಹಿಂದೂ ಸಮಾಜವನ್ನು ಹಿಯಾಳಿಸೋ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದರು.
10 ವರ್ಷಗಳ ಹಿಂದೆಯೇ ಸ್ವರ್ಣವಲ್ಲಿ ಶ್ರೀಗಳು ಶಾಲೆಗಳಲ್ಲಿ ಭಗವದ್ಗೀತೆ(Bhagavad Gita) ಕಲಿಸುತ್ತೇವೆ ಎಂದು ಹೇಳಿದ್ದರು. ಆಗ ಬುದ್ಧಿಜೀವಿಗಳು ಕುರಾನ್, ಬೈಬಲ್ ಕಲಿಸುತ್ತಾರೆಯೇ ಎಂದು ಗಲಾಟೆ ಮಾಡಿದ್ದರು. ಬೈಬಲ್(Quran), ಕುರಾನ್(Bibale) ನಿಮ್ಮ ಮನೆಯಲ್ಲಿರಲಿ. ಭಗವದ್ಗೀತೆ ಎಲ್ಲಾ ಶಾಲೆಗಳು, ಮನೆಮನೆಗಳಲ್ಲೂ ಕಲಿಯಬೇಕು. ಭಗವದ್ಗೀತೆ ಈ ದೇಶದ ಅಂತಃಸತ್ತ್ವ, ಈ ದೇಶದ ತತ್ತ್ವ ಅಂತಾ ಪ್ರಭಾಕರ ಭಟ್ ಹೇಳಿದ್ದಾರೆ.
ಇದನ್ನೂ ಓದಿ: Hijab Controversy: ತೀರ್ಪು ಪ್ರಕಟಿಸಿದ ಮೂವರು ನ್ಯಾಯಾಧೀಶರಿಗೆ 'Y' Category ಭದ್ರತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.