ಬೆಂಗಳೂರು: ಬಿಜೆಪಿಯ ಪ್ರತಿಭಟನೆ ಮತ್ತು ಸಭಾತ್ಯಾಗದ ನಡುವೆಯೇ ಕಾಂಗ್ರೇಸ್ ಪಕ್ಷದ ಸಂಪತ್ ರಾಜ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 51ನೇ ಮಹಾಪೌರರಾಗಿ ಒಟ್ಟು 139 ಮತಗಳಿಂದ ಆಯ್ಕೆಯಾಗಿದ್ದಾರೆ. ಜೆಡಿಎಸ್ ನ ಪದ್ಮಾವತಿ ನರಸಿಂಹಮೂರ್ತಿ ಬಿಬಿಎಂಪಿಯ 50ನೇ ಉಪಮಹಾಪೌರರಾಗಿ ಆಯ್ಕೆಯಾಗಿದ್ದಾರೆ.
ಕಡೆಕ್ಷಣದವರೆಗೂ ಕಾಂಗ್ರೇಸ್ ಮತ್ತು ಜೆಡಿಎಸ್ ಮೈತ್ರಿಯ ಬಗ್ಗೆ ಇದ್ದ ಅನಿಶ್ಚಿತವಾತಾವರಣವನ್ನು ನಿಗಿ ಬಿಬಿಎಂಪಿಯಲ್ಲಿ ಮತ್ತೊಮ್ಮೆ ಕಾಂಗ್ರೇಸ್ ಮತ್ತು ಜೆಡಿಎಸ್ ಮೈತ್ರಿಯ ಆಡಳಿತ ಬಂದಿದೆ.
ಬಿಜೆಪಿ ಮುನಿರತ್ನ ಅವರನ್ನು ಮೇಯರ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿತ್ತಾದರೂ ಬಿಜೆಪಿ ಸಭಾತ್ಯಾಗ ಮಾಡುವುದರ ಮೂಲಕ ಮೇಯರ್ ಚುನಾವಣೆಯನ್ನು ಬಹಿಷ್ಕರಿಸಿತು. ಪರಿಣಾಮವಾಗಿ ಬಿಜೆಪಿ ಅಭ್ಯರ್ಥಿ ಶೂನ್ಯ ಸಾಧನೆ ಮಾಡಿದರು.
ಬಿಬಿಎಂಪಿ ಯಾ ನೂತನ ಮಹಾಪೌರರಾಗಿ ಆಯ್ಕೆಯಾಗಿರುವ ದೇವರ ಜಿವನಹಳ್ಳಿ 47ನೇ ವಾರ್ಡ್ನ ಶ್ರೀ ಸಂಪತ್ ರಾಜ್, ಪತ್ರಿಕಾ ಗೋಷ್ಠಿಯಲ್ಲಿ ತಮ್ಮ ನಾಯಕರು ಮತ್ತು ಜೆಡಿಎಸ್ ರಾಷ್ಟ್ರಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಡೆಂಗ್ಯು ಕಾಯಿಲೆ ನಿಯಂತ್ರಣಕ್ಕೆ ಕ್ರಮ ತೆಗೆದು ಕೊಳ್ಳುವುದಾಗಿ ತಿಳಿಸಿದ ಅವರು, ಪಾಲಿಕೆಯಲ್ಲಿ ಶೇ. 100ರಷ್ಟು ಕನ್ನಡ ಅನುಷ್ಠಾನಕ್ಕೆ ಒಟ್ಟು ಕೊಡುತ್ತೇನೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದ 7,300 ಕೋಟಿ ರೂ. ಸಮರ್ಪಕ ಅನುದಾನ ಬಳಕೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ನೂತನ ಉಪಮಹಾಪೌರರಾಗಿ ಆಯ್ಕೆಯಾಗಿರುವ ಪದ್ಮಾವತಿ ನರಸಿಂಹಮೂರ್ತಿ, ಬಿಬಿಎಂಪಿ ನೂತನ ಮೇಯರ್ ಸಂಪತ್ ರಾಜ್ ಅವರ ಜೊತೆಗೂಡಿ ನಗರದ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ತಿಳಿಸಿದರು. ಅಲ್ಲದೆ ಕಸ ವಿಂಗಡಣೆಗೆ ಒಟ್ಟು ನೀಡುತ್ತೇವೆ ಮಾತು ಸುಗಮ ವಾಹನ ಸಂಚಾರಕ್ಕಾಗಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.