ಚಿಕ್ಕಬಳ್ಳಾಪುರ: ವಿಷ ಉಣಿಸಿ ರಾಷ್ಟ್ರಪಕ್ಷಿ ನವಿಲುಗಳ ಮಾರಣಹೋಮ ನಡೆಸಿರುವ ಮನಕಲಕುವ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಬೈರಗಾನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ವಿಷ ಆಹಾರ ಸೇವಿಸಿ ನವಿಲುಗಳು (Peacocks) ದಾರುಣ ಸಾವನ್ನಪ್ಪಿವೆ ಎಂದು ಹೇಳಲಾಗುತ್ತಿದ್ದು, ಘಟನೆಯಲ್ಲಿ ಎರಡು ಗಂಡು ನವಿಲುಗಳು ಹಾಗೂ ಐದು ಹೆಣ್ಣು ನವಿಲುಗಳು ಸೇರಿ ಒಟ್ಟು ಏಳು ನವಿಲುಗಳು ಮೃತಪಟ್ಟಿವೆ.
ಇದನ್ನೂ ಓದಿ- National Animal vs National Bird: ಗರಿಬಿಚ್ಚಿದ ನವಿಲಿನ ಮೇಲೆ ಹುಲಿರಾಯನ ದಾಳಿ, ವಿಡಿಯೋ ವೈರಲ್!
ವಿಷಯ ತಿಳಿಯುತ್ತಿದ್ದಂತೆ ಶಿಡ್ಲಘಟ್ಟ ವಲಯ ಉಪ ಅರಣ್ಯಾಧಿಕಾರಿ, ಜಯಚಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಷ ಮಿಶ್ರಿತ ಆಹಾರ (Poison Mixed Food) ಸೇವಿಸಿ ನವಿಲುಗಳು ಸಾವನ್ನಪ್ಪಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ- Viral video : ಮೊಟ್ಟೆ ಕದಿಯಲು ಬಂದವನ ಮೇಲೆ ದಾಳಿ ಮಾಡಿದ ನವಿಲು, ಎದ್ದು ಬಿದ್ದು ಓಡಿದ ಯುವಕ
ಘಟನೆ ಕುರಿತಂತೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ನವಿಲುಗಳ ಮರಣೋತ್ತರ ಪರೀಕ್ಷೆಗೆ ಶಿಡ್ಲಘಟ್ಟ ತಾಲ್ಲೂಕು ಪಶು ಆಸ್ಪತ್ರೆಗೆ ರವಾನಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.