ದಕ್ಷಿಣ ವಲಯ ಆಯುಕ್ತರಿಂದ ವ್ಯಾಪ್ತಿಯ ಬೃಹತ್ ನೀರುಗಾಲವೆಗಳನ್ನು ಪರಿಶೀಲನೆ!

South Zone Commissioner inspect : ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬರುವ ಬೃಹತ್ ನೀರುಗಾಲುವೆಗಳ ಬಳಿ ಅಗತ್ಯ ಕಾಮಗಾರಿಗಳನ್ನು ಕೈಗೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ವಲಯ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Written by - Bhavya Sunil Bangera | Edited by - Savita M B | Last Updated : Aug 16, 2023, 07:46 PM IST
  • ನಾಯಂಡಹಳ್ಳಿ ಜಂಕ್ಷನ್ ಬಳಿಯ ರಾಜಕಾಲುವೆ ಪರಿಶೀಲನೆ
  • ಸಮೃದ್ಧಿ ಬಡಾವಣೆಯಲ್ಲಿ ನಿರ್ಮಿಸಿರುವ ಲೀಡ್ ಆಫ್ ಡ್ರೈನ್ ಪರಿಶೀಲನೆ
  • ಗಾಳಿ ಆಂಜನೇಯ ದೇವಸ್ಥಾನದ ಹಿಂಭಾಗದ ವೃಷಭಾವತಿ ಮಳೆ ನೀರುಗಾಲುವೆ ಪರಿಶೀಲನೆ
ದಕ್ಷಿಣ ವಲಯ ಆಯುಕ್ತರಿಂದ ವ್ಯಾಪ್ತಿಯ ಬೃಹತ್ ನೀರುಗಾಲವೆಗಳನ್ನು ಪರಿಶೀಲನೆ! title=

South Zone : ದಕ್ಷಿಣ ವಲಯ ವ್ಯಾಪ್ತಿಯಲ್ಲಿಯ ಬೃಹತ್ ನೀರುಗಾಲುವೆಗಳನ್ನು ಪರಿಶೀಲಿಸಿದ ವೇಳೆ ಮಾತನಾಡಿದ ಅವರು, ನಾಗರಿಕರಿಗೆ ಮಳೆಗಾಲದ ವೇಳೆ ರಾಜಕಾಲುವೆಗಳಿಂದ ಯಾವುದೇ ರೀತಿಯ ಸಮಸ್ಯೆ ಆಗದಂತೆ ಸೂಕ್ತ ಕ್ರಮಗಳನ್ನು ಕೈಗೊಂಡು ರಾಜಕಾಲುವೆಗಳಲ್ಲಿ ಸಂಗ್ರಹವಾಗು ಹೂಳನ್ನು ಕಾಲಕಾಲಕ್ಕೆ ತೆರವುಗೊಳಿಸುತ್ತಿರಬೇಕೆಂದು ಸೂಚನೆ ನೀಡಿದರು.

ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಕಛೇರಿಯ ಆವರಣದಲ್ಲಿ ಹಾದು ಹೋಗಿರುವ ಬೃಹತ್ ಮಳೆ ನೀರುಗಾಲುವೆ: ಪರಿಶೀಲನೆ
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂ 165ರ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಕಛೇರಿಯ ಆವರಣದಲ್ಲಿ ಹಾದು ಹೋಗಿರುವ ಬೃಹತ್ ಮಳೆ ನೀರುಗಾಲುವೆಯ ಕಾಮಗಾರಿ ನಡೆಯುತ್ತಿದ್ದು, ಹಾಜರಿದ್ದ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಮಾತನಾಡಿ, ಸದರಿ ಕಛೇರಿಗಳಿಗೆ ಸಾರ್ವಜನಿಕರು ಭೇಟಿ ನೀಡುವ ಕಾರಣ ಸಾರ್ವಜನಿಕರ ಹಿತದೃಷ್ಠಿಯಿಂದ ನಿರ್ಮಿಸುತ್ತಿರುವ ಮಳೆ ನೀರುಗಾಲುವೆಯನ್ನು ಆರ್.ಸಿ.ಸಿ ಛಾವಣಿಯಿಂದ ಮುಚ್ಚಿಕೊಡಲು ಕೋರಿದರು. 

ಸಾರ್ವಜನಿಕರ ಹಿತದೃಷ್ಠಿಯಿಂದ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಕಛೇರಿ ಹತ್ತಿರ ಹರಿಯುತ್ತಿರುವ ಬೃಹತ್ ಮಳೆ ನೀರುಗಾಲುವೆಯ ನಿರ್ವಹಣೆಗೆ ತೊಂದರೆಯಾಗದಂತೆ ಒಟ್ಟು ಮೂರು ಕಡೆ ರ‍್ಯಾಂಪ್ ನಿರ್ಮಿಸಿ, ಹೂಳನ್ನು ತೆಗೆಯಲು ಅನುಕೂಲವಾಗುವಂತೆ ಮಳೆ ನೀರುಗಾಲುವೆಯನ್ನು ಎತ್ತರಿಸಿ ಚಿಕ್ಕದಾದ ಹೈಡ್ರಾಲಿಕ್ ಎಸ್ಕವೇಟರ್ ಹೋಗುವಂತೆ ಆರ್.ಸಿ.ಸಿ ಛಾವಣಿಯಿಂದ ಬೃಹತ್ ಮಳೆ ನೀರುಗಾಲುವೆಯನ್ನು ಮುಚ್ಚಿಕೊಡಲು ಅಧಿಕಾರಿಗೆ ಸೂಚನೆ ನೀಡಿದರು.

ಇದನ್ನೂ ಓದಿ-ಹಲ್ ಚಲ್ ಎಬ್ಬಿಸಿದ ಕ್ಯೂ ಆರ್ ಕೋಡ್ ಆಟೋ ಚಾಲಕನ ಕಹಾನಿ
 
ಸಮೃದ್ಧಿ ಬಡಾವಣೆಯಲ್ಲಿ ನಿರ್ಮಿಸಿರುವ ಲೀಡ್ ಆಫ್ ಡ್ರೈನ್ ಪರಿಶೀಲನೆ
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 182ರ ಸಮೃದ್ದಿ ಬಡಾವಣೆಯಲ್ಲಿ ಈಗಾಗಲೇ ನಿರ್ಮಿಸಿರುವ ಲೀಡ್ ಆಫ್ ಡ್ರೈನ್‌ ಅನ್ನು ಪರಿಶೀಲಿಸಿ, ಹಳೆಯ ರಸ್ತೆ ಬದಿ ಚರಂಡಿಗೆ ಒಂದು ಮೀಟರ್‌ನಷ್ಟು ತಡೆಗೋಡೆ ನಿರ್ಮಿಸಿ ಕೆರೆ ತುಂಬಿ ಬರುವ ನೀರು ಹಾಗೂ ಡೈವರ್ಷನ್ ಚರಂಡಿಯ ನೀರನ್ನು ಹೊಸದಾಗಿ ನಿರ್ಮಿಸಿರುವ ಲೀಡ್ ಆಫ್ ಡ್ರೈನ್ ಗೆ ಡೈವರ್ಷನ್ ಮಾಡಲು ಸೂಚಿಸಿದರು.

ನಾಯಂಡಹಳ್ಳಿ ಜಂಕ್ಷನ್ ಬಳಿಯ ರಾಜಕಾಲುವೆ ಪರಿಶೀಲನೆ
ವಿಜಯನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಹರಿಯುತ್ತಿರುವ ವೃಷಭಾವತಿ ಮಳೆ ನೀರುಗಾಲುವೆ ಪರಿಶೀಲಿಸಿ, ಹೊರವರ್ತುಲ ರಸ್ತೆಯ ಸೇತುವೆಯ ಕೆಳಭಾಗದ ವೆಂಟ್ ಚಿಕ್ಕದಾಗಿರುವ ಕಾರಣ ಹೆಚ್ಚು ಮಳೆ ಬಿದ್ದ ಸಂದರ್ಭದಲ್ಲಿ ಪ್ರವಾಹ ಆಗುವುದನ್ನು ತಡೆಯಲು ಆಗಾಗ್ಗೆ ಹೂಳನ್ನು ತೆಗೆಯಲು ಸೂಚಿಸಿದರು. 

ಜೊತೆಗೆ ನಾಯಂಡಹಳ್ಳಿ ಜಂಕ್ಷನ್ ವೃತ್ತದಲ್ಲಿ ಎಂ.ಆರ್.ಕನ್ವೇನ್‌ಷನ್ ಹಾಲ್ ಮುಂಭಾಗ ಲಭ್ಯವಿರುವ ಸುಮಾರು ಅರ್ಧ ಎಕರೆ ಖಾಲಿ ಜಾಗವನ್ನು ಘನ ತ್ಯಾಜ್ಯ ನಿರ್ವಹಣೆ ಉದ್ದೇಶಗಳಿಗೆ ಅಥವಾ ಬೃಹತ್ ನೀರುಗಾಲುವೆ ಉದ್ದೇಶಕ್ಕಾಗಿ ಮಾತ್ರ ಮೀಸಲಿಡಲು ಸೂಚಿಸಲಾಯಿತು.

ಗಾಳಿ ಆಂಜನೇಯ ದೇವಸ್ಥಾನದ ಹಿಂಭಾಗದ ವೃಷಭಾವತಿ ಮಳೆ ನೀರುಗಾಲುವೆ ಪರಿಶೀಲನೆ
ವಿಜಯನಗರ ವಿಧಾನಸಭಾ ಕ್ಷೇತ್ರದ ಗಾಳಿ ಆಂಜನೇಯ ದೇವಸ್ಥಾನದ ಹಿಂಭಾಗದ ವೃಷಭಾವತಿ ಮಳೆ ನೀರುಗಾಲುವೆಯನ್ನು ಪರಿಶೀಲಿಸಲಾಗಿ, ಕವಿಕಾ ಕಾರ್ಖಾನೆ ಹಿಂಭಾಗ ಮಳೆನೀರುಗಾಲುವೆಯಲ್ಲಿನ ಹೂಳನ್ನು ಹೊರತೆಗೆಯಲು ಅನುಕೂಲವಾಗುವಂತೆ ಈಗಾಗಲೇ ನಿರ್ಮಿಸಿರುವ ತಾತ್ಕಾಲಿಕ ರ‍್ಯಾಂಪ್‌ಗೆ ಬದಲಾಗಿ ಶಾಶ್ವತವಾಗಿ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ನಿರ್ಮಿಸಿರುವಂತೆ ರ‍್ಯಾಂಪ್ ನಿರ್ಮಿಸಲು ಸೂಚಿಸಿದರು.  

ಈ ವೇಳೆ ಮುಖ್ಯ ಅಭಿಯಂತರರಾದ ರಾಜೇಶ್, ಕಾರ್ಯಪಾಲಕ ಅಭಿಯಂತರರಾದ ಚೇತನ್, ಬೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ-ಕಸ ಹಾಕಬೇಡಿ ಎಂದು ಆದೇಶವಿದ್ರೂ ಜನ ಡೋಂಟ್ ಕೇರ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News