ಬೆಂಗಳೂರು: ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿರುವುದರಿಂದ ಕೋವಿಡ್-19 ನಿಯಂತ್ರಣ ಮಾಡಲು ಮತ್ತು ಸಾರ್ವಜನಿಕರ ಹಾಗೂ ಕಛೇರಿ ಸಿಬ್ಬಂದಿಗಳ ಆರೋಗ್ಯ ಕಾಪಾಡಲು ಕಂದಾಯ ಇಲಾಖೆಯ ಕೆಲವು ಸೌಲಭ್ಯಗಳನ್ನು ಇ-ಮೇಲ್ ಮತ್ತು ವಾಟ್ಸ್ಪ್ ಮೂಲಕ ನೀಡಲು ಕ್ರಮ ಕೈಗೊಂಡಿದೆ.
ಸೇವೆಗಳನ್ನು ಪಡೆಯಲು ಪದೆ ಪದೇ ಕಛೇರಿಗೆ ಅರ್ಜಿ ಸಲ್ಲಿಸಲು ಬರುತ್ತಿರುವುದರಿಂದ ಸಾರ್ವಜನಿಕರ ಹಾಗೂ ಸಿಬ್ಬಂದಿಗಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಧಾರವಾಡ ತಹಶೀಲ್ದಾರ ಕಛೇರಿಗೆ ವಿವಿಧ ಕೆಲಸಗಳಿಗಾಗಿ ಅರ್ಜಿ ಸಲ್ಲಿಸುವವರು tahasildardwd@gmail.com ಇಮೇಲ್ಗೆ ಅರ್ಜಿ ಸಲ್ಲಿಸಬಹುದು. ಹಾಗೂ ವಾಟ್ಸ್ಪ್ ಮೂಲಕ ಅರ್ಜಿ ಸಲ್ಲಿಸುವವರು ಮೊಬೈಲ್ ನಂ. 7619471093 ಗೆ ಅರ್ಜಿಯ ಫೆÇೀಟೊ ಪ್ರತಿ ಸಲ್ಲಿಸುವುದು, ಈ ಕಛೇರಿಯಿಂದ ಸಿಗುವ ಸಾಮಾಜಿಕ ಭದ್ರತೆ ಯೋಜನೆ, ಹಾಗೂ ವಿವಿಧ ಪ್ರಮಾಣ ಪತ್ರಗಳಿಗಾಗಿ ಗ್ರಾಮ ಪಂಚಾಯತದಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಆನ್ಲೈನ್ ಕೇಂದ್ರದಲ್ಲಿ ಪಹಣಿ ಪತ್ರಿಕೆಗಳನ್ನು ಪಡೆಯಬಹುದು. ಈ ಕಛೇರಿಯ ದೂರವಾಣಿ ಸಂಖ್ಯೆ 0836-2233822 ಗೆ ಕರೆ ಮಾಡಿ ತಮಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಧಾರವಾಡ ತಹಶೀಲ್ದಾರ ಸಂತೋಷ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪ ವಿಭಾಗಾಧಿಕಾರಿಗಳ ಕಚೇರಿ ಸಂಪರ್ಕ ಸಂಖ್ಯೆ ಮತ್ತು ಇ-ಮೆಲ್ ವಿಳಾಸ : ಸಾರ್ವಜನಿಕರು ಕಚೇರಿಗೆ ಬರುವುದನ್ನು ಕಡಿಮೆ ಮಾಡಿ ತಮ್ಮ ಅರ್ಜಿ/ ಇತರೆ ಆಹವಾಲುಗಳನ್ನು ಉಪವಿಭಾಗಾಧಿಕಾರಿ ಕಾರ್ಯಾಲಯದ ವಾಟ್ಸ್ಆಪ್ ನಂ:9481130922 ಅಥವಾ ಇ-ಮೇಲ್- accwd_123@yahoo.com ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಉಪವಿಭಾಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.