CM Siddaramaiah Resign: ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಡಮಾರ್. ಟೈಮ್ ಬಾಂಬ್ ಫಿಕ್ಸ್ ಆಗಿದೆ. ಸಂಕ್ರಾಂತಿ ದೂರ ಆಯ್ತು, ದೀಪಾವಳಿ ಒಳಗೆ ಕಾಂಗ್ರೆಸ್, ಸಿದ್ದರಾಮಯ್ಯ ಸರ್ಕಾರ ಢಮಾರ್ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಸಿಟಿ ರವಿ ಹೊಸ ಬಾಂಬ್ ಸಿಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಸಿಟಿ ರವಿ, ಹೊಸ ಸಿಎಂ (New Govt), ಹೊಸ ಸರ್ಕಾರನಾ ಅಂದ್ರೆ ಕಾಲ ನಿರ್ಣಯ ಮಾಡುತ್ತದೆ. ಸಿದ್ದರಾಮಯ್ಯ ರಾಜೀನಾಮೆಗೆ (Siddaramaiha Resigns) ಕಾಂಗ್ರೆಸ್ ಮುಹೂರ್ತ ನಿಗದಿ ಮಾಡಿದೆ. ಹೊರಗಡೆ ಸಿದ್ದರಾಮಯ್ಯ ಅವರ ಹಿಂದೆ ಬಂಡೆಯಂತೆ ನಿಂತಿದಿವಿ ಅಂತಾರೆ. ಸಿದ್ದರಾಮಯ್ಯ ಹೋಗೋದು ಫಿಕ್ಸ್ ಆಗಿದ್ದು, ಹೀಗಾಗಿ ಕಾಂಪಿಟೇಶನ್ ಶುರುವಾಗಿದೆ. ಒಂದು ಡಜನ್ ಗೆ ಹೆಚ್ಚು ಜನ ಆಕಾಂಕ್ಷಿಗಳಾಗಿದ್ದಾರೆ ಎಂದವರು ತಿಳಿಸಿದರು.
ಸಿದ್ದರಾಮಯ್ಯನವರನ್ನು (Siddaramaiah) ಸಂಗೊಳ್ಳಿ ರಾಯಣ್ಣ ಅಂತಾ ನಾನು ಭಾವಿಸಲ್ಲ:
ಸಿಎಂ ಸಂಗೊಳ್ಳಿ ರಾಯಣ್ಣ ಪಿತೂರಿಗೆ ಬಲಿಯಾಗಿದ್ದಾರೆ ಎಂದಿದ್ದರು. ಆದರೆ, ನೀವು ಸಂಗೊಳ್ಳಿ ರಾಯಣ್ಣ ಅಂತಾ ನಾನು ಭಾವಿಸಲ್ಲ ಎಂದು ಸಿ.ಟಿ. ರವಿ ಇದೇ ಸಂದರ್ಭದಲ್ಲಿ ತಿಳಿಸಿಸರು.
ಇದನ್ನೂ ಓದಿ- ಉಚಿತಗಳಿಂದ ರಾಜ್ಯದಲ್ಲಿ ಆರ್ಥಿಕ ಅಸಮತೋಲನ : ಹಿಮಾಚಲ ಪ್ರದೇಶದ ಸ್ಥಿತಿ ಕರ್ನಾಟಕಕ್ಕೂ ಎದುರಾಗಲಿದೆ
ಸರ್ಕಾರದಲ್ಲಿ ಹಗರಣ ನಡೆದಿರೋದು ಸ್ಪಷ್ಟ. ಸರ್ಕಾರದಲ್ಲಿ ಬರೀ ಹಗರಣಗಳೇ ಸುದ್ದಿ. ಇದು ಬ್ರಷ್ಟಾಚಾರದ ಸರ್ಕಾರ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಕಳ್ಳನ ಹೆಂಡತಿ ಡ್ಯಾಶ್ ಡ್ಯಾಶ್ ಎಂದು ಸಿ.ಟಿ. ರವಿ (CT Ravi) ಗುಡುಗಿದರು.
ಸುಳ್ಳು ಲೆಕ್ಕ ಕಳ್ಳ ಬಿಲ್ಲು 100 ಪರ್ಸೆಂಟ್ ಲೂಟಿ. ಅವರ ಹಗರಣ ಮರೆಮಾಚೋಕೆ ಇನ್ನೊಬ್ಬರ ಕಡೆ ಬೊಟ್ಟು ಮಾಡೋದು. ತಪ್ಪು ಯಾರು ಮಾಡಿದ್ರು ತಪ್ಪೇ. ಅವರ ತರಹ ಜಾತಿ ಗುರಾಣಿ ಬಳಸಲ್ಲ. ಭ್ರಷ್ಟಾಚಾರ ಮುಚ್ಚಿ ಹಾಕೋಕೆ ಸಾಧ್ಯ ಇಲ್ಲ. ಸತ್ಯ ಯಾವತ್ತಾದರೂ ಹೊರಬರಲೇಬೇಕು. ಭ್ರಷ್ಟರು ಬಹಳ ದಿನ ಅಧಿಕಾರದಲ್ಲಿ ಇರಬಾರದು ಎಂದವರು ಹೇಳಿದರು.
ಇದನ್ನೂ ಓದಿ- ಸಿಎಂ ಪರ ಬಂಡೆಯಂತೆ ನಿಂತಿದ್ದೇವೆ ಎನ್ನುತ್ತಲೇ ಸಿದ್ದು ಕುರ್ಚಿ ಶೇಖ್ ಮಾಡ್ತಿದ್ದಾರೆ : ಪ್ರಲ್ಹಾದ ಜೋಶಿ ವ್ಯಂಗ್ಯ
ಈದ್ಗಾ ಮೈದಾನದಲ್ಲಿ ಭಗವಾದ್ವಜಾ:
ನಾವು ಇವತ್ತು ಈದ್ಗಾ ಮೈದಾನದಲ್ಲಿ ಭಗವಾದ್ವಜಾ ಹಾರಿಸಿದ್ದೇವೆ. ಮೂವತ್ತು ವರ್ಷಗಳ ಹಿಂದೆ ನಾನು ಇಲ್ಲಿ ಹೋರಾಟ ಮಾಡೋಕೆ ಬಂದಿದ್ದೆ. ಇವತ್ತು ಇಲ್ಲಿ ಭಗವಾ ದ್ವಜಾ ಹಾರಿಸಿದ್ದೇವೆ, ಇದು ನಮ್ಮ ಭೂಮಿ. ಹಿಂದುತ್ವ ಬಿಟ್ಟು ಭಾರತ ಇಲ್ಲ, ಭಾರತವನ್ನು ಬಿಟ್ಟು ಹಿಂದೂತ್ವ ಇಲ್ಲ. ರಾಣಿ ಚೆನ್ನಮ್ಮ ಮೈದಾನದಲ್ಲಿ ಇವತ್ತು ಗಣೇಶ ಪ್ರತಿಷ್ಠಾಪನೆ ಆಗಿದೆ. ಭಾರತ ಅಂದ್ರೆ ಚೈತನ್ಯ ಭೂಮಿ,ಕರ್ಮ ಭೂಮಿ ಎಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Channel- bit.ly/46lENGm
Facebook Link - https://bit.ly/3Hhqmcj
Youtube Link - https://www.youtube.com/watch?v=kr-YIH866cM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
Twitter Link - https://bit.ly/3n6d2R8 ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.