Chikkamagalur: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮುಗಿಯದ ರಾಜಕೀಯ ಶೀತಲ ಸಮರ 

Chikkamagalur:ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯಡಿಯೂರಪ್ಪನವರ ಆಶೀರ್ವಾದ ಇರೋದ್ರಿಂದ ಟಿಕೆಟ್ ನನಗೇ ಎಂದು ಆತ್ಮವಿಶ್ವಾಸದಲ್ಲಿದ್ದಾರೆ. ಆದ್ರೆ, ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿ ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಿಮುಕ್ತರಾದ ಬಳಿಕ ಸಿ.ಟಿ.ರವಿ ಕೂಡ ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪಕ್ಷದಲ್ಲಿ ನಾನು 1995 ರಿಂದ ಏನನ್ನೂ ಕೇಳಿ ಪಡೆದಿಲ್ಲ.

Written by - Zee Kannada News Desk | Last Updated : Mar 10, 2024, 01:39 AM IST
  • ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯಡಿಯೂರಪ್ಪನವರ ಆಶೀರ್ವಾದ ಇರೋದ್ರಿಂದ ಟಿಕೆಟ್ ನನಗೇ ಎಂದು ಆತ್ಮವಿಶ್ವಾಸದಲ್ಲಿದ್ದಾರೆ.
  • ಆದ್ರೆ, ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿ ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಿಮುಕ್ತರಾದ ಬಳಿಕ ಸಿ.ಟಿ.ರವಿ ಕೂಡ ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದರು.
  • ಪಕ್ಷದಲ್ಲಿ ನಾನು 1995 ರಿಂದ ಏನನ್ನೂ ಕೇಳಿ ಪಡೆದಿಲ್ಲ. ಪಕ್ಷ ಸೂಚಿಸಿದರೆ ನಾನು ಸಿದ್ಧ ಎಂದು ತೆರೆಮರೆಯಲ್ಲಿ ಕಸರತ್ತು ನಡೆಸಿದ್ರು.
Chikkamagalur: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮುಗಿಯದ ರಾಜಕೀಯ ಶೀತಲ ಸಮರ  title=

ಆಫ್ಟರ್ ಎಂ.ಎಲ್.ಎ. ಎಲೆಕ್ಷನ್ ಕಾಫಿನಾಡ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಸಾಬೀತಾಗ್ತಿದೆ. ಅತ್ತ ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಕ್ಕ ಟಿಕೆಟ್‍ಗಾಗಿ ಹೆಣ್ಣು ಎಂಬ ಟ್ರಂಪ್ ಕಾರ್ಡ್ ಬಳಸ್ತಿದ್ರೆ, ಇತ್ತ ಹಿಂದುತ್ವದ ಫೈರ್ ಬ್ರಾಂಡ್ 35 ವರ್ಷದ ಬಿಜೆಪಿ ಹುಲಿ ರವಿಯಣ್ಣ ಬಹಳ ದಿನ ಹೊಟ್ಟೆಯಲ್ಲಿ ಇಟ್ಕಳ್ಳಕ್ಕೆ ಆಗಲ್ಲ. ಎಂ.ಪಿ. ಎಲೆಕ್ಷನ್ ಮುಗೀಲಿ ಅಂತಿದ್ದಾರೆ. ಎಲ್ಲವೂ ಟಿಕೆಟ್‍ಗಾಗಿ. ರಾಜಕೀಯ ಭವಿಷ್ಯಕ್ಕಾಗಿ. ಆದ್ರೆ, ಶೋಭಾಕ್ಕ ಬೆನ್ನಿಗೆ ನಿಂತಿರೋ ಬಿಎಸ್‍ವೈ ಪರೋಕ್ಷವಾಗಿ ಶೋಭಾಗೆ ಟಿಕೆಟ್ ಕನ್ಫರ್ಮ್ ಎಂದಿದ್ದಾರೆ. ಆದ್ರೆ, ಕಾರ್ಯಕರ್ತರು ಮಾತ್ರ ಗೋಬ್ಯಾಕ್ ಶೋಭಾಕ್ಕ ಅಭಿಯಾನವನ್ನ ನಿಲ್ಸೇ ಇಲ್ಲ... ಈ ಕುರಿತ ಒಂದು ವರದಿ ಇಲ್ಲಿದೆ.

ಇದನ್ನೂ ಓದಿ: ಉತ್ತರ ಕರ್ನಾಟಕದ ಈ ಜಿಲ್ಲೆಗಳಲ್ಲಿ 8 ಹೆಚ್ಚುವರಿ ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮತಿ ನೀಡಿದ ಸಿಎಂ ಸಿದ್ದರಾಮಯ್ಯ

ಹೌದು... ವಿಧಾನಸಭಾ ಚುನಾವಣೆಯಲ್ಲೇ ಬಿಜೆಪಿಯ ಭದ್ರಕೋಟೆ ಕಾಫಿನಾಡು ಛಿದ್ರವಾಗಿತ್ತು. ಆದ್ರೆ, ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅಳಿದುಳಿದ ಹಮ್ಮು-ಬಿಮ್ಮು ಕೂಡ ಅನಾವರಣಗೊಳ್ಳುತ್ತಿದ್ದು ಪಕ್ಷ-ಪಕ್ಷದ ಮುಖಂಡರಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದನ್ನ ಸಾಬೀತು ಮಾಡ್ತಿದೆ. ಲೋಕ ಯುದ್ಧಕ್ಕೆ ದಿನಗಣನೆ ಇರುವಾಗಲೇ ಒಬ್ಬರ ಮೇಲೊಬ್ಬರು ಅಡ್ಡಗೋಡೆ ಮೇಲೆ ದೀಪವೀಟ್ಟಂತೆ ಪರೋಕ್ಷವಾಗಿ ಆಪಾದನೆ-ಆರೋಪ ಮಾಡ್ತಿದ್ದಾರೆ. ಎಲ್ಲವೂ ಟಿಕೆಟ್‍ಗಾಗಿ. ರಾಜಕೀಯ ಭವಿಷ್ಯಕ್ಕಾಗಿ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಟಿಕೆಟ್‍ಗಾಗಿ ಶೋಭಾ-ಸಿ.ಟಿ.ರವಿ ಇಬ್ರು ಕಸರತ್ತು ನಡೆಸುತ್ತಿದ್ದಾರೆ. ಆದ್ರೆ, ಶೋಭಕ್ಕ ಗಂಡಸರಿಗೆ ಅಧಿಕಾರ ನಮ್ಮ ಬಳಿಯೇ ಇರಬೇಕೆಂಬ ಭಾವನೆ ಇರುತ್ತೆ ಅಂತ ಹೆಣ್ಣು ಎಂಬ ಟ್ರಂಪ್ ಕಾರ್ಡ್ ಬಳಕೆಗೆ ಮುಂದಾಗಿದ್ದಾರೆ. ಆದ್ರೆ, ಕಾರ್ಯಕರ್ತರು ಮಾತ್ರ ಶೋಭಕ್ಕನಿಗೆ ಟಿಕೆಟ್ ಕೊಟ್ರೆ ಸೋಲು ಖಚಿತ, ಲಕ್ಷ ನೋಟಾ ಓಟು ಉಚಿತ ಎಂಬ ಅಭಿಯಾನವನ್ನೇ ನಿಲ್ಸಿಲ್ಲ. ಆದ್ರೆ, ಕಾರ್ಯಕರ್ತರ ಅಷ್ಟೊಂದು ವಿರೋಧದ ಮಧ್ಯೆಯೂ ರಾಜಾಹುಲಿ ಯಡಿಯೂರಪ್ಪ ಶೋಭಾ ಬೆನ್ನಿಗೆ ನಿಂತು ಪರೋಕ್ಷವಾಗಿ ಅವರೇ ಅಭ್ಯರ್ಥಿ ಎಂದು ಭವಿಷ್ಯ ನುಡಿದಿರೋದು ಬಿಜೆಪಿಯೊಳಗೆ ಮತ್ತೊಂದಿಷ್ಟು ಅಸಮಾಧಾಕ್ಕೆ ಸಾಕ್ಷಿಯಾಗಿದೆ. ಆದ್ರೆ, ಇಷ್ಟು ದಿನ ಸುಮ್ಮನಿದ್ದ ಸಿ.ಟಿ.ರವಿ ಕೂಡ ಹೊಸದೊಂದು ಬಾಂಬ್ ಸಿಡಿಸಿ ಸಮಯ ಕಾಯ್ತಿರೋದು ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದನ್ನ ಸಾರಿ ಹೇಳ್ತಿದೆ. 

ಇದನ್ನೂ ಓದಿ: ನಿಪ್ಪಾಣಿ ಶ್ರೀರಾಮ ಮಂದಿರ : ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಒಡ್ಡುವ 2 ಪತ್ರಗಳು ದೇವಸ್ಥಾನದಲ್ಲಿ ಲಭ್ಯ

ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯಡಿಯೂರಪ್ಪನವರ ಆಶೀರ್ವಾದ ಇರೋದ್ರಿಂದ ಟಿಕೆಟ್ ನನಗೇ ಎಂದು ಆತ್ಮವಿಶ್ವಾಸದಲ್ಲಿದ್ದಾರೆ. ಆದ್ರೆ, ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿ ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಿಮುಕ್ತರಾದ ಬಳಿಕ ಸಿ.ಟಿ.ರವಿ ಕೂಡ ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪಕ್ಷದಲ್ಲಿ ನಾನು 1995 ರಿಂದ ಏನನ್ನೂ ಕೇಳಿ ಪಡೆದಿಲ್ಲ. ಪಕ್ಷ ಸೂಚಿಸಿದರೆ ನಾನು ಸಿದ್ಧ ಎಂದು ತೆರೆಮರೆಯಲ್ಲಿ ಕಸರತ್ತು ನಡೆಸಿದ್ರು. ಆದ್ರೆ, ಶೋಭಾಗೆ ಟಿಕೆಟ್ ಎಂಬ ಮಾತು ಬಲವಾಗಿವೆ. ಬಿ.ಎಸ್.ವೈ. ಕೂಡ ಅದನ್ನ ಪರೋಕ್ಷವಾಗಿ ಹೇಳಿದ್ದು, ಶೋಭಾರ ಗೆಲುವಿನ ಅಂತರದ ಭವಿಷ್ಯವನ್ನೂ ನುಡಿದಿದ್ದಾರೆ. ಆದ್ರೆ, ಟಿಕೆಟ್‍ಗಾಗಿ ಕಸರತ್ತು ನಡೆಸಿದ ಸಿ.ಟಿ.ರವಿ ಇದೀಗ ಹೊಸ ಬಾಂಬ್ ಸಿಡಿಸಿದ್ದು ಆ ಬಾಂಬ್ ಯಾರ ಮೇಲೆ ಬೀಳೋತ್ತೋ ಗೊತ್ತಿಲ್ಲದಂತಿದೆ. ಮನಸ್ಸಿನಲ್ಲಿ ಬಹಳ ಭಾವನೆಗಳಿವೆ. ಎಲ್ಲವನ್ನೂ ಬಹಳ ದಿನ ಹೊಟ್ಟೆಯಲ್ಲಿ ಇಟ್ಟುಕೊಳ್ಳಲು ಆಗಲ್ಲ. ವಿಧಾನಸಭಾ ಚುನಾವಣೆಯಲ್ಲಿ ಯಾರ್ಯಾರು ಏನೇನು ಮಾಡಿದ್ರು ಗೊತ್ತು. ವೈಯಕ್ತಿಕ ನೆಲೆಯಲ್ಲಿ ರಾಜಕಾರಣ ಮಾಡೋದಾದ್ರು ಲೋಕಸಭೆ ಚುನಾವಣೆ ನಂತರವೇ ಎಂದು ಹೊಸ ಬಾಂಬ್ ಸಿಡಿಸಿದ್ದು, ಆ ಬಾಂಬ್ ಯಾರ ಮೇಲೆ ಬೀಳುತ್ತೆ ಅನ್ನೋದು ಯಕ್ಷಪ್ರಶ್ನೆಯಾಗಿದೆ. 

ಒಟ್ಟಾರೆ, ಲೋಕಸಭೆ ಚುನಾವಣೆಯ ಗುಂಗು ಆರಂಭವಾದಗಿನಿಂದ ಕಾಫಿನಾಡ ಬಿಜೆಪಿ ಮನೆಯಲ್ಲಿ ನಡೆಯುತ್ತಿರೋದನ್ನ ಗಮನಿಸಿದ್ರೆ ಮನೆಯೊಂದು ಮೂರು ಬಾಗಿಲಾದಂತಿದೆ. ಅತ್ತ ಶೋಭಾಗೆ ಟಿಕೆಟ್ ಕೊಡೋದಕ್ಕೆ ಕಾರ್ಯಕರ್ತರು ತೀವ್ರ ವಿರೋಧ ಹೊರಹಾಕ್ತಿದ್ದಾರೆ. 14 ಸಾವಿರ ಮತಗಳ ಅಂತರದಲ್ಲಿ ಐದು ಕ್ಷೇತ್ರ ಕಳ್ಕಂಡ್ವಿ. ಶೋಭಾ ಟಿಕೆಟ್ ಕೊಟ್ರೆ ನೋಟಾ ಹಾಕ್ತೀವಿ ಅಂತಿದ್ದಾರೆ ಕಾರ್ಯಕರ್ತರು. ಪುಂಕಾನುಪುಂಕವಾಗಿ ಗೋಬ್ಯಾಕ್ ಶೋಭಾ ಅಭಿಯಾನ ಮಾಡ್ತಿದ್ದಾರೆ. ಇವ್ರ ಈ ರಾಜಕೀಯ ಒಳಜಗಳದಿಂದ ಐದು ಎಂ.ಎಲ್.ಎ.ಗಳನ್ನು ಕಳ್ಕೊಂಡ್ರು. ಹೀಗೆ ಮಾಡ್ಕೊಂಡು ಲೋಕಕ್ಷೇತ್ರವನ್ನೂ ಕಳ್ಕೊಂತಾರ ಅನ್ನೋ ಆತಂಕ ಪ್ರಾಮಾಣಿಕ ಕಾರ್ಯಕರ್ತರದ್ದು.

-ಮಧುಸೂಧನ್ ಝೀ ಕನ್ನಡ ನ್ಯೂಸ್ ಚಿಕ್ಕಮಗಳೂರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News