ಬೆಂಗಳೂರು : ರಾಜ್ಯದಲ್ಲಿ ಸಧ್ಯ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿವೆ. ಹೀಗಾಗಿ ಅನೇಕ ಜಿಲ್ಲೆಗಳಲ್ಲಿ ಲಾಕ್ಡೌನ್ ತೆರವುಗೊಳಿಸಲಾಗಿದೆ. ಅನ್ಲಾಕ್ 3.O ಪ್ರಕ್ರಿಯೆ ಕುರಿತು ಇಂದು ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದೆ.
ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮುಂತಾದ ನಿಯಮಗಳು ಇನ್ನೂ ಜಾರಿಯಲ್ಲಿವೆ. ರಾಜ್ಯ ಸರ್ಕಾರ(Karnataka Govt) ಜುಲೈ 5 ರಿಂದ ಅನ್ಲಾಕ್ 3.O ಪ್ರಕ್ರಿಯೆಗೆ ಸಿದ್ಧತೆ ನಡೆಸಿದೆ , ಈ ಬಗ್ಗೆ ಇಂದು ನಿರ್ಧಾರವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : Heavy Rainfall : ರಾಜ್ಯದ ಬಹುತೇಕ ಕಡೆ ಇನ್ನೂ 3 ದಿನ ಭಾರೀ ಮಳೆ..!
ಸಭೆಯಲ್ಲಿ ಅನ್ಲಾಕ್ 3.O(Unlock 3.O) ಬಗ್ಗೆ ಚರ್ಚೆ ನಡೆಸಲು ಸಚಿವರ ಜೊತೆ ನಿನ್ನೆ ಸಂಜೆ ಸಿಎಂ ಸಭೆ ನಿಗದಿಯಾಗಿತ್ತು. ಆದರೆ, ಆ ಸಭೆಯನ್ನು ಇಂದಿಗೆ ಮುಂದೂಡಲಾಗಿದೆ. ಇಂದು ಅನ್ಲಾಕ್ 3.O ಬಗ್ಗೆ ಕೊರೋನಾ ಉಸ್ತುವಾರಿ ಸಚಿವರು, ಹಿರಿಯ ಸಚಿವರ ಜೊತೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ : ಚರಕದಿಂದ ಶ್ರಮ ಸಂಸ್ಕೃತಿಗೆ ಹೊಸ ವ್ಯಾಖ್ಯಾನ
ರಾಜ್ಯದಲ್ಲಿ ಕೊರೋನಾ(Corona) ಜೊತೆಗೆ ಡೆಲ್ಟಾ ಪ್ಲಸ್ ರೋಗಗಳು ಕೂಡ ಪತ್ತೆಯಾಗುತ್ತಿವೆ. ಈಗಾಗಲೇ 2 ಹಂತದ ಲಾಕ್ಡೌನ್ ತೆರವುಗೊಳಿಸಲಾಗಿದ್ದು, ಸರ್ಕಾರಿ ಬಸ್ ಸಂಚಾರ, ರೆಸ್ಟೋರೆಂಟ್, ಬಾರ್, ಸರ್ಕಾರಿ ಕಚೇರಿಗಳು ತೆರೆಯಲು ಅನುಮತಿ ನೀಡಲಾಗಿದೆ. ಜುಲೈ 5ರಿಂದ ರಾಜ್ಯದಲ್ಲಿ ಸಂಪೂರ್ಣ ಅನ್ಲಾಕ್ ಘೋಷಣೆ ಮಾಡಲು ಸರ್ಕಾರ ಚಿಂತನೆ ನಡೆಸಿದ್ದು, ಈ ಬಗ್ಗೆ ಇಂದಿನ ಸಭೆಯ ಬಳಿಕ ನಿರ್ಧಾರವಾಗಲಿದೆ.
ಇದನ್ನೂ ಓದಿ : B Sriramulu : ಸಿಎಂ ಬಳಿ ಬೇಸರ ತೋಡಿಕೊಂಡ ಸಚಿವ ಶ್ರೀರಾಮುಲು
ಕೊರೋನಾ ತಜ್ಞರ ಸಮಿತಿ ನೀಡಿರುವ ಮಾಹಿತಿ ಪ್ರಕಾರ, ನೆರೆಯ ರಾಜ್ಯಗಳಲ್ಲಿ ಕೊರೋನಾ ಹೆಚ್ಚಾಗಿದೆ. ಹೀಗಾಗಿ ರಾಜ್ಯದಲ್ಲಿ ಸಂಪೂರ್ಣವಾಗಿ ಅನ್ಲಾಕ್(Lockdown) ಘೋಷಿಸಿದರೆ ಮುಂದೆ ಮತ್ತೆ ಕೊರೋನಾ ಹೆಚ್ಚಾಗುವ ಸಾಧ್ಯತೆಯಿದೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂಗಳನ್ನಾದರೂ ಮುಂದುವರೆಸುವುದು ಉತ್ತಮ. ಹಾಗೇ, ಹೊರ ರಾಜ್ಯಗಳಿಂದ ಬರುವವರ ಮೇಲೆ ನಿಗಾ ಇಡುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.