ಬೆಂಗಳೂರು : ಚಿನ್ನವು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದ್ದರೂ, ಚಿನ್ನವು ಅಂತರರಾಷ್ಟ್ರೀಯ ಹಣದ ಮಾರುಕಟ್ಟೆಯಲ್ಲಿ ವಿದೇಶಿ ವಿನಿಮಯಕ್ಕಾಗಿ ಬಳಸಬಹುದಾದ ಲೋಹವಾಗಿದೆ. ಇನ್ನು ಮಹಿಳೆಯರಿಗೆ ಚಿನ್ನದ ಆಭರಣಗಳ ಬಗ್ಗೆ ವಿಶೇಷ ಆಸಕ್ತಿ ಇರುತ್ತದೆ. ಅದರಲ್ಲೂ ಭಾರತೀಯ ಮಹಿಳೆಯರು ತಮ್ಮ ಆಭರಣಗಳೊಂದಿಗೆ ವಿಶೇಷವಾದ ಬಾಂಧವ್ಯವನ್ನು ಹೊಂದಿರುತ್ತಾರೆ. ಚಿನ್ನದ ಕಿವಿಯೋಲೆಗಳು, ನೆಕ್ಲೆಸ್ ಗಳು, ಚಿನ್ನದ ಸರ, ಅಥವಾ ಬಳೆಗಳು, ಹೀಗೆ ವಿವಿಧ ವಿನ್ಯಾಸಗಳಲ್ಲಿ ಮಾಡಿದ ಚಿನ್ನದ ಆಭರಣಗಳನ್ನು ಧರಿಸುವುದೆಂದರೆ ಮಹಿಳೆಯರಿಗೆ ಬಲು ಪ್ರೀತಿ. ತಮ್ಮ ಪ್ರತಿಯೊಂದು ಆಭರಣದೊಂದಿಗೆ ಕೂಡಾ ಮಹಿಳೆಯರು ಭಾವನಾತ್ಮಕವಾಗಿ ಬೆಸೆದಿರುತ್ತಾರೆ. ಚಿನಾಭಾರಣ ಧರಿಸಿದರೆ ಮಹಿಳೆಯರ ಸೌಂದರ್ಯ ಕೂಡಾ ವೃದ್ದಿಯಾಗುತ್ತದೆ. ಆದರೆ ಚಿನ್ನಾಭರಣ ಮಹಿಳೆಯರ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ ಅವರ ಆರೋಗ್ಯವನ್ನು ಕೂಡಾ ವೃದ್ದಿಸುತ್ತದೆ.
ಚಿನ್ನದ ಆಭರಣಗಳನ್ನು ಧರಿಸುವುದರಿಂದ ಆರೋಗ್ಯ ಪ್ರಯೋಜನಗಳು :
ಚಿನ್ನದ ಆಭರಣಗಳನ್ನು ಧರಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎನ್ನುವ ವಿಚಾರ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಈ ಲೇಖನದಲ್ಲಿ ನಾವು ಚಿನ್ನದ ಆಭರಣಗಳನ್ನು ಧರಿಸುವುದರಿಂದ ಯಾವ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎನ್ನುವ ಬಗ್ಗೆ ತಿಳಿಸಲಿದ್ದೇವೆ. ಮಾತ್ರವಲ್ಲ ಯಾವ ಆಭರಣವನ್ನು ಧರಿಸಿದರೆ ಯಾವ ಆರೋಗ್ಯ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ ಎನ್ನುವ ಮಾಹಿತಿ ಕೂಡಾ ಇಲ್ಲಿದೆ.
ಇದನ್ನೂ ಓದಿ : ಬೇಳೆ ಕಾಳುಗಳಲ್ಲಿ ಹುಳಗಳಾಗದಂತೆ ದೀರ್ಘ ಕಾಲದವರೆಗೆ ಸಂರಕ್ಷಿಸಲು ಇಲ್ಲಿದೆ ಸುಲಭ ಉಪಾಯ
ಕಿವಿ ಓಲೆ :
ಚಿನ್ನದ ಕಿವಿಯೋಲೆಗಳನ್ನು ಧರಿಸುವುದರಿಂದ ಖಿನ್ನತೆ ಕಡಿಮೆಯಾಗುತ್ತದೆ. ಮಹಿಳೆಯರು ಕಿವಿಯೋಲೆಗಳನ್ನು ಧರಿಸುತ್ತಾರೆ. ಪುರುಷರು ಕೂಡಾ ಸಣ್ಣ ಕಿವಿಯೋಲೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಕಿವಿಯಲ್ಲಿ ಆಭರಣಗಳನ್ನು ಧರಿಸುವುದರಿಂದ ಕಿವಿ ಸೋಂಕುಗಳ ಅಪಾಯ ಕಡಿಮೆಯಾಗುತ್ತದೆ. ಇದರೊಂದಿಗೆ ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ. ಇದು ಖಿನ್ನತೆ ಮತ್ತು ಒತ್ತಡದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಇನ್ನು ಕಿವಿ ಚುಚ್ಚಿದರೆ ಪುಟ್ಟ ಮಕ್ಕಳ ಹಠ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ.
ದೌರ್ಬಲ್ಯ ದೂರವಾಗುತ್ತದೆ :
ಯಾರಿಗೆ ಆಯಾಸ, ದೌರ್ಬಲ್ಯ ಮತ್ತು ರಕ್ತಹೀನತೆಯ ಸಮಸ್ಯೆಗಳಿರುತ್ತವೆಯೋ, ಅವರು ಚಿನ್ನದ ಆಭರಣಗಳನ್ನು ಧರಿಸಬಹುದು. ಚಿನ್ನದ ಆಭರಣಗಳನ್ನು ಧರಿಸುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಚಿನ್ನದ ಆಭರಣಗಳನ್ನು ಧರಿಸುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ ಮತ್ತು ತೂಕ ಹೆಚ್ಚಾಗಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : Healthy Eating Tips: ಬ್ಲೋಟಿಂಗ್ ನಿಂದ ಹಿಡಿದು ತೂಕ ಇಳಿಕೆಯವರೆಗೆ ಇಂಗು-ಜೇನಿನ ಅದ್ಭುತ ಲಾಭಗಳು ಇಲ್ಲಿವೆ
ಆರೋಗ್ಯಕರ ಹೃದಯಕ್ಕಾಗಿ :
ಚಿನ್ನದ ಆಭರಣಗಳನ್ನು ಧರಿಸುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿ ಮತ್ತು ಶಾಖ ಉತ್ಪತ್ತಿಯಾಗುತ್ತದೆ. ಇದರೊಂದಿಗೆ, ಶೀತ, ಅಸ್ತಮಾ ಲಕ್ಷಣಗಳು, ಉಸಿರಾಟದ ಕಾಯಿಲೆಗಳು ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನೂ ಕಡಿಮೆ ಮಾಡುತ್ತದೆ. ಅಲ್ಲದೆ ರಕ್ತ ಸಂಚಾರವೂ ಉತ್ತಮವಾಗಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.