ಬೆಂಗಳೂರು : ಕೂದಲು ಬೆಳೆಯುವುದು ಹೇಗೆ? ಕೂದಲು ವೇಗವಾಗಿ ಬೆಳೆಯುವ ವಿಧಾನಗಳು ಯಾವುವು? ಕೂದಲು ಹೊಳೆಯುವಂತೆ ಮಾಡುವುದು ಹೇಗೆ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿರಲಿದೆ. ಕೂದಲಿನ ಬೆಳವಣಿಗೆಗೆ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಉತ್ಪನ್ನಗಳು ಲಭ್ಯವಿವೆ. ಆದರೆ ಈ ರಾಸಾಯನಿಕ ಉತ್ಪನ್ನಗಳು ಪ್ರಯೋಜನಗಳ ಬದಲಿಗೆ ಹಾನಿಯನ್ನುಂಟು ಮಾಡುವುದೇ ಹೆಚ್ಚು.
ಈ ಎರಡು ಎಣ್ಣೆಗಳನ್ನು ಬಳಸಿ ಕೂದಲು ಬೆಳೆಸಿ :
ನೈಸರ್ಗಿಕವಾಗಿ ಕೂದಲಿನ ಬೆಳವಣಿಗೆಯನ್ನು ಬಯಸಿದರೆ ಅಥವಾ ಅವುಗಳನ್ನು ಹೊಳೆಯುವಂತೆ ಮಾಡಬೇಕಾದರೆ, ಕೂದಲಿಗೆ ಎಣ್ಣೆಯನ್ನು ಹಚ್ಚಬೇಕು. ಈಗ ನಾವು ಹೇಳುವ ಎರಡು ವಿಧದ ಎಣ್ಣೆಗಳನ್ನು ಕೂದಲಿಗೆ ಹಚ್ಚುತ್ತಾ ಬಂದರೆ ಕೂದಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಿವಾರಿಸುವುದು ಸಾಧ್ಯವಾಗುತ್ತದೆ. ಆ ಎರಡು ಎಣ್ಣೆಗಳೇ ಸಾಸಿವೆ ಎಣ್ಣೆ ಮತ್ತು ಕ್ಯಾಸ್ಟರ್ ಆಯಿಲ್.
ಇದನ್ನೂ ಓದಿ : White Hair : ಬಿಳಿ ಕೂದಲಿನ ಸಮಸ್ಯೆಗೆ ರಾಮಬಾಣ ಈ ಕಪ್ಪು ಕಾಳಿನ ಹೇರ್ ಪ್ಯಾಕ್.!
ಸಾಸಿವೆ-ಕ್ಯಾಸ್ಟರ್ ಎಣ್ಣೆ ಕೂದಲಿಗೆ ಹೇಗೆ ಪ್ರಯೋಜನಕಾರಿ?:
ಸಾಸಿವೆ ಎಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿ. ಇದು ಆರೋಗ್ಯಕರ ಕೊಬ್ಬುಗಳು, ಆಂಟಿಬ್ಯಾಕ್ಟೀರಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಕ್ಯಾಸ್ಟರ್ ಆಯಿಲ್ ಆರೋಗ್ಯಕರ ಕೊಬ್ಬುಗಳು ಮತ್ತು ಸಾಸಿವೆ ಎಣ್ಣೆಯಂತೆಯೇ ಪೌಷ್ಟಿಕಾಂಶ ಮತ್ತು ಔಷಧೀಯ ಗುಣಗಳಲ್ಲಿ ಸಮೃದ್ಧವಾಗಿದೆ. ಇವೆರಡನ್ನು ಒಟ್ಟಿಗೆ ಬಳಸಿದರೆ ಕೂದಲಿನ ಬೆಳವಣಿಗೆ ವೇಗವಾಗಿ ಆಗುತ್ತದೆ. ಮಾತ್ರವಲ್ಲ ಕೂದಲಿಗೆ ಹೊಳಪು ಕೂಡಾ ಬರುತ್ತದೆ.
ಸಾಸಿವೆ-ಕಾಸ್ಟರ್ ಎಣ್ಣೆಯನ್ನು ಈ ರೀತಿ ಕೂದಲಿಗೆ ಹಚ್ಚಿ :
1.ಮೊದಲನೆಯದಾಗಿ, ಸಾಸಿವೆ ಮತ್ತು ಕ್ಯಾಸ್ಟರ್ ಆಯಿಲ್ ಅನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಳ್ಳಿ.
2. ನಂತರ ಎರಡು ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಬೇಕು.
3. ಎಣ್ಣೆಯು ಬೆಚ್ಚಗಾದ ಮೇಲೆ ಅದನ್ನು ಒಲೆಯಿಂದ ಕೆಳಗಿಳಿಸಿ.
4. ಸ್ವಲ್ಪ ತಣ್ಣಗಾದ ಮೇಲೆ ಅದನ್ನು ನೇರವಾಗಿ ಕೂದಲಿಗೆ ಹಚ್ಚಿ.
ಇದನ್ನೂ ಓದಿ : ಈ 5 ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ತಲೆಹೊಟ್ಟಿನ ಸಮಸ್ಯೆ ಕಾಡುವುದೇ ಇಲ್ಲ
ಸಾಸಿವೆ-ಕಾಸ್ಟರ್ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಆಗುವ ಪ್ರಯೋಜನಗಳು? :
ಸಾಸಿವೆ ಮತ್ತು ಕ್ಯಾಸ್ಟರ್ ಆಯಿಲ್ ಅನ್ನು ಒಟ್ಟಿಗೆ ಕೂದಲಿಗೆ ಹಚ್ಚುವುದರಿಂದ ಅದ್ಭುತವಾದ ಪ್ರಯೋಜನಗಳನ್ನು ಪಡೆಯಬಹುದು. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸಿ, ಕೂದಲಿನ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಎಣ್ಣೆಯ ಸಾಕಷ್ಟು ಪೌಷ್ಟಿಕಾಂಶವು ಕೂದಲಿನ ಬೇರನ್ನು ತಲುಪುತ್ತದೆ. ಇದರಿಂದ ಕೂದಲು ಗಟ್ಟಿಯಾಗುತ್ತದೆ. ಈ ಎರಡೂ ಎಣ್ಣೆಗಳು ತಲೆಹೊಟ್ಟು ನಿವಾರಿಸುತ್ತದೆ. ಈ ಎರಡು ಎಣ್ಣೆಗಳ ನಿಯಮಿತ ಬಳಕೆಯಿಂದ ಕೂದಲು ದಪ್ಪವಾಗಿ, ಉದ್ದವಾಗಿ ಬೆಳೆಯುವುದಲ್ಲದೆ, ಕಾಂತಿಯುಕ್ತವಾಗುತ್ತದೆ.
ಈ ವಿಚಾರ ನೆನಪಿನಲ್ಲಿರಲಿ :
ಕೂದಲು ತೊಳೆಯುವ ಕನಿಷ್ಠ 4 ಗಂಟೆಗಳ ಮೊದಲು ಈ ಎಣ್ಣೆಯನ್ನು ಕೂದಲಿಗೆ ಹಚ್ಚಬೇಕು ಎನ್ನುವುದು ತಜ್ಞರ ಸಲಹೆ. ವಾರಕ್ಕೆ 2-3 ಈ ಎರಡು ಎಣ್ಣೆಯನ್ನು ನಾವು ಹೇಳಿದ ಹಾಗೆ ಕೂದಲಿಗೆ ಹಚ್ಚುವುದರಿಂದ ಸಾಕಷ್ಟು ಪ್ರಯೋಜನವಾಗುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.