Chanakya Niti: ಈ ಸಣ್ಣ ತಪ್ಪಿನಿಂದಾಗಿ ನೀವು ಎಷ್ಟೇ ಕಷ್ಟಪಟ್ಟರೂ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ

Chanakya Niti for Success: ಚಾರ್ಯ ಚಾಣಕ್ಯರು ಯಾವುದೇ ಮನುಷ್ಯನ ಯಶಸ್ಸಿಗೆ ದೊಡ್ಡ ಅಡಚಣೆಯಾಗಿರುವ ಮಾನವ ಜೀವನದ ಕೆಲವು ನಿಯಮಗಳು ಮತ್ತು ಅಭ್ಯಾಸಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ತಿಳಿಸಿದ್ದಾರೆ.  ಆಚಾರ್ಯ ಚಾಣಕ್ಯರ ಪ್ರಕಾರ, ಜೀವನದಲ್ಲಿ ಕೆಲವು ತಪ್ಪುಗಳನ್ನು ಮಾಡುವ ವ್ಯಕ್ತಿ ಎಷ್ಟೇ ಕಷ್ಟಪಟ್ಟು ದುಡಿದರೂ ಯಶಸ್ವಿಯಾಗುವುದಿಲ್ಲ. ಅಂತಹ ತಪ್ಪುಗಳು ಯಾವುವು ತಿಳಿಯೋಣ...

Written by - Yashaswini V | Last Updated : Nov 18, 2022, 01:26 PM IST
  • ವ್ಯಕ್ತಿ ತನ್ನ ಜೀವನದಲ್ಲಿ ಅಳವಡಿಸಿಕೊಂಡಿರುವ ನೀತಿಗಳು ಮಾನವ ಜೀವನದ ಕನ್ನಡಿ ಎಂದು ಹೇಳಲಾಗುತ್ತದೆ.
  • ಆಚಾರ್ಯ ಚಾಣಕ್ಯರು ತಮ್ಮ 'ಚಾಣಕ್ಯ ನೀತಿ'ಯಲ್ಲಿ ಮಾನವ ಜೀವನಕ್ಕೆ ಸಂಬಂಧಿಸಿದ ಇಂತಹ ವಿಷಯಗಳನ್ನು ಉಲ್ಲೇಖಿಸಿದ್ದಾರ
  • ಅದು ಆ ವ್ಯಕ್ತಿಯ ಯಶಸ್ಸು ಮತ್ತು ವೈಫಲ್ಯಕ್ಕೆ ಕಾರಣವಾಗುವ ಅಂಶಗಳನ್ನು ಉಲ್ಲೇಖಿಸುತ್ತದೆ.
Chanakya Niti: ಈ ಸಣ್ಣ ತಪ್ಪಿನಿಂದಾಗಿ ನೀವು ಎಷ್ಟೇ ಕಷ್ಟಪಟ್ಟರೂ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ title=
Chanakya niti

Chanakya Niti for Success: ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಮಾನವ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಒಬ್ಬ ವ್ಯಕ್ತಿಯು ನಿರಂತರವಾಗಿ ಯಶಸ್ಸಿನ ಉತ್ತುಂಗವನ್ನು ಏರಬಹುದು ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ಯಾವುದೇ ವ್ಯಕ್ತಿಯು ಕೆಲವು ವಿಷಯಗಳನ್ನು ಸರಿಯಾಗಿ ಅನುಸರಿಸದಿದ್ದರೆ, ನಂತರ ಅವರು ಎಷ್ಟೇ ಕಷ್ಟಪಟ್ಟು ಶ್ರಮಿಸಿದರೂ ಸಹ ಅವರು ವಿಫಲರಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಏಕೆಂದರೆ ಅವರ ನೀತಿಗಳು ಮಾನವ ಜೀವನದ ಕನ್ನಡಿ ಎಂದು ಹೇಳಲಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ 'ಚಾಣಕ್ಯ ನೀತಿ'ಯಲ್ಲಿ ಮಾನವ ಜೀವನಕ್ಕೆ ಸಂಬಂಧಿಸಿದ ಇಂತಹ ವಿಷಯಗಳನ್ನು ಉಲ್ಲೇಖಿಸಿದ್ದಾರೆ, ಅದು ಆ ವ್ಯಕ್ತಿಯ ಯಶಸ್ಸು ಮತ್ತು ವೈಫಲ್ಯಕ್ಕೆ ಕಾರಣವಾಗುವ ಅಂಶಗಳನ್ನು ಬಿಂಬಿಸುತ್ತದೆ.

ನಿಮ್ಮ ಯಶಸ್ಸಿಗೆ ಅಡಚಣೆಯಾಗಿ ಕಾಡುತ್ತೆ ನಿಮ್ಮ ಈ ತಪ್ಪು :
ಆಚಾರ್ಯ ಚಾಣಕ್ಯನ ಒಂದು ನೀತಿ, ಮನುಷ್ಯನ ಯಶಸ್ಸಿಗೆ ಅಡಚಣೆ ಉಂಟುಮಾಡುವ ಆತನ ಸಣ್ಣ ತಪ್ಪಿನ ಬಗ್ಗೆ ಉಲ್ಲೇಖಿಸುತ್ತದೆ. ಆದಾಗ್ಯೂ, ಈ ನೀತಿಯು ಜೀವನದಲ್ಲಿ ವ್ಯಕ್ತಿ ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಬ್ಬ ವ್ಯಕ್ತಿಯು ತನ್ನ ಈ ಅಭ್ಯಾಸವನ್ನು ಜಯಿಸಿದರೆ, ಅವನು ಜೀವನದಲ್ಲಿ ಪ್ರತಿ ಸಂತೋಷವನ್ನು ಪಡೆಯಲು ಸಾಧ್ಯವಾಗುತ್ತದೆ, ಇಲ್ಲದಿದ್ದರೆ ಅವನು ಜೀವನದಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Rahu Gochar: 2023ರಲ್ಲಿ ಈ ರಾಶಿಯವರಿಗೆ ದಯೆ ತೋರಲಿದ್ದಾನೆ ರಾಹು

ಮನಸ್ಸಿನ ನಿಯಂತ್ರಣ:
ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಮನಸ್ಸನ್ನು ಹೇಗೆ ನಿಯಂತ್ರಿಸಬೇಕೆಂದು ತಿಳಿದಿರಬೇಕು. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗದ ವ್ಯಕ್ತಿ ಎಷ್ಟೇ ಕಷ್ಟಪಟ್ಟು ದುಡಿದರೂ ಸಹ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ಆಚಾರ್ಯ ಚಾಣಕ್ಯ ತಮ್ಮ ನೀತಿಯಲ್ಲಿ ಹೇಳಿದ್ದಾರೆ. ತಮ್ಮ ಮನಸ್ಸನ್ನು ನಿಯಂತ್ರಿಸಲು ಸಾಧ್ಯವಾಗದಿರುವುದೇ ಆತನ  ಯಶಸ್ಸಿಗೆ ಅಡ್ಡಿಯಾಗುತ್ತದೆ ಎಂದವು ತಿಳಿಸಿದ್ದಾರೆ. 

ಇದನ್ನೂ ಓದಿ- Tulsi Dry Leaves Tips: ಒಣ ತುಳಸಿ ಎಲೆಗಳ ಈ ಪರಿಹಾರದಿಂದ ನಿಮ್ಮ ಅದೃಷ್ಟವೇ ಬದಲಾಗುತ್ತೆ

ಇದು ವ್ಯಕ್ತಿಯ ದೊಡ್ಡ ನ್ಯೂನತೆ:
ಆಚಾರ್ಯ ಚಾಣಕ್ಯರು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳದಿರುವುದು ಮನುಷ್ಯನ ದೊಡ್ಡ ನ್ಯೂನತೆ ಎಂದು ಹೇಳಿದ್ದಾರೆ. ಈ ಅಭ್ಯಾಸವು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಮನಸ್ಸನ್ನು ನಿಯಂತ್ರಿಸಲು ಸಾಧ್ಯವಾಗದ ವ್ಯಕ್ತಿ ಜೀವನದಲ್ಲಿ ಎಂದಿಗೂ ತೃಪ್ತಿ ಹೊಂದುವುದಿಲ್ಲ ಎಂದು  ಚಾಣಕ್ಯ ನೀತಿಯಲ್ಲಿ ತಿಳಿಸಿದ್ದಾರೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News