Money save Tips : ಸಾಮಾನ್ಯವಾಗಿ ಜನರು ಎಷ್ಟೇ ಹಣ ಸಂಪಾದಿಸಿದರೂ ತಮ್ಮ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಅರೇ ಇವತ್ತೇ ಸಂಬಳ ಬಂತು ಗುರು, ಆಗ್ಲೆ ಖಾಲಿ ಆಯ್ತು ಅಂತ ಎಲ್ಲರೂ ಅಂತಾರೆ. ಅಲ್ಲದೆ, ಕಷ್ಟ ಪಟ್ಟು ಹಣ ಗಳಿಸಿದ್ರೂ ಕೊನೆಗೆ ಬೊಗಸೆಯಲ್ಲಿಡಿದ ನೀರು ಹರಿದುಹೋಗುವಂತೆ ಹಣ ಖರ್ಚಾಗುತ್ತದೆ. ಯಾಕೆ ಹೀಗಾಗುತ್ತಿದೆ ಎಂದು ನೀವು ಹಲವಾರು ಬಾರಿ ಯೋಚಿಸಿದ್ದೀರಾ?.. ಹೌದು... ಕಷ್ಟ ಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಅಂದ್ರೆ ಬೇಸರವಾಗುತ್ತದೆ. ಇಂತಹ ಸಮಸ್ಯೆಗಳಿಗೆ ನೀವು ಗರುಡ ಪುರಾಣದಿಂದ ಉತ್ತರ ಪಡೆಯಬಹುದು.
ಹಿಂದೂ ಧರ್ಮದಲ್ಲಿ 18 ಮಹಾಪುರಾಣಗಳಿವೆ, ಪ್ರತಿಯೊಂದೂ ತನ್ನದೇ ಆದ ವಿಶೇಷ ಮಹತ್ವವನ್ನು ಹೊಂದಿದೆ. ಇವುಗಳಲ್ಲಿ ಗರುಡ ಪುರಾಣವೂ ಒಂದು. ಇದು ಮಾನವನ ಜೀವನ ಮತ್ತು ಮರಣಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಮಾಹಿತಿಯನ್ನು ಒಳಗೊಂಡಿದೆ. ಗರುಡ ಪುರಾಣವು ಮಾನವ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳನ್ನು ಉಲ್ಲೇಖಿಸುತ್ತದೆ. ಗರುಡ ಪುರಾಣದ ಉಪದೇಶಗಳನ್ನು ಪಾಲಿಸಿದರೆ ಮನುಷ್ಯರು ಸುಖಮಯ ಜೀವನ ಸಾಗಿಸಬಹುದಾಗಿದೆ.
ಇದನ್ನೂ ಓದಿ: Venus Transit 2022: ಧನ-ಸಂಪತ್ತು ಕರುಣಿಸುವ ಈ ಗ್ರಹದ ಗೋಚರದಿಂದ 2023 ರಲ್ಲಿ ಈ ರಾಶಿಯವರ ಮೇಲೆ ವಿಪರೀತ ಪರಿಣಾಮ
ನೀವು ಕೈತುಂಬಾ ಹಣ ಸಂಪಾದಿಸುವವರಾಗಿದ್ದರೆ, ಹಣ ನಿಮ್ಮ ಕೈಯಲ್ಲಿಲ್ಲ ಎಂದಾದರೆ ಗರುಡ ಪುರಾಣದಿಂದ ನಿಮಗೆ ಖಂಡಿತ ಉತ್ತರ ಸಿಗುತ್ತದೆ. ಅಂದರೆ, ಕೆಲವು ಅಭ್ಯಾಸಗಳು ಅಂತಹ ಸಂದರ್ಭಗಳಿಗೆ ಕಾರಣವಾಗುತ್ತವೆ. ಆದ್ದರಿಂದ, ನೀವು ಕೆಲವು ವಿಷಯಗಳಿಗೆ ಗಮನ ಕೊಡಬೇಕು.
ಸಂಪತ್ತಿನ ಬಗ್ಗೆ ಎಂದಿಗೂ ಹೆಮ್ಮೆಪಡಬೇಡಿ : ಗರುಡ ಪುರಾಣದ ಪ್ರಕಾರ, ಒಬ್ಬನು ತನ್ನ ಸಂಪತ್ತಿನ ಬಗ್ಗೆ ಎಂದಿಗೂ ಹೆಮ್ಮೆಪಡಬಾರದು. ಎಷ್ಟೇ ಸಂಪತ್ತು ಇದ್ದರೂ ಅದರ ಬಗ್ಗೆ ಅತಿಯಾದ ಅಭಿಮಾನ ಇರಬಾರದು. ಅಲ್ಲದೆ, ಒಬ್ಬನು ತನ್ನ ಸಂಪತ್ತಿನ ಕಾರಣದಿಂದ ಇನ್ನೊಬ್ಬನನ್ನು ಅವಮಾನಿಸಬಾರದು. ಲಕ್ಷ್ಮಿ ದೇವಿಯು ತಮ್ಮ ಸಂಪತ್ತಿನ ಬಗ್ಗೆ ಹೆಮ್ಮೆಪಡುವವರನ್ನು ಮತ್ತು ಅಹಂಕಾರಿಗಳನ್ನು ಎಂದಿಗೂ ಆಶೀರ್ವದಿಸುವುದಿಲ್ಲ. ಈ ವಿಷಯಗಳನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಿ.
ಇದನ್ನೂ ಓದಿ: Paush Amavasya: ಪುಷ್ಯ ಅಮಾವಾಸ್ಯೆಯಂದು ಈ ಕೆಲಸ ಮಾಡಿದ್ರೆ ಎಲ್ಲಾ ನೋವು & ದುಃಖ ದೂರವಾಗುತ್ತವೆ
ಭಗವಂತನಿಗೆ ಅನ್ನವನ್ನು ಅರ್ಪಿಸಿ : ಗರುಡ ಪುರಾಣದ ಪ್ರಕಾರ ಮನೆಯ ಅಡುಗೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ಮೊದಲು ದೇವರಿಗೆ ಅರ್ಪಿಸಬೇಕು. ಆ ಮನೆಯಲ್ಲಿ ಮೊದಲು ಊಟ ಮಾಡುವವನು ಭಗವಂತನೇ ಆಗಿರಬೇಕು. ಇದರಿಂದ ಎಲ್ಲಾ ದೇವತೆಗಳು ಸಂತುಷ್ಟರಾಗುತ್ತಾರೆ. ಈ ಕ್ರಿಯೆಯಿಂದ ಲಕ್ಷ್ಮಿ ದೇವಿಯು ಆ ಮನೆಯಲ್ಲಿ ಸದಾ ನೆಲೆಸುತ್ತಾಳೆ. ದೇವರಿಗೆ ಅನ್ನವನ್ನು ಅರ್ಪಿಸದೆ ಒಬ್ಬನೇ ಊಟಕ್ಕೆ ಕುಳಿತರೆ ಅದು ಶುಭವಲ್ಲ. ಆ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ.
ಪುರಾಣ ಗ್ರಂಥಗಳನ್ನು ಓದಿ : ರಾಮಾಯಣ, ಮಹಾಭಾರತ ಮತ್ತು ಗರುಡ ಪುರಾಣ ಓದುವುದರಿಂದ ನಿಮ್ಮ ಮನೆಯಲ್ಲಿ ಸದಾ ಸುಖ ಶಾಂತಿ ನೆಲೆಸುತ್ತದೆ. ಅಲ್ಲದೆ, ಈ ಗ್ರಂಥಗಳ ಮೂಲಕ ದೇವರ ಸ್ಮರಣೆಯನ್ನು ಸಹ ಏಕಕಾಲದಲ್ಲಿ ಮಾಡಲಾಗುತ್ತದೆ.
Disclaimer : ಇಲ್ಲಿ ಒದಗಿಸಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ನ್ಯೂಸ್ ಇದನ್ನು ಖಚಿತಪಡಿಸಿಲ್ಲ. ಇದಕ್ಕಾಗಿ, ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.