Eclipse 2023: ಸೂರ್ಯಗ್ರಹಣ-ಚಂದ್ರಗ್ರಹಣದಿಂದ ನಿಮ್ಮ ಜೀವನದ ಮೇಲೆ ಬಹುದೊಡ್ಡ ಪರಿಣಾಮ!

ಸೂರ್ಯಗ್ರಹಣ ಮತ್ತು ಚಂದ್ರಗ್ರಹಣವು ಪ್ರಮುಖ ಖಗೋಳ ಘಟನೆಗಳಾಗಿವೆ. ಇದು ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. 2023ರಲ್ಲಿ 2 ಸೂರ್ಯಗ್ರಹಣಗಳು ಮತ್ತು 2 ಚಂದ್ರಗ್ರಹಣಗಳು ನಡೆಯುತ್ತಿವೆ. ಇದು ಎಲ್ಲಾ ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.

Written by - Puttaraj K Alur | Last Updated : Apr 2, 2023, 03:41 PM IST
  • ವರ್ಷದ ಮೊದಲ ಗ್ರಹಣ ಸೂರ್ಯಗ್ರಹಣ ಆಗಿದ್ದು, ಇದು ಏಪ್ರಿಲ್ 20ರಂದು ನಡೆಯಲಿದೆ
  • ಮೇ 5ರಂದು ವರ್ಷದ 2ನೇ ಗ್ರಹಣ ಮತ್ತು ಮೊದಲ ಚಂದ್ರಗ್ರಹಣ ಸಂಭವಿಸಲಿದೆ
  • ವರ್ಷದ 3ನೇ ಗ್ರಹಣವು ಸೂರ್ಯಗ್ರಹಣವಾಗಿರುತ್ತದೆ, ಇದು ಅಕ್ಟೋಬರ್ 14ರಂದು ನಡೆಯಲಿದೆ
Eclipse 2023: ಸೂರ್ಯಗ್ರಹಣ-ಚಂದ್ರಗ್ರಹಣದಿಂದ ನಿಮ್ಮ ಜೀವನದ ಮೇಲೆ ಬಹುದೊಡ್ಡ ಪರಿಣಾಮ!   title=
2023ರ ಗ್ರಹಣಗಳ ಪರಿಣಾಮ

ನವದೆಹಲಿ: ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದಂತಹ ಪ್ರಮುಖ ಖಗೋಳ ಘಟನೆಗಳ ವಿಷಯದಲ್ಲಿ 2023ರ ವರ್ಷವು ಬಹಳ ಮುಖ್ಯವಾಗಿದೆ. ಈ ವರ್ಷ 2 ಸೂರ್ಯಗ್ರಹಣಗಳು ಮತ್ತು 2 ಚಂದ್ರಗ್ರಹಣಗಳು ಸಂಭವಿಸಲಿವೆ. ಈ ಗ್ರಹಣಗಳು ಧಾರ್ಮಿಕ ಮತ್ತು ಜ್ಯೋತಿಷ್ಯ ಮಹತ್ವವನ್ನು ಹೊಂದಿವೆ. ಇವು ದೇಶ-ವಿದೇಶದ ಜನರ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಈ 4 ಗ್ರಹಣಗಳು ಯಾವಾಗ ಸಂಭವಿಸುತ್ತವೆ? ಭಾರತದಲ್ಲಿ ಅವುಗಳ ಸಮಯ ಮತ್ತು ಪರಿಣಾಮ ಏನೆಂದು ತಿಳಿಯಿರಿ.

2023ರ ಗ್ರಹಣಗಳು ಮತ್ತು ಅವುಗಳ ಪರಿಣಾಮ

ವರ್ಷದ ಮೊದಲ ಗ್ರಹಣ: ವರ್ಷದ ಮೊದಲ ಗ್ರಹಣ ಸೂರ್ಯಗ್ರಹಣ ಆಗಿದ್ದು, ಇದು ಏಪ್ರಿಲ್ 20ರಂದು ನಡೆಯಲಿದೆ. ಪಂಚಾಂಗದ ಪ್ರಕಾರ ಈ ಸೂರ್ಯಗ್ರಹಣವು ಭಾರತೀಯ ಕಾಲಮಾನ ಬೆಳಗ್ಗೆ 7:4ರಿಂದ ಮಧ್ಯಾಹ್ನ 12:29ರವರೆಗೆ ಇರುತ್ತದೆ. ಆದರೆ ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ ಇದರ ಸೂತಕ ಅವಧಿಯೂ ಇಲ್ಲಿ ಮಾನ್ಯವಾಗುವುದಿಲ್ಲ. ವರ್ಷದ ಮೊದಲ ಸೂರ್ಯಗ್ರಹಣವು ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾ ಇತ್ಯಾದಿಗಳಲ್ಲಿ ಗೋಚರಿಸುತ್ತದೆ. 

ಇದನ್ನೂ ಓದಿ: Mercury Transit 2023: ಬುಧ ಸಂಕ್ರಮಣದಿಂದ ಈ ರಾಶಿಯವರಿಗೆ ವೃತ್ತಿ-ವ್ಯಾಪಾರ & ಜೀವನದಲ್ಲಿ ಪ್ರಗತಿ!

ವರ್ಷದ 2ನೇ ಗ್ರಹಣ: ಮೇ 5ರಂದು ವರ್ಷದ 2ನೇ ಗ್ರಹಣ ಮತ್ತು ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಮೇ 5ರ ಚಂದ್ರಗ್ರಹಣವು ನೆರಳು ಚಂದ್ರ ಗ್ರಹಣವಾಗಿರುತ್ತದೆ, ಆದ್ದರಿಂದ ಇದರ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ ಅಥವಾ ಭಾರತದಲ್ಲಿ ಅದು ಗೋಚರಿಸುವುದಿಲ್ಲ. ಈ ಚಂದ್ರಗ್ರಹಣ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಅಂಟಾರ್ಟಿಕಾ, ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರದ ಮೇಲೆ ಇರುತ್ತದೆ. ಈ ಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8:45ರಿಂದ 1ರವರೆಗೆ ಇರುತ್ತದೆ.

2023ರ 3ನೇ ಗ್ರಹಣ: ವರ್ಷದ 3ನೇ ಗ್ರಹಣವು ಸೂರ್ಯಗ್ರಹಣವಾಗಿರುತ್ತದೆ, ಇದು ಅಕ್ಟೋಬರ್ 14ರಂದು ನಡೆಯಲಿದೆ. ಇದು ವಾರ್ಷಿಕ ಸೂರ್ಯಗ್ರಹಣವಾಗಿದ್ದು, ಭಾರತದಲ್ಲಿ ಗೋಚರಿಸುವುದಿಲ್ಲ. ಆದುದರಿಂದಲೇ ಇದರ ಸೂತಕ ಕಾಲವು ಮಾನ್ಯವಾಗುವುದಿಲ್ಲ. ಟೆಕ್ಸಾಸ್, ಮೆಕ್ಸಿಕೋ, ಮಧ್ಯ ಅಮೆರಿಕ, ಕೊಲಂಬಿಯಾ, ಬ್ರೆಜಿಲ್‌ನ ಕೆಲವು ಭಾಗಗಳು, ಅಲಾಸ್ಕಾ ಮತ್ತು ಅರ್ಜೆಂಟೀನಾದಲ್ಲಿ ಈ ಗ್ರಹಣ ಗೋಚರಿಸಲಿದೆ.

ವರ್ಷದ ಕೊನೆಯ ಗ್ರಹಣ: ವರ್ಷದ 4ನೇ ಮತ್ತು ಕೊನೆಯ ಗ್ರಹಣ ಅಕ್ಟೋಬರ್ 28ರಂದು ಸಂಭವಿಸುತ್ತದೆ. ಇದು ಚಂದ್ರಗ್ರಹಣವಾಗಿರುತ್ತದೆ. ಶರದ್ ಪೂರ್ಣಿಮೆಯ ದಿನದಂದು ಸಂಭವಿಸಲಿರುವ ಈ ಗ್ರಹಣವು ಭಾರತದ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ. ಆದ್ದರಿಂದ ಇದರ ಸೂತಕ ಅವಧಿಯು ಮಾನ್ಯವಾಗಿರುತ್ತದೆ. ಇದು ಭಾಗಶಃ ಚಂದ್ರಗ್ರಹಣವಾಗಿದ್ದು, ಭಾರತವನ್ನು ಹೊರತುಪಡಿಸಿ ಯುರೋಪ್, ಆಸ್ಟ್ರೇಲಿಯಾ, ಉತ್ತರ-ದಕ್ಷಿಣ ಆಫ್ರಿಕಾ, ಆರ್ಕ್ಟಿಕ್, ಅಂಟಾರ್ಟಿಕಾ, ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ ಗೋಚರಿಸುತ್ತದೆ.

ಇದನ್ನೂ ಓದಿ: Shani Dev Plant: ಶಮಿ ಗಿಡಕ್ಕೆ ಈ ಒಂದು ವಸ್ತು ಕಟ್ಟಿದ್ರೆ ಶನಿದೇವನ ಆಶೀರ್ವಾದ ನಿಮಗೆ ಸಿಗುತ್ತೆ!

2023ರ ಗ್ರಹಣವು ನೈಸರ್ಗಿಕ ವಿಪತ್ತುಗಳನ್ನು ತರಬಹುದು

ಈ ವರ್ಷ ಸಂಭವಿಸಲಿರುವ 4 ಗ್ರಹಣಗಳು ಎಲ್ಲಾ ರಾಶಿಗಳ ಜನರ ಮೇಲೆ ದೊಡ್ಡ ಪ್ರಭಾವ ಬೀರುತ್ತವೆ. ಕೆಲವರಿಗೆ ಈ ಸೂರ್ಯಗ್ರಹಣ, ಚಂದ್ರಗ್ರಹಣವು ಶುಭ ಮತ್ತು ಕೆಲವರಿಗೆ ಅಶುಭಕರವಾಗಿರುತ್ತದೆ. ದೇಶ ಮತ್ತು ಪ್ರಪಂಚದ ಮೇಲೆ ಈ ಗ್ರಹಣಗಳ ಪರಿಣಾಮದ ಬಗ್ಗೆ ಹೇಳುವುದಾದರೆ ಜ್ಯೋತಿಷ್ಯದ ಪ್ರಕಾರ, ಇವು ನೈಸರ್ಗಿಕ ವಿಪತ್ತುಗಳಿಗೆ ಕಾರಣವಾಗಬಹುದು. ಈ ಗ್ರಹಣಗಳಿಂದ ಭೂಕಂಪ, ಪ್ರವಾಹ, ಸುನಾಮಿ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ ವಿಮಾನ ಅಪಘಾತಗಳು, ರಾಜಕೀಯ ಅಸ್ಥಿರತೆ ಉಂಟಾಗಬಹುದು. ಆದಾಗ್ಯೂ, ವ್ಯಾಪಾರದಲ್ಲಿ ಉತ್ಕರ್ಷವಿರುತ್ತದೆ ಮತ್ತು ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರುತ್ತವೆ.  

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News