Guru Pushya Yog 2022: ಜೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹ ಹಾಗೂ ನಕ್ಷತ್ರಗಳ ನಡೆಯ ಪ್ರಭಾವ ವ್ಯಕ್ತಿಗಳ ಜೀವನದ ಮೇಲೆ ಬೀಳುತ್ತದೆ. ಶಾಸ್ತ್ರಗಳ ಪ್ರಕಾರ ಒಟ್ಟು 27 ನಕ್ಷತ್ರಗಳಿದ್ದು, ಅವುಗಳಲ್ಲಿ ಪುಷ್ಯ ನಕ್ಷತ್ರ ಕೂಡ ಒಂದು. ಈ ನಕ್ಷತ್ರದ ಮೇಲೆ ಗುರು ಹಾಗೂ ಶನಿಯ ಪ್ರಭಾವವಿರುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ಈ ನಕ್ಷತ್ರವನ್ನು ತುಂಬಾ ವಿಶೇಷ ಪರಿಗಣಿಸಲಾಗಿದೆ. ಅದರಲ್ಲಿಯೂ ವಿಶೇಷವಾಗಿ ಭಾನುವಾರ ಹಾಗೂ ಗುರುವಾರದ ದಿನ ಪುಷ್ಯ ನಕ್ಷತ್ರ ಬಂದರೆ, ಅದನ್ನು ಮತ್ತಷ್ಟು ಶುಭ ಎಂದು ಭಾವಿಸಲಾಗಿದೆ. ಈ ಕಾಕತಾಳೀಯ ಅತ್ಯಂತ ಶುಭಫಲದಾಯಿ ಸಾಬೀತಾಗುತ್ತದೆ ಎನ್ನಲಾಗುತ್ತದೆ.
ಜೋತಿಷ್ಯ ಪಂಡಿತರ ಪ್ರಕಾರ ಭಾನುವಾರ ಅಥವಾ ಗುರುವಾರದ ದಿನ ಪುಷ್ಯ ನಕ್ಷತ್ರ ಬಂದರೆ ಅದನ್ನು ಅತ್ಯಂತ ದುರ್ಲಭ ಕಾಕತಾಳೀಯ ಎಂದು ಭಾವಿಸಲಾಗುತ್ತದೆ. ಈ ವಿಶಿಷ್ಠ ಕಾಕತಾಳೀಯ ಈ ಬಾರಿ ಜುಲೈ 28ರಂದು ಸಂಭವಿಸುತ್ತಿದ್ದು, ಈ ಸಂದರ್ಭದಲ್ಲಿ ಯಾವ ಕೆಲಸಗಳನ್ನು ಮಾಡಿದರೆ, ಶುಭ ಎಂದು ಭಾವಿಸಲಾಗುತ್ತದೆ ತಿಳಿದುಕೊಳ್ಳೋಣ ಬನ್ನಿ.
ಜುಲೈ 28ರಂದು ವಕ್ರ ನಡೆ ಅನುಸರಿಸಲಿರುವ ಗುರು
ಜುಲೈ 28 ರಂದು ಗುರು-ಪುಷ್ಯ ನಕ್ಷತ್ರಗಳ ಜೊತೆಗೆ ಗುರು ಗ್ರಹ ಮೀನ ರಾಶಿಯನ್ನು ಪ್ರವೇಶಿಸುತ್ತಿದೆ. ಈ ದಿನ ಅಮಾವಾಸ್ಯೆಯ ತಿಥಿ ಕೂಡ ಇದೆ. ಎಲ್ಲವೂ ಒಟ್ಟಿಗೆ ಬಂದಿರುವುದರಿಂದ. ಜುಲೈ 28ರಂದು ಶುಭ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಧನ-ಸಮೃದ್ಧಿಗೆ ಇದನ್ನು ಅತ್ಯಂತ ಶುಭ ಎಂದು ಭಾವಿಸಲಾಗಿದೆ. ಈ ಶುಭ ದಿನದಂದು ಹಲವು ಶುಭ ಕಾರ್ಯಗಳನ್ನು ಆರಂಭಿಸಬಹುದಾಗಿದೆ. ಒಂದು ವೇಳೆ ನೀವೂ ಕೂಡ ಚಿನ್ನ, ಮನೆ ಅಥವಾ ವಾಹನ ಖರೀದಿಸಲು ಯೋಜನೆ ರೂಪಿಸುತ್ತಿದ್ದಾರೆ ಜುಲೈ 28ರ ದಿನ ತುಂಬಾ ವಿಶೇಷವಾಗಿರಲಿದೆ.
ಧರ್ಮ ಹಾಗೂ ಹಣಕಾಸಿನ ವಿಷಯದಲ್ಲಿ ಅತ್ಯಂತ ಶುಭಕರ
ಜೋತಿಷ್ಯ ಪಂಡಿತರ ಪ್ರಕಾರ, ಗುರು-ಪುಷ್ಯ ಯೋಗದಲ್ಲಿ ಮಾಡಿದ ಕಾರ್ಯಗಳಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ ಮತ್ತು ಶುಭ ಫಲಗಳು ಪ್ರಾಪ್ತಿಯಾಗುತ್ತವೆ. ಜುಲೈ 28ರಂದು ಬೆಳಗ್ಗೆ7 ಗಂಟೆ 6 ನಿಮಿಷಕ್ಕೆ ಈ ಶುಭ ಯೋಗ ಆರಂಭಗೊಳ್ಳಲಿದೆ ಹಾಗೂ ಮಾರನೆಯ ದಿನ ಅಂದರೆ ಜುಲಿ 29 ರಂದು ಶುಕ್ರವಾರ ಬೆಳಗ್ಗೆ 9 ಗಂಟೆ 47 ನಿಮಿಷದವರೆಗೆ ಅದು ಇರಲಿದೆ. ಗುರು ತನ್ನ ವಕ್ರ ನಡೆಯನ್ನು ಆರಂಭಿಸಿದ ಮೇಲೆ ಪುಷ್ಯ ನಕ್ಷತ್ರದ ಅಸ್ತಿತ್ವ ಗುರು-ಪುಷ್ಯ ಯೋಗವನ್ನು ರಚಿಸಲಿದೆ.
ಈ ಕಾರ್ಯಗಳನ್ನು ಮಾಡಬಹುದು
ವೈದಿಕ ಜೋತಿಷ್ಯದಲ್ಲಿ ದೇವಗುರು ಬೃಹಸ್ಪತಿಯನ್ನು ಪುಷ್ಯ ನಕ್ಷತ್ರದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ನಕ್ಷತ್ರ ಗುರುವಾರದ ದಿನ ಆರಂಭಗೊಳ್ಳುತ್ತಿರುವುದರಿಂದ ಗುರು-ಪುಷ್ಯ ಯೋಗ ನಿರ್ಮಾಣಗೊಳ್ಳಲಿದೆ. ಇನ್ನೊಂದೆಡೆ ಇದೇ ದಿನದಿಂದ ಶ್ರಾವಣ ಮಾಸ ಆರಂಭಗೊಳ್ಳಲಿದ್ದು, ಮೊದಲ ದಿನವೇ ಅಮಾವಾಸ್ಯೆ ಇರುವ ಕಾರಣ ವ್ಯಕ್ತಿಗೆ ಧನ ಹಾಗೂ ಧಾರ್ಮಿಕ ವಿಷಯದಲ್ಲಿ ಲಾಭ ಸಿಗಲಿದೆ. ಈ ನಕ್ಷತ್ರದ ಅವಧಿಯಲ್ಲಿ ಮನೆ ನಿರ್ಮಾಣ ಆರಂಭ, ಹೊಸ ಕೆಲಸದ ಆರಂಭ, ಹೊಸ ವ್ಯಾಪಾರ, ಹೂಡಿಕೆ ಇತ್ಯಾದಿ ಕಾರ್ಯಗಳನ್ನು ಮಾಡುವುದು ಅತ್ಯಂತ ಶುಭ ಎಂದು ಭಾವಿಸಲಾಗುತ್ತದೆ. ಸಾಮಾನ್ಯವಾಗಿ ಪುಷ್ಯ ನಕ್ಷತ್ರವನ್ನು ಎಲ್ಲಾ ನಕ್ಷತ್ರಗಳ ರಾಜ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ-Jyotish Tips: ಈ ಸಮಯದಲ್ಲಿ ಮಲಗಿದ್ರೆ ಮನೆಯ ಸಂತೋಷ, ಸಮೃದ್ಧಿ ಸರ್ವನಾಶವಾಗುತ್ತೆ!!
ಈ ದಿನವನ್ನು ಹೀಗೆ ವಿಶೇಷವಾಗಿಸಿ
ಈ ದಿನ ದೇವರ ಪೂಜೆ-ಉಪಾಸನೆ ಹೆಚ್ಚಿನ ಲಾಭ ನೀಡಲಿದೆ. ಈ ದಿನ ಬೆಳಗ್ಗೆ ಮತ್ತು ಸಾಯಂಕಾಲದ ಹೊತ್ತಿನಲ್ಲಿ ದೇವರ ಮುಂದೆ ದೀಪ ಬೆಳಗಬೇಕು. ಜೊತೆಗೆ ಅಕ್ಕಿ, ಔಷಧಿ, ಖಿಚಡಿ, ಬೂಂದಿ ಉಂಡಿಯನ್ನು ದಾನ ಮಾಡುವುದರಿಂದ ವಿಶೇಷ ಲಾಭ ಪ್ರಾಪ್ತಿಯಾಗುತ್ತದೆ. ದೀರ್ಘಾವದಿಯ ಹೂಡಿಕೆಗಾಗಿ ಜುಲೈ 28ರ ದಿನ ಅತ್ಯಂತ ವಿಶೇಷವಾಗಿರಲಿದೆ. ಇದರಿಂದ ಭವಿಷ್ಯದಲ್ಲಿ ಅತ್ಯಂತ ಶುಭಫಲಗಳು ಪ್ರಾಪ್ತಿಯಾಗಲಿವೆ.
ಇದನ್ನೂ ಓದಿ-ಮುಖದ ಹೊಳಪು ಹೆಚ್ಚಿಸಲು ದುಬಾರಿ ಕ್ರೀಮ್‌ಗಿಂತ ಮನೆಯಲ್ಲಿರುವ ಅಕ್ಕಿ ಹಿಟ್ಟು ಬೆಸ್ಟ್!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-