ಎಣ್ಣೆಗೆ ಈ ನೀರು ಮಿಕ್ಸ್‌ ಮಾಡುವ ಮುನ್ನ ಎಚ್ಚರ..! ಕ್ವಾಲಿಟಿ ಹಾಳಾಗುತ್ತೆ..

Whisky and water : ಮದ್ಯಪ್ರಿಯರು ಎಣ್ಣೆ ಕುಡಿಯುವಾಗ ನಾರ್ಮಲ್‌ ನೀರು.. ಇಲ್ಲವೇ ಖನಿಜಯುಕ್ತ ನೀರನ್ನು ಹಾಕಿಕೊಳ್ಳುತ್ತಾರೆ.. ಮಿನರಲ್‌ ವಾಟರ್‌ ಹಾಕಿ ಮದ್ಯ ಸೇವನೆ ಮಾಡುವ ಮುನ್ನ ಅದರಿಂದಾಗುವ ಪರಿಣಾಮಗಳನ್ನು ನಾವು ಅರಿತುಕೊಳ್ಳಬೇಕು.. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Feb 14, 2025, 03:55 PM IST
    • ಮದ್ಯಪ್ರಿಯರು ಎಣ್ಣೆ ಕುಡಿಯುವಾಗ ನಾರ್ಮಲ್‌ ನೀರು ಹಾಕಿಕೊಳ್ಳುತ್ತಾರೆ.
    • ಇನ್ನೂ ಕೆಲವರು ಖನಿಜಯುಕ್ತ ನೀರನ್ನು ಹಾಕಿಕೊಂಡು ಕುಡಿಯುತ್ತಾರೆ..
    • ಖನಿಜಯುಕ್ತ ನೀರನ್ನು ವಿಸ್ಕಿ ಮತ್ತು ವೈನ್‌ನೊಂದಿಗೆ ಬೆರೆಸಬಾರದಂತೆ..
ಎಣ್ಣೆಗೆ ಈ ನೀರು ಮಿಕ್ಸ್‌ ಮಾಡುವ ಮುನ್ನ ಎಚ್ಚರ..! ಕ್ವಾಲಿಟಿ ಹಾಳಾಗುತ್ತೆ..  title=

Whisky and mineral water : ವಿಶ್ವದ ಅತ್ಯಂತ ಜನಪ್ರಿಯ ಮದ್ಯ ಪಾನೀಯಗಳಲ್ಲಿ ವಿಸ್ಕಿ ಮತ್ತು ವೈನ್ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ಕೆಲವರು ಅವುಗಳನ್ನು ನೇರವಾಗಿ ಕುಡಿಯುತ್ತಾರೆ, ಇನ್ನು ಕೆಲವರು ಮಿನಿರಲ್‌ ನೀರಿನೊಂದಿಗೆ ಬೆರೆಸಿ ಸೇವನೆ ಮಾಡುತ್ತಾರೆ.. ಆದರೆ, ತಜ್ಞರು ಹೇಳುವಂತೆ ಖನಿಜಯುಕ್ತ ನೀರನ್ನು ವಿಸ್ಕಿ ಮತ್ತು ವೈನ್‌ನೊಂದಿಗೆ ಬೆರೆಸಬಾರದಂತೆ..  

ಏಕೆಂದರೆ ಅದು ಅವುಗಳ ನೈಸರ್ಗಿಕ ರುಚಿಯನ್ನು ಬದಲಾಯಿಸುತ್ತದೆ ಮತ್ತು ಸುವಾಸನೆಯನ್ನು ಹಾಳು ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.. ಈ ಎರಡು ಆಲ್ಕೊಹಾಲ್ಯುಕ್ತ ಪಾನೀಯಗಳೊಂದಿಗೆ ಖನಿಜಯುಕ್ತ ನೀರನ್ನು ಏಕೆ ಬೆರೆಸಬಾರದು ಎಂದು ಹೆಚ್ಚಿನ ಮಾಹಿತಿ ತಿಳಿಯೋಣ.. 

ಇದನ್ನೂ ಓದಿ: ಅಯ್ಯೋ ದುರ್ವಿಧಿಯೇ..! ತಂದೆಯ ಕಣ್ಣೆದುರೇ ಮಗನನ್ನು ನುಂಗಿದ ಬೃಹತ್ ತಿಮಿಂಗಿಲ.. ವಿಡಿಯೋ ವೈರಲ್‌

ವಿಸ್ಕಿಯನ್ನು ಮರದ ಬ್ಯಾರೆಲ್‌ಗಳಲ್ಲಿ ವರ್ಷಗಳ ಕಾಲ ಸಂಗ್ರಹಿಸಿ ಇಡಲಾಗುತ್ತದೆ. ಆಗ ಮಾತ್ರ ಅದಕ್ಕೆ ವಿಶಿಷ್ಟವಾದ ರುಚಿ ಮತ್ತು ಸುವಾಸನೆ ಬರುತ್ತದೆ.. ಕೆಲವು ವಿಸ್ಕಿ ಪ್ರಿಯರು ರುಚಿಯನ್ನು ಹೆಚ್ಚಿಸಲು ಸ್ವಲ್ಪ ನೀರು ಸೇರಿಸುತ್ತಾರೆ. ಇದು ಹೆಚ್ಚು ಸೂಕ್ಷ್ಮವಾಗಿಸುತ್ತದೆ. ಆದರೆ ಇಲ್ಲಿ ಯಾವ ನೀರನ್ನು ಬಳಸುತ್ತೇವೆ ಎನ್ನುವುದು ಬಹು ಮುಖ್ಯ.

ಭಾರತದ ಮೊದಲ 'ಮಾಸ್ಟರ್ ಆಫ್ ವೈನ್' ಎಂದು ಕರೆಯಲ್ಪಡುವ ಸೋನಲ್ ಹಾಲೆಂಡ್, ವಿಸ್ಕಿಯನ್ನು ಮಿಶ್ರಣ ಮಾಡಲು ಬಳಸುವ ನೀರು ಶುದ್ಧ, ಅಚ್ಚುಕಟ್ಟಾಗಿ ಮತ್ತು ವಾಸನೆಯಿಲ್ಲದಂತಿರಬೇಕು ಎಂದು "ಟೈಮ್ಸ್ ಆಫ್ ಇಂಡಿಯಾ"ಕ್ಕೆ ತಿಳಿಸಿದರು. ಡಿಸ್ಟಿಲ್ಡ್ ವಾಟರ್ ಅಥವಾ ಮೆದು ನೀರು ಇನ್ನೂ ಉತ್ತಮ. ಏಕೆಂದರೆ ಅವು ವಿಸ್ಕಿಯ ಮೂಲ ರುಚಿಯನ್ನು ಬದಲಾಯಿಸುವುದಿಲ್ಲ. ಆದರೆ ಖನಿಜಯುಕ್ತ ನೀರು ಹಾಗಲ್ಲ. ಅವುಗಳಲ್ಲಿರುವ ಖನಿಜ ಲವಣಗಳು ವಿಸ್ಕಿಯ ರುಚಿಯನ್ನು ಹಾಳುಮಾಡುತ್ತವೆ ಎಂದಿದ್ದಾರೆ..

ಇದನ್ನೂ ಓದಿ:ಮಾಜಿ ಸಂಸದರನ್ನು ಪ್ರೀತಿಸಿ ಮದುವೆಯಾದ ಹಿರಿಯ ನಟಿ! ಯಾರು ಗೊತ್ತೇ?   

ವೈನ್ ಮತ್ತು ಆಲ್ಕೋಹಾಲ್ ತಜ್ಞ ಸೊಮೆಲಿಯರ್ ಅಂಕುರ್ ಚಾವ್ಲಾ ಕೂಡ ಇದೇ ವಿಷಯದ ಬಗ್ಗೆ ಒಂದು ಪ್ರಯೋಗವನ್ನು ನಡೆಸಿದರು. ಅವರು ವಿವಿಧ ನೀರಿನೊಂದಿಗೆ ಬೆರೆಸಿದ 12 ವರ್ಷದ ಸಿಂಗಲ್ ಮಾಲ್ಟ್ ವಿಸ್ಕಿಯನ್ನು ರುಚಿ ನೋಡಿದರು. ಅದರಲ್ಲಿರುವ ನೈಸರ್ಗಿಕ ಬುಗ್ಗೆ ನೀರು (pH 7-7.5 ನೊಂದಿಗೆ) ವಿಸ್ಕಿಯ ಪರಿಮಳವನ್ನು ಬಹಳವಾಗಿ ಹೆಚ್ಚಿಸಿತು. ಆದರೆ ಹೆಚ್ಚಿನ ಖನಿಜಾಂಶವಿರುವ ನೀರು ಅಥವಾ RO ನೀರು ರುಚಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ತೀರ್ಮಾನಿಸಲಾಯಿತು.

ಸೂಚನೆ : ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯಾಗಿದೆ. ಇದು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯಿಸದಿರಬಹುದು. ಫಲಿತಾಂಶಗಳು ವ್ಯಕ್ತಿಗಳ ಆರೋಗ್ಯವನ್ನು ಅವಲಂಬಿಸಿರುತ್ತದೆ. ಇದನ್ನು ಗಣನೆಗೆ ತೆಗೆದುಕೊಳ್ಳುವ ಮೊದಲು, ಸಂಬಂಧಿತ ತಜ್ಞರಿಂದ ಸಲಹೆ ಪಡೆಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News