Munch Chocolate To God: ಹಿಂದೂ ದೇವಾಲಯಗಳಲ್ಲಿ ಪಾಯಸ, ಪೊಂಗಲ್, ಪುಳಿಯೋಗರೆ ಹೀಗೆ ವಿವಿಧ ಬಗೆಯ ಖಾದ್ಯಗಳನ್ನು ದೇವರಿಗೆ ನೇವೇದ್ಯವಾಗಿ ಆರ್ಪಿಸುತ್ತಾರೆ. ಆದರೆ, ಇಲ್ಲೊಂದು ದೇವಾಲಯದಲ್ಲಿ ಮಂಚ್ ಚಾಕೋಲೇಟ್ನ್ನ ದೇವರಿಗೆ ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ. ಇದರ ಹಿಂದಿನ ಕಥೆ ಕೇಳಿದರೆ ನಿಜಕ್ಕೂ ಅಚ್ಚರಿಗೊಳ್ಳುತ್ತೀರಿ.
ಹೌದು, ಎಲ್ಲಾ ಹಿಂದೂ ದೇವಾಲಯಗಳಲ್ಲಿ (Hindu Temples) ದೇವರಿಗೆ ನಾನಾ ವಿಧದ ಫಲ ಪುಷ್ಪಗಳು- ವಿವಿಧ ಬಗೆಯ ಖಾದ್ಯಗಳನ್ನು ನೇವೇದ್ಯವಾಗಿ ಅರ್ಪಿಸುತ್ತಾರೆ. ಉದಾಹರಣೆಗೆ-ಅಯ್ಯಪ್ಪನಿಗೆ ತುಪ್ಪ, ಕೃಷ್ಣನಿಗೆ ಬೆಣ್ಣೆ, ಗಣೇಶನಿಗೆ ಲಡ್ಡುಗಳನ್ನು ನೈವೇದ್ಯವಾಗಿ ನೀಡುವುದನ್ನ ನೀವು ನೋಡಿರ್ತಿರ. ಅಂತೆಯೇ, ಇವುಗಳನ್ನೇ ಪ್ರಸಾದವಾಗಿಯೂ ಸ್ವೀಕರಿಸಿರುತ್ತೀರಿ. ಆದರೆ, ಕೇರಳ ಒಂದು ಅಪರೂಪದ ದೇವಾಲಯದಲ್ಲಿ ಒಂದು ವಿಚಿತ್ರ ಆಚರಣೆ ನಡೆದುಕೊಂಡು ಬರುತ್ತಿದೆ.
ಇದನ್ನೂ ಓದಿ- ಮಳೆಗಾಲದಲ್ಲಿ ಮನೆಯ ಮುಂದೆ ಈ ಗಿಡವನ್ನು ತೂಗು ಹಾಕಿ… ಹಲ್ಲಿ, ಜೇಡ, ಇರುವೆ, ಸೊಳ್ಳೆ ಇದ್ಯಾವುದೂ ಬರಲ್ಲ!
ಕೇರಳದಲ್ಲಿರುವ ಮಂಚ್ ಮುರುಗನ್(Munch Murugan) ದೇವಸ್ಥಾನದಲ್ಲಿ ಮಂಚ್ ಚಾಕೋಲೇಟ್ ಅನ್ನು ದೇವರಿಗೆ ನೇವೇದ್ಯವಾಗಿ ಅರ್ಪಿಸಲಾಗುತ್ತದೆ. ಅಷ್ಟೇ ಅಲ್ಲ, ವಿಶೇಷ ಸಂದರ್ಭಗಳಲ್ಲಿ ಈ ದೇವಾಲಯದಲ್ಲಿ ಪ್ರಸಾದದ ರೂಪವಾಗಿ ಭಕ್ತರಿಗೆ ಮಂಚ್ ಚಾಕೋಲೇಟ್ನ್ನ ನೀಡಲಾಗುತ್ತದೆ. ಕಳೆದ ಆರು ವರ್ಷಗಳಿಂದ ಈ ಪ್ರತೀತಿ ಆರಂಭವಾಗಿದೆ ಎಂದು ದೇವಾಲಯವನ್ನು ನಿರ್ವಹಿಸುತ್ತಿರುವ ಅನೂಪ್ ಎ ಚೆಮ್ಮೋತ್, ಎಂಬುವರು ತಿಳಿಸಿದ್ದಾರೆ.
ಇದನ್ನೂ ಓದಿ- ಸುಧಾಮೂರ್ತಿ ಅವರ ಪ್ರಕಾರ ಗಂಡ ಹೆಂಡತಿ ಹೇಗಿರಬೇಕು..? ಅವರು ಹೇಳಿದ್ದೇನು..?
ಏನಿದರ ಹಿನ್ನಲೆ:
ವಾಸ್ತವವಾಗಿ ದೇವಾಲಯದಲ್ಲಿ ಒಮ್ಮೆ ಹುಡುಗನೊಬ್ಬ ಆಟವಾಡುವಾಗ ದೇವಸ್ಥಾನದ ಗಂಟೆಯನ್ನು ಬಾರಿಸಿದನು ಮತ್ತು ಹಾಗೆ ಮಾಡಿದ್ದಕ್ಕಾಗಿ ಅವನ ಪೋಷಕರು ಅವನನ್ನು ಗದರಿಸಿದ್ದರು. ಆ ರಾತ್ರಿ ಹುಡುಗನಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಆ ಬಾಲಕ ಮುರುಗನ್ ಹೆಸರನ್ನು ಗೊಣಗುತ್ತಲೇ ಇದ್ದ. ಮರುದಿನ, ಅವನ ಹೆತ್ತವರು ಅವನನ್ನು ದೇವಾಲಯಕ್ಕೆ ಕರೆತಂದರು. ಈ ಸಂದರ್ಭದಲ್ಲಿ ಅರ್ಚಕರು ದೇವರಿಗೆ ಏನನ್ನಾದರೂ ಅರ್ಪಿಸುವಂತೆ ಬಾಲಕನ ಪೋಷಕರನ್ನು ಕೇಳುತ್ತಾರೆ. ಹೆತ್ತವರು ಭಕ್ತಿ-ಭಾವದಿಂದ ದೇವರಿಗೆ ಹೂ-ಹಣ್ಣುಗಳನ್ನು ಅರ್ಪಿಸಿದರೆ, ಬಾಲಕ ಮೊಂಡುತನದಿಂದ ಗರ್ಭಗುಡಿಯಲ್ಲಿ ದೇವರಿಗೆ ಮಂಚ್ ಚಾಕೋಲೇಟ್ ಅರ್ಪಿಸಿದನು. ಈ ಕೂಡಲೇ ಪವಾದವೆಂಬಂತೆ ಬಾಲಕ ಗುಣಮುಖನಾದನು. ಆ ಬಳಿಕ ದೇವಾಲಯದಲ್ಲಿ ಮಂಚ್ ಚಾಕೋಲೇಟ್ ಅನ್ನು ನೇವೇದ್ಯವಾಗಿ ಅರ್ಪಿಸಿ, ಪ್ರಸಾದವಾಗಿ ವಿತರಿಸುವ ಪ್ರತೀತಿ ಬೆಳೆದುಕೊಂಡು ಬಂದಿದೆ ಎನ್ನಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.