Negative Energy: ನಿಮ್ಮ ಅಕ್ಕಪಕ್ಕದಲ್ಲಿಯೂ ಕೂಡ ನಕಾರಾತ್ಮಕ ಶಕ್ತಿಗಳಿರುತ್ತವೆ, ಅಪ್ಪಿತಪ್ಪಿಯೂ ಕೂಡ ಈ ಕೆಲಸ ಮಾಡಬೇಡಿ

Negative Energy: ನಕಾರಾತ್ಮಕ ಶಕ್ತಿಗಳು ಕೆಲವರ ಮೇಲೆ ಬೇಗ ಪ್ರಭಾವ ಬೀರುತ್ತವೆ. ಇಂತಹ ಜನರು ತಮ್ಮ ರೂಢಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಹಾಗಾದರೆ ಬನ್ನಿ ಯಾವ ರೂಢಿಗಳನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.

Written by - Nitin Tabib | Last Updated : Dec 23, 2020, 11:48 AM IST
  • ನಾವು ಜೀವನದಲ್ಲಿ ಮಾಡುವ ಕೆಲ ಕೆಲಸಗಳ ಕಾರಣ ಕೆಟ್ಟ ದೃಷ್ಟಿ ಅಥವಾ ನಕಾರಾತ್ಮಕ ಶಕ್ತಿ ಬೇಗನೆ ನಮ್ಮನ್ನು ಆವರಿಸುತ್ತವೆ.
  • ನಕಾರಾತ್ಮಕ ಶಕ್ತಿ ಆವರಿಸಿರುವ ಅಂತಹ ವ್ಯಕ್ತಿ ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾನೆ ಎನ್ನಲಾಗುತ್ತದೆ.
  • ಹಾಗಾದರೆ ಇದರಿಂದ ಹೇಗೆ ಪಾರಾಗಬೇಕು ಎಂಬುದನ್ನು ತಿಳಿಯೋಣ ಬನ್ನಿ.
Negative Energy: ನಿಮ್ಮ ಅಕ್ಕಪಕ್ಕದಲ್ಲಿಯೂ ಕೂಡ ನಕಾರಾತ್ಮಕ ಶಕ್ತಿಗಳಿರುತ್ತವೆ, ಅಪ್ಪಿತಪ್ಪಿಯೂ ಕೂಡ ಈ ಕೆಲಸ ಮಾಡಬೇಡಿ  title=
Negative Enegergy

ನವದೆಹಲಿ: Negative Energy - ಯಾವುದೇ ಓರ್ವ ವ್ಯಕ್ತಿಯ ಮೇಲೆ ಕೆಟ್ಟ ದೃಷ್ಟಿ ಬಿದ್ದರೆ ಅಥವಾ ಅವರನ್ನು ನಕಾರಾತ್ಮಕ ಶಕ್ತಿ ಆವರಿಸಿದರೆ ಅಂತಹ ವ್ಯಕ್ತಿ ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾನೆ ಎಂದು ಹೇಳಲಾಗುತ್ತದೆ. ಇದರಿಂದ ಆ ವ್ಯಕ್ತಿಯ ದೈನಂದಿನ ಜೀವನ ಪ್ರಭಾವಕ್ಕೆ ಒಳಗಾಗುತ್ತದೆ. ನಾವು ಜೀವನದಲ್ಲಿ ಮಾಡುವ ಕೆಲ ಕೆಲಸಗಳ ಕಾರಣ ಕೆಟ್ಟ ದೃಷ್ಟಿ ಅಥವಾ ನಕಾರಾತ್ಮಕ ಶಕ್ತಿ (Negative Energy) ಬೇಗನೆ ನಮ್ಮನ್ನು ಆವರಿಸುತ್ತವೆ. ಇವು ನಮ್ಮಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತರುತ್ತವೆ. ಇದರಿಂದ ವ್ಯಕ್ತಿ ಬಹುಬೇಗನೆ ಶಾರೀರಿಕ, ಆರ್ಥಿಕ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾನೆ. ಈ ಕೆಟ್ಟ ಶಕ್ತಿಗಳಿಂದ ಪಾರಾಗಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ಉಪಾಯಗಳನ್ನು ಸೂಚಿಸಲಾಗಿದೆ.

ಇದನ್ನು ಓದಿ- ಕಾಯಿಲೆಗಳ ಜೊತೆಗೆ ವಾಸ್ತುದೋಷದಿಂದಲೂ ಕೂಡ ಮುಕ್ತಿ ನೀಡುತ್ತವೆ ಈ ಸಸ್ಯಗಳು

ಸ್ವಚ್ಚತೆ ಕಾಪಾಡುವುದು ತುಂಬಾ ಮುಖ್ಯ
ಸನಾತನ ಸಂಸ್ಕೃತಿಯಲ್ಲಿ ಸ್ವಚ್ಚತೆಗೆ ಭಾರಿ ಮಹತ್ವ ನೀಡಲಾಗಿದೆ. ಯಾವುದೇ ಓರ್ವ ವ್ಯಕ್ತಿ ತನ್ನ ಜೀವನದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದೆ ಹೋದಲ್ಲಿ, ನಕಾರಾತ್ಮಕ ಶಕ್ತಿಗಳು ಬಹುಬೇಗ ಆತನನ್ನು ಆವರಿಸುತ್ತವೆ. ಕೆಟ್ಟ ದೃಷ್ಟಿಯಿಂದ ಪಾರಾಗಲು ನಿತ್ಯ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡುವುದು ಆವಶ್ಯಕ, ಸ್ವಚ್ಛ ಬಟ್ಟೆಗಳನ್ನು ಧರಿಸಬೇಕು. ಅಕ್ಕಪಕ್ಕದಲ್ಲಿ ಸ್ವಚ್ಛತೆ ಹಾಗೂ ಸ್ವಚ್ಛ ಜೀವನಶೈಲಿ ಅನುಸರಿಸುವುದರ ಜೊತೆಗೆ ವಿಚಾರಗಳನ್ನು ಶುದ್ಧವಾಗಿಡುವುದು ಕೂಡ ಅಷ್ಟೇ ಪ್ರಾಮುಖ್ಯತೆ ಹೊಂದಿದೆ.

ಇದನ್ನು ಓದಿ- BreakUP: ವಾರದ ಈ ದಿನ ಅತಿ ಹೆಚ್ಚು ಬ್ರೇಕ್ ಅಪ್ ಆಗುತ್ತವಂತೆ... ಕಾರಣ ಇಲ್ಲಿದೆ

ಏಕಾಂತ ಪ್ರದೇಶದಲ್ಲಿ ಗರ್ಭಿಣಿ ಮಹಿಳೆಯ ಸಂಚಾರ
ಗರ್ಭಿಣಿ ಮಹಿಳೆಯರಿಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಗರ್ಭಿಣಿಯರು ಏಕಾಂತ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಬೇಕು. ಇಷ್ಟ ದೇವತೆಯನ್ನು ಧ್ಯಾನ ಮಾಡುವ ಮೂಲಕ ಅವರು ದುಷ್ಟ ಶಕ್ತಿ ಹಾಗೂ ಕೆಟ್ಟದೃಷ್ಟಿಯಿಂದ ಪಾರಾಗಬಹುದು.

ಇದನ್ನು ಓದಿ-ಮನೆಯಲ್ಲಿ ದೇವಿ ಲಕ್ಷ್ಮಿಯ ಕೃಪೆ ನೆಲೆಸಲು ಮತ್ತು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೊಲಗಿಸುವ ಈ ಉಪಾಯಗಳು ನಿಮಗೆ ತಿಳಿದಿರಲಿ

ಇಚ್ಛಾ ಶಕ್ತಿಯ ಕೊರತೆ 
ಇಚ್ಛಾಶಕ್ತಿ ಕೊರತೆ ಹೊಂದಿರುವ ವ್ಯಕ್ತಿಗಳು ಸಣ್ಣಪುಟ್ಟ ವಿಷಯಗಳಿಗೆ ಹೆದರುವುದು ಜಾಸ್ತಿ. ಇವರ ಬಹುತೇಕ ಯೋಚನೆಗಳು ನಕಾರಾತ್ಮಕ ಯೋಚನೆಗಳಾಗಿರುತ್ತವೆ ಹಾಗೂ ಇವರು ಬಹುಬೇಗ ಕೆಟ್ಟ ದೃಷ್ಟಿಗೆ ಒಳಗಾಗುತ್ತಾರೆ. ಹೀಗಾಗಿ ಯಾವಾಗಲು ಬಲವಾದ ಇಚ್ಛಾಶಕ್ತಿ ಹೊಂದಲು ಪ್ರಯತ್ನಿಸಿ.

ಇದನ್ನು ಓದಿ-ವಾಸ್ತುದೋಷ ಪರಿಹಾರಕ್ಕೆ ನಿಮ್ಮ ಮನೆಯಲ್ಲಿರಲಿ ಈ ಅದ್ಭುತ ಸಸ್ಯಗಳು, ರೋಗಗಳಿಂದಲೂ ಕೂಡ ದೂರವಿರಬಹುದು

ಅತಿ ಹೆಚ್ಚು ಸುಗಂಧ ದ್ರವ್ಯ ಬಳಕೆ
ಕೆಲ ಜನರು ಪರ್ಫ್ಯೂಮ್ ಅನ್ನು ಅತಿ ಹೆಚ್ಚು ಬಳಕೆ ಮಾಡುತ್ತಾರೆ ಹಾಗೂ ಏಕಾಂತ ಪ್ರದೇಶಗಳಿಗೆ ಹೋಗುತ್ತಾರೆ. ಇವರ ಮೇಲೆ ದುಷ್ಟಶಕ್ತಿಗಳು (Negative Energy) ಬೇಗನೆ ಆವರಿಸಿಕೊಳ್ಳುತ್ತವೆ. ಇವರಿಗೆ ಕೆಟ್ಟ ದೃಷ್ಟಿ ಕೂಡ ಬೇಗ ತಗಲುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News