ದೇವರ ಮನೆಯಲ್ಲಿ ಈ ವಸ್ತುಗಳಿದ್ದರೆ ಪೂಜಾಫಲ ಸಿಗುವುದೇ ಇಲ್ಲ

ದೇವರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ . ಈ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಟ್ಟರೆ   ಪೂಜೆಯ ಫಲ ಸಿಗುವುದಿಲ್ಲ ಎನ್ನಲಾಗುತ್ತದೆ. 

Written by - Ranjitha R K | Last Updated : Mar 26, 2022, 01:54 PM IST
  • ದೇವರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡಬಾರದು
  • ಇದರಿಂದ ಅಶುಭ ಫಲ ಸಿಗುತ್ತದೆ.
  • ಈ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಟ್ಟರೆ ಪೂಜೆಯ ಫಲ ಸಿಗುವುದಿಲ್ಲ
 ದೇವರ ಮನೆಯಲ್ಲಿ ಈ ವಸ್ತುಗಳಿದ್ದರೆ ಪೂಜಾಫಲ ಸಿಗುವುದೇ ಇಲ್ಲ  title=
ದೇವರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡಬಾರದು (file photo)

ಬೆಂಗಳೂರು :  ಭಕ್ತರು ತಮ್ಮ ಆರಾಧ್ಯ ಮೂರ್ತಿಯನ್ನು ಮನೆಯಲ್ಲಿ ಬಹಳ ಉತ್ಸಾಹದಿಂದ ಪ್ರತಿಷ್ಠಾಪಿಸುತ್ತಾರೆ. ಹಾಗೆಯೇ ತಮ್ಮ ಇಷ್ಟ ದೇವರ ಕೃಪೆಗೆ ಪಾತ್ರರಾಗಲು ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಾರೆ (Pooja Room Vastu) . ಆದರೆ, ಭಕ್ತರು ಕೆಲವೊಂದು ಮುಖ್ಯ ವಿಚಾರಗಳನ್ನೇ ಮರೆತು ಬಿಡುತ್ತಾರೆ. ವಾಸ್ತು ಶಾಸ್ತ್ರ (Vastu Shastra) ಮತ್ತು ನಂಬಿಕೆಗಳೆರಡರ ಪ್ರಕಾರ, ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಡಬಾರದು. ಇದರಿಂದ ಅಶುಭ ಫಲ ಸಿಗುತ್ತದೆ. ಇನ್ನು ದೇವರ ಮನೆಯಲ್ಲಿ ಕೂಡಾ ಕೆಲವೊಂದು ವಸ್ತುಗಳನ್ನು ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ (Vastu Tips). ಈ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಟ್ಟರೆ   ಪೂಜೆಯ ಫಲ ಸಿಗುವುದಿಲ್ಲ ಎನ್ನಲಾಗುತ್ತದೆ. 
 
 ಪೂಜಾ ಮನೆಯಲ್ಲಿ ಇಡಬಾರದ 11 ವಸ್ತುಗಳು ಇವು : 
1.ಮನೆಯ ದೇವರ ಕೋಣೆಯಲ್ಲಿ ಹೆಬ್ಬೆರಳಿನ ಗಾತ್ರಕ್ಕಿಂತ ದೊಡ್ಡ  ಶಿವಲಿಂಗವನ್ನು (Shivalinga) ಇಡಬಾರದು .  
2.ಮುರಿದ ದೇವರ ವಿಗ್ರಹವು ನಕಾರಾತ್ಮಕತೆಯನ್ನು ಹರಡುತ್ತದೆ. ಈ ಕಾರಣದಿಂದ ಮುರಿದ ವಿಗ್ರಹ ಮತ್ತು ಫೋಟೋಗಳನ್ನು ದೇವರ ಮನೆಯಲ್ಲಿ ಇಡಬಾರದು. 
3.ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಬೆಳಿಗ್ಗೆ ದೇವರಿಗೆ ಅರ್ಪಿಸಿದ ಹೂವುಗಳನ್ನು ರಾತ್ರಿಯ ಮೊದಲು ತೆಗೆದುಹಾಕಬೇಕು.

ಇದನ್ನೂ ಓದಿ : ಮುಂದಿನ ಐದು ದಿನಗಳಲ್ಲಿ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ , ಇರಲಿದೆ ಶುಕ್ರನ ವಿಶೇಷ ಕೃಪೆ

4. ಒಣಗಿದ ಹೂವುಗಳನ್ನು ದೇವರ  ದೇವರ ಕೋಣೆಯಲ್ಲಿ ಇಡುವುದು ಅಥವಾ ದೇವರ ಮುಡಿಯಲ್ಲಿ ಇಡುವುದು ಅಶುಭ (Pooja Room Vastu) . 
5. ದೇವರ ಕೋಣೆಯಲ್ಲಿ ದೇವರ ದೊಡ್ಡ ಫೋಟೋವನ್ನು ಹಾಕಬಹುದು. ಆದರೆ ದೊಡ್ಡ ವಿಗ್ರಹಗಳನ್ನು ಇಡಬಾರದು . ಇದು ದಂಪತಿಗೆ ಒಳ್ಳೆಯದಲ್ಲ.
6.ಮನೆಯ ದೇವರ ಕೋಣೆಯಲ್ಲಿ ಒಂದು ಶಂಖವನ್ನು ಮಾತ್ರ ಇಡಬೇಕು. ಒಂದಕ್ಕಿಂತ ಹೆಚ್ಚು ಶಂಖವನ್ನು ಇಡುವುದು ಅಮಂಗಳಕರ ಎನ್ನಲಾಗಿದೆ (Pooja Room Vastu Tips). 
7.ದೇವರ ವಿಗ್ರಹವನ್ನು ಎತ್ತರದಲ್ಲಿ ಇಡುವುದು ಸೂಕ್ತ. ದೇವರನ್ನು ಇಡುವ ಮಂಟಪ ನೆಲದಿಂದ ಕನಿಷ್ಠ 2 ಇಂಚು ಎತ್ತರವಿರಬೇಕು . 
8.ದೇವರ ವಿಗ್ರಹದ ಮೇಲೆ ಏನನ್ನೂ ಇಡುವುದು ಸರಿಯಲ್ಲ, ಏನಾದರೂ ಇಟ್ಟಿದ್ದರೆ ಅದನ್ನು ತೆಗೆದು ಕೆಳಗೆ ಇಡಬೇಕು.
9.ದೇವರ ಕೋಣೆಯಲ್ಲಿ ಅಲ್ಯೂಮಿನಿಯಂ ಅಥವಾ ಗಾಜಿನ ಪಾತ್ರೆಯಲ್ಲಿ ನೀರನ್ನು ಇಡುವುದು ಅಶುಭವೆಂದು ಪರಿಗಣಿಸಲಾಗಿದೆ.
10.ದೇವರನ್ನು ಇಡುವ ಜಾಗದ ಸುತ್ತ ಅಥವಾ ಪೂಜಾ ಮನೆಯಲ್ಲಿ ಕಸದ ಡಬ್ಬಗಳನ್ನು  ಇಡಬಾರದು ಎಂದು ವಾಸ್ತು ಹೇಳುತ್ತದೆ.
11. ಮನೆಯಲ್ಲಿ ಮಲಗುವ ಕೋಣೆಯಲ್ಲಿ ದೇವರ ಮಂಟಪವಿದ್ದರೆ, ಅದನ್ನು ಪಾದಗಳ ಮುಂದೆ ಇಡಬಾರದು. ಈಶಾನ್ಯ ಮೂಲೆಯಲ್ಲಿ ಇಡಲು ಸಲಹೆ ನೀಡಲಾಗುತ್ತದೆ.

ಇದನ್ನೂ ಓದಿ : Guru Uday: ಇಂದಿನಿಂದ ಹೊಳೆಯಲಿದೆ ಈ 4 ರಾಶಿಯವರ ಅದೃಷ್ಟ

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News