ಈ ದಿನಗಳಲ್ಲಿ ತಪ್ಪಿಯೂ ತುಳಸಿ ಎಲೆ ಕೀಳಬಾರದು, ನೀರು ಅರ್ಪಿಸಬಾರದು ..!

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪೂಜ್ಯ ಸ್ಥಾನವಿದೆ. ತುಳಸಿ ಗಿಡದಲ್ಲಿ  ಲಕ್ಷ್ಮೀ  ದೇವಿ ನೆಲೆಸಿದ್ದಾಳೆ  ಎಂಬ ನಂಬಿಕೆಯಿದೆ.  ತುಳಸಿ ಗಿಡವನ್ನು ನಿಯಮಿತವಾಗಿ ಪೂಜಿಸುವ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ತಾಯಿ ಲಕ್ಷ್ಮೀ ಆ ಮನೆಯನ್ನು ಹರಸುತ್ತಾಳೆ ಎಂದು ಹೇಳಲಾಗುತ್ತದೆ.    

Written by - Ranjitha R K | Last Updated : Aug 3, 2022, 08:53 AM IST
  • ಹಿಂದೂ ಧರ್ಮದಲ್ಲಿ ತುಳಸಿಗೆ ಪೂಜ್ಯ ಸ್ಥಾನವಿದೆ.
  • ತುಳಸಿ ಪೂಜೆ ಮಾಡಿದರೆ ಲಕ್ಷ್ಮೀ ಆಶೀರ್ವಾದ ಸಿಗುತ್ತದೆ.
  • ತುಳಸಿ ಎಲೆಗಳನ್ನು ಕೀಳುವ ಮೊದಲು, ನಿಯಮಗಳು ತಿಳಿದಿರಲಿ
ಈ ದಿನಗಳಲ್ಲಿ ತಪ್ಪಿಯೂ ತುಳಸಿ ಎಲೆ ಕೀಳಬಾರದು, ನೀರು ಅರ್ಪಿಸಬಾರದು ..!  title=
Tulsi Plant Tips (file photo)

ಬೆಂಗಳೂರು : ಹಿಂದೂ ಧರ್ಮದಲ್ಲಿ ಅನೇಕ ಸಸ್ಯಗಳಿಗೆ ಪೂಜ್ಯ ಸ್ಥಾನವಿದೆ. ಇದರಲ್ಲಿ ತುಳಸಿ ಗಿಡವೂ ಸೇರಿದೆ. ತುಳಸಿ ಗಿಡದಲ್ಲಿ  ಲಕ್ಷ್ಮೀ ದೇವಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ತುಳಸಿಯನ್ನು ನಿಯಮಿತವಾಗಿ ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ಆದರೆ ತುಳಸಿ ಗಿಡಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಈ ವಿಷಯಗಳನ್ನು ನಿರ್ಲಕ್ಷಿಸಿದರೆ, ತಾಯಿ  ಲಕ್ಷ್ಮೀ ಮನೆ ತೊರೆಯುತ್ತಾಳೆ ಎನ್ನುವುದು ನಂಬಿಕೆ. 

ತುಳಸಿ ಗಿಡವನ್ನು ಪೂಜಿಸುವುದರ ಜೊತೆಗೆ, ಅದಕ್ಕೆ ನೀರನ್ನು ಅರ್ಪಿಸುವಾಗ ಅನೇಕ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೆಲವರಿಗೆ ಮುಂದೆ ಹಿಂದೆ ಯೋಚನೆ ಮಾಡದೆ, ಪೂಜಿಸುವ ತುಳಸಿ ಸಸ್ಯಗಳ ಎಲೆಯನ್ನು ಕೀಳುವ ಅಭ್ಯಾಸ ಇರುತ್ತದೆ. ಶಾಸ್ತ್ರಗಳ ಪ್ರಕಾರ ಹೀಗೆ ಮಾಡಬಾರದು. ಜ್ಯೋತಿಷ್ಯದಲ್ಲಿ ತುಳಸಿ ಎಲೆ ಕೀಳುವ ಬಗ್ಗೆ ಕೂಡಾ ಕೆಲವು ನಿಯಮಗಳನ್ನು  ಹೇಳಲಾಗಿದೆ. 

ಇದನ್ನೂ ಓದಿ : Lucky Gemstone: ಈ ರತ್ನ ಧರಿಸುವುದರಿಂದ ಅದ್ಭುತ ಲಾಭಗಳು ಸಿಗುತ್ತವೆ, ಮಲಗಿರುವ ಭಾಗ್ಯ ಕೂಡ ಬದಲಾಗುತ್ತದೆ

ತುಳಸಿ ಎಲೆಗಳನ್ನು ಕೀಳುವಾಗ ಈ ನಿಯಮಗಳು ನೆನಪಿರಲಿ : 
ಧರ್ಮಗ್ರಂಥಗಳ ಪ್ರಕಾರ, ತುಳಸಿಯು ಎಷ್ಟು ಪವಿತ್ರ ಎಂದರೆ ಭಗವಾನ್ ವಿಷ್ಣು ಅದನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡಿದ್ದಾನೆಯಂತೆ. ಇಷ್ಟೇ ಅಲ್ಲ, ತುಳಸಿ ಎಲೆಗಳಿಲ್ಲದ ಪ್ರಸಾದವನ್ನು ವಿಷ್ಣು ಸ್ವೀಕರಿಸುವುದಿಲ್ಲ ಎಂದು ಹೇಳಲಾಗುತ್ತದೆ. ನಂಬಿಕೆಗಳ ಪ್ರಕಾರ ತುಳಸಿ ಎಲೆಗಳನ್ನು ವೈದೃತಿ  ಮತ್ತು ವ್ಯತಿಪಾತ ಯೋಗಗಳಲ್ಲಿ ಕೀಳಬಾರದು. 

ಇದಲ್ಲದೆ ಮಂಗಳವಾರ, ಭಾನುವಾರ ಮತ್ತು ಶುಕ್ರವಾರ ಆಕಸ್ಮಿಕವಾಗಿ  ಕೂಡಾ ತುಳಸಿ ಎಲೆಗಳನ್ನು ಮುರಿಯಬಾರದು. ಹಾಗೆಯೇ ಏಕಾದಶಿ, ಅಮವಾಸ್ಯೆ, ಹುಣ್ಣಿಮೆ ತಿಥಿಗಳಲ್ಲಿ ಮುರಿಯಬಾರದು. 

ಸಂಕ್ರಾಂತಿಯ ದಿನದಂದು ತುಳಸಿ ಎಲೆ ಕೀಳಬಾರದು. ಅಷ್ಟೇ ಅಲ್ಲ ಮನೆಯಲ್ಲಿ ಮಗು ಜನಿಸಿದ ನಂತರ  16 ದಿನಗಳವರೆಗೆ ತುಳಸಿ ಗಿಡವನ್ನು ಮುಟ್ಟಬಾರದು. ಮನೆಯಲ್ಲಿ ಯಾರಾದರೂ ಸತ್ತರೆ ಹದಿಮೂರನೆಯ ದಿನದವರೆಗೆ ಅಂದರೆ ಸೂತಕ ಕಳೆಯುವವರೆಗೆ ತುಳಸಿ ಎಲೆಗಳನ್ನು ಮುರಿಯಬಾರದು. 

ಇದನ್ನೂ ಓದಿ : Kaal Sarp Dosh: ಜಾತಕದಲ್ಲಿ ಕಾಲಸರ್ಪ ದೋಷವಿದ್ದರೆ ಹೆದರಬೇಡಿ, ಊಹೆಗೂ ಮೀರಿ ಲಾಭ ನಿಮ್ಮದಾಗುತ್ತದೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಕೂಡಾ ತುಳಸಿ ಎಲೆಗಳನ್ನು ಕೀಳಬಾರದು ಎಂದು ಹೇಳಲಾಗುತ್ತದೆ. 

ತುಳಸಿ ಎಲೆಗಳನ್ನು ಚಾಕು, ಕತ್ತರಿ ಮತ್ತು ಉಗುರುಗಳಿಂದ  ಮುರಿಯಬಾರದು. ಇನ್ನು ತುಳಸಿ ಎಲೆಗಳನ್ನು ಕೀಳುವಾಗಲೂ ಕೂಡಾ ಪ್ರತಿಯೊಂದು ಎಲೆಯನ್ನು ಮುರಿಯದೆ ಅದರ  ಮೇಲಿನ ಎಲೆಗಳನ್ನು ಮಾತ್ರ ತೆಗೆಯಬೇಕು. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ  ಮಾಹಿತಿ  ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News