Chia Seeds And Cinnamon Water For Weight Loss: ಕೆಲಸದ ಒತ್ತಡ ಹಾಗೂ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಂಕಗಳಿಸುವ ಉದ್ದೇಶದಿಂದ ಜನರಿಗೆ ತಮ್ಮ ಆಹಾರದ ಕಡೆಗೆ ಸಂಪೂರ್ಣ ಗಮನವನ್ನು ನೀಡಲು ಸಾಧ್ಯವಾಗುತ್ತಿಲ್ಲ. ರಾತ್ರಿಯಲ್ಲಿ ಅಡುಗೆ ಮಾಡುವುದನ್ನು ತಪ್ಪಿಸಲು, ಹೊರಗಿನಿಂದ ಆಹಾರ ಪದಾರ್ಥಗಳನ್ನು ಆರ್ಡರ್ ಮಾಡಿ ತರಿಸಿಕೊಳ್ಳುವುದು ಆರೋಗ್ಯದ ಮೇಲೆ ಪರಿಣಾಮ ಬೇರುತ್ತಿದೆ. ಈ ಕಾರಣದಿಂದಾಗಿ, ದೇಹದಲ್ಲಿ ಬೊಜ್ಜು ಹೆಚ್ಚಾಗಲು ಪ್ರಾರಂಭಿಸುತ್ತದೆ. ಸ್ಥೂಲಕಾಯತೆಯಿಂದಾಗಿ, ನೀವು ಹೆಚ್ಚಾಗಿ ಆಯಾಸವನ್ನು ಅನುಭವಿಸುತ್ತೀರಿ ಮತ್ತು ನೀವು ಕಡಿಮೆ ದೈಹಿಕ ಚಟುವಟಿಕೆ ಮಾಉಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ತೂಕ ಹೆಚ್ಚಾಗುತ್ತಲೇ ಇರುತ್ತದೆ. ಹೆಚ್ಚುತ್ತಿರುವ ತೂಕವು ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ಸುಲಭವಾದ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ತೂಕವನ್ನು ನಿಯಂತ್ರಿಸಿಕೊಳ್ಳಬಹುದು. ಇದಕ್ಕಾಗಿ ನೀವು ದಾಲ್ಚಿನ್ನಿ ಮತ್ತು ಚಿಯಾ ಸೀಡ್ಸ್ ನೀರನ್ನು ಸೇವಿಸಬಹುದು. ಈ ಪರಿಹಾರವನ್ನು ನಿರಂತರವಾಗಿ ಮಾಡುವುದರಿಂದ, ನಿಮ್ಮ ತೂಕವು ನಿಯಂತ್ರಣದಲ್ಲಿರುತ್ತದೆ. ಈ ಪರಿಹಾರದ ಇತರ ಕೆಲ ಪ್ರಹೊಜನಗಳನ್ನು ತಿಳಿದುಕೊಳ್ಳೋಣ ಬನ್ನಿ, .
ಹಸಿವು ನೀಗಿಸುತ್ತದೆ
ಕಡಿಮೆ ಅವಧಿಯಲ್ಲಿ ಜಂಕ್ ಫುಡ್ ತಿನ್ನುವುದು ನಿಮ್ಮ ತೂಕವನ್ನು ವೇಗವಾಗಿ ಹೆಚ್ಚಿಸುತ್ತದೆ. ಆದರೆ, ನೀವು ದಾಲ್ಚಿನ್ನಿ ಮತ್ತು ಚಿಯಾ ಬೀಜಗಳನ್ನು ಸೇವಿಸಿದಾಗ, ಅವುಗಳಲ್ಲಿ ಇರುವ ಕರಗುವ ಫೈಬರ್ ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ. ಈ ಕಾರಣದಿಂದಾಗಿ, ನೀವು ಮತ್ತೆ ಮತ್ತೆ ತಿನ್ನುವ ಅಗತ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕ್ಯಾಲೊರಿಗಳು ಸಹ ನಿಯಂತ್ರಣದಲ್ಲಿರುತ್ತವೆ.
ರಕ್ತದಲ್ಲಿನ ಸಕ್ಕರೆ ನಿಯಂತ್ರಣ
ಅನಿಯಂತ್ರಿತ ರಕ್ತದಲ್ಲಿನ ಸಕ್ಕರೆ ನಿಮ್ಮ ತೂಕ ಇಳಿಕೆಯ ಪ್ರಯತ್ನಗಳನ್ನು ಹಾಳುಮಾಡುತ್ತದೆ. ಇದು ಶಕ್ತಿಯ ಮಟ್ಟವನ್ನು ಕಡಿಮೆ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ, ನೀವು ದಾಲ್ಚಿನ್ನಿ ಮತ್ತು ಚಿಯಾ ಬೀಜಗಳ ನೀರನ್ನು ಸೇವಿಸಬಹುದು. ದಾಲ್ಚಿನ್ನಿಯಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತವೆ ಮತ್ತು ಗ್ಲೂಕೋಸ್ ಚಯಾಪಚಯವನ್ನು ಸುಧಾರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ.
ಜೀರ್ಣಾಂಗ ವ್ಯವಸ್ಥೆಗೆ ಅವಶ್ಯಕ
ತೂಕವನ್ನು ಕಳೆದುಕೊಳ್ಳಲು, ಉತ್ತಮವಾದ ಪಚನ ಕ್ರಿಯೆಯನ್ನು ಹೊಂದಿರುವುದು ತುಂಬಾ ಮುಖ್ಯ. ಚಿಯಾ ಬೀಜಗಳಲ್ಲಿರುವ ಫೈಬರ್ ನಿಮ್ಮ ಕರುಳಿನ ಚಲನೆಯನ್ನು ಸಕ್ರಿಯಗೊಳಿಸುತ್ತದೆ. ಇದರಿಂದಾಗಿ ನಿಮಗೆ ಯಾವುದೇ ರೀತಿಯ ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆ ಇರುವುದಿಲ್ಲ. ಇದೇ ವೇಳೆ, ದಾಲ್ಚಿನ್ನಿಯಲ್ಲಿರುವ ಉರಿಯೂತದ ಗುಣಲಕ್ಷಣಗಳು ಕರುಳಿನ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಚಯಾಪಚಯ ಹೆಚ್ಚಿಸುತ್ತದೆ
ಚಯಾಪಚಯ ಪ್ರಕ್ರಿಯೆಯಲ್ಲಿನ ಸುಧಾರಣೆಯಿಂದಾಗಿ, ನೀವು ಆಹಾರವನ್ನು ವೇಗವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ನಿಮ್ಮ ತೂಕ ಬೇಗನೆ ನಿಯಂತ್ರಣಕ್ಕೆ ಬರುತ್ತದೆ. ಹೆಚ್ಚುವರಿಯಾಗಿ, ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ಸುಡುತ್ತದೆ. ದಾಲ್ಚಿನ್ನಿ ಮತ್ತು ಚಿಯಾ ಬೀಜಗಳಲ್ಲಿನ ಒಮೆಗಾ 3 ಕೊಬ್ಬಿನಾಮ್ಲಗಳು ಚಯಾಪಚಯವನ್ನು ದರವನ್ನು ಹೆಚ್ಚಿಸುತ್ತವೆ.
ಇದನ್ನೂ ಓದಿ-Virat Kohli-Shreyas Iyer ನಂತಹ ಸುಂದರ ಗಡ್ಡ ನಿಮ್ಮದಾಗಬೇಕೆ? ಮನೆಯಲ್ಲಿಯೇ ತಯಾರಿಸಿ ಈ ಬಿಯರ್ಡ್ ಮಾಸ್ಕ್ !
ದಾಲ್ಚಿನ್ನಿ ಮತ್ತು ಚಿಯಾ ಬೀಜಗಳನ್ನು ನೀರನ್ನು ಹೇಗೆ ತಯಾರಿಸಬೇಕು?
>> ಇದಕ್ಕಾಗಿ ಮೊದಲು ರಾತ್ರಿ, ಒಂದು ಕಪ್ ನೀರಿನಲ್ಲಿ ಅರ್ಧ ಟೀಚಮಚ ಚಿಯಾ ಬೀಜಗಳನ್ನು ನೆನೆಹಾಕಿ.
>> ಮಾರನೇ ದಿನ, ಬಾಣಲೆಯಲ್ಲಿ ಸುಮಾರು ಎರಡು ಕಪ್ ನೀರನ್ನು ಕುದಿಸಿ.
>> ಈ ನೀರಿನಲ್ಲಿ ಸುಮಾರು ಕಾಲು ಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಮತ್ತು ಕುದಿಸಿ.
>> ಸುಮಾರು ಒಂದೂವರೆ ಕಪ್ ನೀರು ಉಳಿದಿರುವಾಗ, ಗ್ಯಾಸ್ ಆಫ್ ಮಾಡಿ.
>> ಈಗ ನೀರು ಸಾಮಾನ್ಯ ತಾಪಮಾನಕ್ಕೆ ಬರಲು ಬಿಡಿ. ಅದರಲ್ಲಿ ಚಿಯಾ ಸೀಡ್ಸ್ ನೀರನ್ನು ಸೇರಿಸಿ.
>> ಇದರ ನಂತರ, ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ.
>> ಕೆಲವೇ ದಿನಗಳಲ್ಲಿ ನಿಮಗೆ ವ್ಯತ್ಯಾಸ ಗೋಚರಿಸಲಿದೆ.
ಇದನ್ನೂ ಓದಿ-ಬೇಸಿಗೆಯಲ್ಲಿ ಸೊಂಫು ಸೇವನೆಯಿಂದಾಗುವ ಈ 5 ಅದ್ಭುತ ಲಾಭಗಳು ನಿಮಗೆ ತಿಳಿದಿವೆಯೇ?
(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.