ನವದೆಹಲಿ : ಸನಾತನ ಧರ್ಮದಲ್ಲಿ ಬಹುತೇಕ ಎಲ್ಲಾ ದೇವ-ದೇವತೆಗಳಿಗೆ (God-Goddess) ತೆಂಗಿನಕಾಯಿಯನ್ನು ಅರ್ಪಿಸಲಾಗುತ್ತದೆ. ಪೂಜೆಗೆ ತೆಂಗಿನಕಾಯಿ ಇಲ್ಲದೆ ಹೋದರೆ ಆ ಪೂಜೆ ಅಪೂರ್ಣವೇ ಸರಿ. ತೆಂಗಿನಕಾಯಿ ಇಲ್ಲದೆ ಯಾವುದೇ ಪೂಜೆ ಮತ್ತು ಶುಭ ಕಾರ್ಯಗಳು ನೆರವೇರುವುದಿಲ್ಲ. ಈ ಕಾರಣದಿಂದಾಗಿಯೇ ಇದನ್ನು ಶ್ರೀಫಲ (Shrifal) ಎಂದು ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ, ತೆಂಗಿನಕಾಯಿಯನ್ನು (Coconut) ಅತ್ಯಂತ ಪವಿತ್ರವಾದ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಇದರಲ್ಲಿ ವಾಸಿಸುತ್ತಾರೆ ಎನ್ನಲಾಗಿದೆ. ದೇವರಿಗೆ ತೆಂಗಿನಕಾಯಿ ಅರ್ಪಿಸುವುದರಿಂದ ಭಕ್ತರ ಎಲ್ಲಾ ದುಃಖಗಳು ಮತ್ತು ನೋವುಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.
ಶುಭ ಸಂದರ್ಭದಲ್ಲಿ ತೆಂಗಿನಕಾಯಿ ಒಡೆಯವ ಹಿಂದಿನ ಕಾರಣಗಳು :
ದೇವರಿಗೆ ತೆಂಗಿನಕಾಯಿ (Coconut) ಅರ್ಪಿಸುವುದರ ಜೊತೆಗೆ, ಪ್ರತಿ ಶುಭ ಸಂದರ್ಭದಲ್ಲಿ ತೆಂಗಿನಕಾಯಿಯನ್ನು ಒಡೆಯಲಾಗುತ್ತದೆ. ತೆಂಗಿನಕಾಯಿಯನ್ನು ಮುಖ್ಯವಾಗಿ ಪ್ರಸಾದದಲ್ಲಿ ಬಳಸಲಾಗುತ್ತದೆ. ಇದಲ್ಲದೇ, ಹಲವು ದಿನಗಳ ಕಾಲ ನಡೆಯುವ ಉಪವಾಸದ (Fasting) ಸಂಕಲ್ಪವನ್ನು ಕೂಡಾ ಭಗವಂತನಿಗೆ ತೆಂಗಿನಕಾಯಿ ಅರ್ಪಿಸುವ ಮೂಲಕ ಮಾಡಿಕೊಳ್ಳಲಾಗುತ್ತದೆ. ಮತ್ತೊಂದೆಡೆ, ಪೂಜೆಯಲ್ಲಿ ತೆಂಗಿನಕಾಯಿ ಒಡೆಯುವುದು ಎಂದರೆ, ಆ ವ್ಯಕ್ತಿಯು ದೇವರ ಪಾದದಲ್ಲಿ ತನ್ನನ್ನು ಅರ್ಪಿಸಿಕೊಂಡಿದ್ದಾನೆ ಎಂದರ್ಥ. ಅಲ್ಲದೆ, ಹಿಂದಿನ ಕಾಲದಲ್ಲಿ ನಡೆದುಕೊಂಡು ಬಂದ ಬಳಿ ಕೊಡುವ ಸಂಪ್ರದಾಯವನ್ನು ಮುರಿದು ಹಾಕುವ ಸಲುವಾಗಿ ಕೂಡಾ ತೆಂಗಿನಕಾಯಿ ಒಡೆಯುವ ಸಂಪ್ರದಾಯವನ್ನು ಆರಂಭಿಸಲಾಯಿತು.
ಇದನ್ನೂ ಓದಿ: Year 2021 Horoscope: ಮುಂದಿನ 4 ತಿಂಗಳವರೆಗೆ ಈ ರಾಶಿಯವರ ಜೀವನದಲ್ಲಿ ಖುಷಿಯೋ ಖುಷಿ, ನಿಮ್ಮ ರಾಶಿ ಯಾವುದು ?
ತೆಂಗಿನ ಮರ ಬಹಳ ಮಂಗಳಕರ :
ತೆಂಗಿನ ಮರವನ್ನು ಧರ್ಮ ಮತ್ತು ಜ್ಯೋತಿಷ್ಯ (Astrology) ಎರಡರಲ್ಲೂ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ತೆಂಗಿನ ಮರ (Coconut Tree) ಇದ್ದರೆ, ಅನೇಕ ವಾಸ್ತು ದೋಷಗಳು ನಿವಾರಣೆಯಾಗುತ್ತದೆಯಂತೆ. ಮತ್ತೊಂದೆಡೆ, ತೆಂಗಿನ ಮರವನ್ನು ಪೂಜಿಸಿದರೆ ವಿಷ್ಣು ಸಂತಸಗೊಳ್ಳುತ್ತಾನೆ ಎನ್ನುವುದು ಕೂಡಾ ನಂಬಿಕೆ. ಇನ್ನು ಜಾತಕದಲ್ಲಿನ ದೋಷಗಳನ್ನು ನಿವಾರಿಸಲು, ತೆಂಗಿನ ಮರವನ್ನು ಪೂಜಿಸುವಂತೆ ಸೂಚಿಸಲಾಗಿದೆ.
ಭಗವಾನ್ ವಿಷ್ಣು (Lord Vishnu) ಭೂಮಿಯ ಮೇಲೆ ಅವತರಿಸಿದಾಗ, ಆತ ತನ್ನೊಂದಿಗೆ ಲಕ್ಷ್ಮಿ (Godess Lakshmi), ತೆಂಗಿನ ಮರ ಮತ್ತು ಕಾಮಧೇನುಗಳನ್ನು ತಂದಿದ್ದನಂತೆ. ತೆಂಗಿನ ಮರವನ್ನು ಕಲ್ಪವೃಕ್ಷ (Kalpavriksha) ಎಂದೂ ಕರೆಯುತ್ತಾರೆ. ಇದರ ಹೊರತಾಗಿ, ಇದನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗಿದೆ. ತೆಂಗಿನ ಮರ ಇರುವ ಮನೆಯಲ್ಲಿ ಯಾವಾಗಲೂ ಸಂಪತ್ತು ಮತ್ತು ಸಮೃದ್ಧಿ ನೆಲೆಯಾಗುತ್ತದೆಯಂತೆ ..
ಇದನ್ನೂ ಓದಿ: Ganesh Chaturthi 2021: ಗಣೇಶ ಚತುರ್ಥಿಯಂದು ಚಂದ್ರನನ್ನು ಏಕೆ ನೋಡಬಾರದು, ಇಲ್ಲಿದೆ ಕಾರಣ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.