NRIಗಳಿಂದ FDIಗೆ ಭಾರೀ ಫಂಡ್: ವಿದೇಶದಿಂದ ಹಣ ಕಳುಹಿಸುವವರಲ್ಲಿ ಭಾರತೀಯರೇ ಮುಂದು

NRI News: ಈ ಮೊತ್ತ ಎಷ್ಟು ಬೃಹತ್ ಮಟ್ಟದ್ದು ಎಂದು ತಿಳಿಸಲು ಇದನ್ನು ಷೇರು ಮಾರುಕಟ್ಟೆಯಲ್ಲಿ ಬರುವ ಎಫ್‌ಡಿಐಗೆ ಹೋಲಿಸಲಾಗಿದೆ. ದೇಶದ ಷೇರು ಮಾರುಕಟ್ಟೆಯಲ್ಲಿ ಬರುವ ಎಫ್‌ಡಿಐಗಿಂತ ಶೇಕಡ 25ರಷ್ಟು ಹೆಚ್ಚಿನ ಮೊತ್ತವನ್ನು ಎನ್ ಆರ್ ಐಗಳು ತನ್ನ ದೇಶಕ್ಕೆ ಕಳುಹಿಸಿರಬೇಕು. ಅಂತೆಯೇ ಈ ಬಾರಿ ಶೇಕಡಾ 12 ರಷ್ಟು ಪಟ್ಟು ಹೆಚ್ಚಾಗಿದೆ. ಇನ್ನು ರೂಪಾಯಿ ಎದುರು ಡಾಲರ್ ಮೌಲ್ಯದ ಹೆಚ್ಚಳದಿಂದಾಗಿ ಈ ವರ್ಷ ವಿದೇಶದಿಂದ ಕಳುಹಿಸುವ ಮೊತ್ತವೂ ಹೆಚ್ಚಿದೆ.

Written by - Bhavishya Shetty | Last Updated : Dec 5, 2022, 04:05 PM IST
    • ಭಾರತಕ್ಕೆ ವಿದೇಶದಿಂದ ಬಂದ ಮೊತ್ತವು ಶೇಕಡಾ 12 ರಷ್ಟು ಹೆಚ್ಚಾಗಿದೆ
    • ಈ ವರ್ಷ ದೇಶಕ್ಕೆ ಹಣ ಕಳುಹಿಸುವಲ್ಲಿ ಹೊಸ ದಾಖಲೆ ನಿರ್ಮಾಣ
    • ವಿಶ್ವಬ್ಯಾಂಕ್‌ನ ವಲಸೆ ಮತ್ತು ಅಭಿವೃದ್ಧಿಯಿಂದ ಸಂಕ್ಷಿಪ್ತ ಮಾಹಿತಿ
NRIಗಳಿಂದ FDIಗೆ ಭಾರೀ ಫಂಡ್: ವಿದೇಶದಿಂದ ಹಣ ಕಳುಹಿಸುವವರಲ್ಲಿ ಭಾರತೀಯರೇ ಮುಂದು  title=
World Bank

NRI News: ವಿಶ್ವಬ್ಯಾಂಕ್‌ನ ವಲಸೆ ಮತ್ತು ಅಭಿವೃದ್ಧಿ ಸಂಕ್ಷಿಪ್ತ ಮಾಹಿತಿಯ ಪ್ರಕಾರ ಈ ವರ್ಷ ಭಾರತಕ್ಕೆ ವಿದೇಶದಿಂದ ಬಂದ ಮೊತ್ತವು ಶೇಕಡಾ 12 ರಷ್ಟು ಹೆಚ್ಚಾಗಿದೆ. ಹೀಗಾಗಿ ವಿದೇಶದಲ್ಲಿ ಆದಾಯ ಗಳಿಸುತ್ತಿರುವ ಭಾರತೀಯರು ಈ ವರ್ಷ ದೇಶಕ್ಕೆ ಹಣ ಕಳುಹಿಸುವಲ್ಲಿ ಹೊಸ ದಾಖಲೆ ಬರೆದಿದ್ದಾರೆ. ವರ್ಷಾಂತ್ಯದ ವೇಳೆಗೆ ಭಾರತೀಯರು ಸುಮಾರು 100 ಶತಕೋಟಿ ಡಾಲರ್ ಅಂದರೆ 8 ಲಕ್ಷ ಕೋಟಿ ರೂಪಾಯಿಗಳನ್ನು ತಮ್ಮ ದೇಶಕ್ಕೆ ಕಳುಹಿಸುತ್ತಾರೆ ಎಂದು ಅಂದಾಜಿಸಲಾಗಿದೆ.

ಈ ಮೊತ್ತ ಎಷ್ಟು ಬೃಹತ್ ಮಟ್ಟದ್ದು ಎಂದು ತಿಳಿಸಲು ಇದನ್ನು ಷೇರು ಮಾರುಕಟ್ಟೆಯಲ್ಲಿ ಬರುವ ಎಫ್‌ಡಿಐಗೆ ಹೋಲಿಸಲಾಗಿದೆ. ದೇಶದ ಷೇರು ಮಾರುಕಟ್ಟೆಯಲ್ಲಿ ಬರುವ ಎಫ್‌ಡಿಐಗಿಂತ ಶೇಕಡ 25ರಷ್ಟು ಹೆಚ್ಚಿನ ಮೊತ್ತವನ್ನು ಎನ್ ಆರ್ ಐಗಳು ತನ್ನ ದೇಶಕ್ಕೆ ಕಳುಹಿಸಿರಬೇಕು. ಅಂತೆಯೇ ಈ ಬಾರಿ ಶೇಕಡಾ 12 ರಷ್ಟು ಪಟ್ಟು ಹೆಚ್ಚಾಗಿದೆ. ಇನ್ನು ರೂಪಾಯಿ ಎದುರು ಡಾಲರ್ ಮೌಲ್ಯದ ಹೆಚ್ಚಳದಿಂದಾಗಿ ಈ ವರ್ಷ ವಿದೇಶದಿಂದ ಕಳುಹಿಸುವ ಮೊತ್ತವೂ ಹೆಚ್ಚಿದೆ. ವಿದೇಶದಲ್ಲಿ ನೆಲೆಸಿರುವ ಭಾರತೀಯರು ದೇಶಕ್ಕೆ ವಾಪಸ್ ಕಳುಹಿಸುವ ಮೊತ್ತ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಹೆಚ್ಚುತ್ತಿದೆ. ಮುಂದಿನ ವರ್ಷಗಳಲ್ಲಿ ಇದು ಇನ್ನೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: NRI CEO: ಅಮೆರಿಕಾದಲ್ಲಿ ಭಾರತೀಯರ ಕಮಾಲ್: ಈ ಯಶಸ್ಸಿನ ಹಿಂದಿದೆ ಮಹತ್ವದ ಕಾರಣಗಳು

ಹಣ ಸ್ವೀಕರಿಸುವಲ್ಲಿ ಭಾರತ ವಿಶ್ವದಲ್ಲೇ ನಂಬರ್ 1 ಆಗಿದ್ದು, ಭಾರತ ಈಗ ಹಣ ರವಾನೆ ಸ್ವೀಕರಿಸುವ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವಿಷಯದಲ್ಲಿ ಭಾರತವು ಮೆಕ್ಸಿಕೊ, ಚೀನಾ ಮತ್ತು ಫಿಲಿಪ್ಪೀನ್ಸ್‌ಗಳನ್ನು ಹಿಂದಿಕ್ಕಿದೆ.

ಭಾರತ, ಚೀನಾ, ಮೆಕ್ಸಿಕೊ, ಫಿಲಿಪೈನ್ಸ್ ಮತ್ತು ಈಜಿಪ್ಟ್ ಡಾಲರ್‌ಗಳಲ್ಲಿ ವಿದೇಶದಿಂದ ಹಣ ರವಾನೆ ಪಡೆಯುವ ಮೊದಲ ಐದು ದೇಶಗಳ ಪಟ್ಟಿಯಲ್ಲಿವೆ. ಇನ್ನು ಕಳೆದ ವರ್ಷ ಚೀನಾ ಮತ್ತು ಮೆಕ್ಸಿಕೋ ಡಾಲರ್ 53-53 ಬಿಲಿಯನ್ ಹಣ ಸ್ವೀಕರಿಸಿತ್ತು. ಫಿಲಿಪೈನ್ಸ್ $ 36 ಬಿಲಿಯನ್ ಮತ್ತು ಈಜಿಪ್ಟ್ $ 33 ಬಿಲಿಯನ್ ಹಣವನ್ನು ಸ್ವೀಕರಿಸಿತ್ತು.

ಈ ಹಿಂದೆ ಭಾರತದಿಂದ ಕೌಶಲ್ಯರಹಿತ ಕಾರ್ಮಿಕರು ಕಡಿಮೆ ಆದಾಯ ಸಿಕ್ಕರೂ ಸಮಸ್ಯೆಯಿಲ್ಲ ಎಂದು ಗಲ್ಫ್ ರಾಷ್ಟ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಈಗ ವಿದೇಶಕ್ಕೆ ಹೋಗುವ ಭಾರತೀಯರಲ್ಲಿ ಹೆಚ್ಚು ಕೌಶಲ್ಯ ಹೊಂದಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಜನರು ಅಮೆರಿಕ, ಇಂಗ್ಲೆಂಡ್, ಸಿಂಗಾಪುರ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಂತಹ ಹೆಚ್ಚಿನ ಆದಾಯದ ದೇಶಗಳಿಗೆ ಹೋಗುತ್ತಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಟ್ರೆಂಡ್ ಬದಲಾಗಿದೆ. ವಿದೇಶದಲ್ಲಿ ನೆಲೆಸಿರುವ ಭಾರತೀಯರು ಕಳೆದ ವರ್ಷ ಭಾರತಕ್ಕೆ ಸುಮಾರು 87 ಬಿಲಿಯನ್ ಡಾಲರ್ ಕಳುಹಿಸಿದ್ದು, ಅದರಲ್ಲಿ ಅಮೆರಿಕದಿಂದ ಗರಿಷ್ಠ ಮೊತ್ತ ಬಂದಿತ್ತು. ಇದಕ್ಕೂ ಮುನ್ನ ಅಂದರೆ 2020ರಲ್ಲಿ ಸುಮಾರು 83 ಬಿಲಿಯನ್ ಡಾಲರ್‌ಗಳನ್ನು ಭಾರತೀಯರು ತಮ್ಮ ದೇಶಕ್ಕೆ ಕಳುಹಿಸಿದ್ದರು. 2016-17 ಮತ್ತು 2020-21 ರ ನಡುವಿನ 4 ವರ್ಷಗಳಲ್ಲಿ ಯುಎಸ್, ಯುಕೆ ಮತ್ತು ಸಿಂಗಾಪುರದಿಂದ ರವಾನೆಗಳ ಪಾಲು 26% ರಿಂದ 36% ಕ್ಕೆ ಏರಿದೆ.

5 ಗಲ್ಫ್ ರಾಷ್ಟ್ರಗಳಿಂದ ಕಳುಹಿಸಲಾದ ಮೊತ್ತದಲ್ಲಿ ಇಳಿಕೆ ಕಂಡುಬಂದಿದೆ. ಅಂದರೆ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಕುವೈತ್, ಓಮನ್ ಮತ್ತು ಕತಾರ್, ಇದು 54 ರಿಂದ 28 ಕ್ಕೆ ಕುಸಿದಿದೆ.

ಅಮೆರಿಕದಿಂದ ಗರಿಷ್ಠ ಮೊತ್ತ ಬಂದಿದ್ದು 2020-21ರಲ್ಲಿ ವಿದೇಶದಿಂದ ಭಾರತಕ್ಕೆ ಕಳುಹಿಸಿರುವ ಮೊತ್ತದಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ. ಈ ವಿಷಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು ಅಮೆರಿಕ ಹಿಂದಿಕ್ಕಿದೆ. ವರದಿಯ ಪ್ರಕಾರ ಅನೇಕ ಜನರು ಪದವಿಯನ್ನು ಪಡೆದವರೇ ಆಗಿದ್ದು, ಇದು ಅವರಿಗೆ ಹೆಚ್ಚು ಹಣ ಗಳಿಸುವ ಅವಕಾಶವನ್ನು ನೀಡಿದೆ. ಜನರ ಆದಾಯ ಹೆಚ್ಚಾದಾಗ ಭಾರತಕ್ಕೂ ಹೆಚ್ಚು ಹಣ ರವಾನಿಸಿದ್ದಾರೆ.

ಇದನ್ನೂ ಓದಿ: NRI Death: ತಾಯಿಯ ಹುಟ್ಟುಹಬ್ಬ ಆಚರಿಸಲು ಬಂದಿದ್ದ ಮಗ 10 ನೇ ಮಹಡಿಯಿಂದ ಬಿದ್ದು ದಾರುಣ ಸಾವು!

2022ರಲ್ಲಿ ವಿದೇಶಿ ಹೂಡಿಕೆ ಹೆಚ್ಚಾಗಬಹುದು. ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಾಗುವ ಅಂದಾಜಿದೆ. ಈ ವರ್ಷ 100 ಬಿಲಿಯನ್ ಡಾಲರ್ ದಾಟಬಹುದು ಎಂದು ನಂಬಲಾಗಿದೆ. ಆರ್ಥಿಕ ಸುಧಾರಣೆಗಳು ಮತ್ತು ವ್ಯಾಪಾರ-ಸ್ನೇಹಿ ವಾತಾವರಣದಿಂದಾಗಿ ಭಾರತದಲ್ಲಿ ವಿದೇಶಿ ಹೂಡಿಕೆಯು 100 ಶತಕೋಟಿ ಡಾಲರ್ ಗಡಿ ದಾಟಲಿದೆ ಎಂದು ಸರ್ಕಾರ ಭರವಸೆ ಹೊಂದಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News