ದುಬೈ: ಪೂಜ್ಯ ಶ್ರೀ ಶ್ರೀ ಸುತ್ತೂರು ಜಗದ್ಗುರುಗಳ ದಿವ್ಯ ಆಶಿರ್ವಾದದೊಂದಿಗೆ ಯುಎಇ ಬಸವ ಸಮಿತಿ ದುಬೈನ ಶರಣೆಯರು UAE ರಾಷ್ಟ್ರದಲ್ಲಿ ಪ್ರಥಮ ಬಾರಿಗೆ ವಚನ ಪಾಠ ಶಾಲೆಯನ್ನು ಪ್ರಾರಂಭಿಸಿದ್ದಾರೆ.
ಕಳೆದ ಮಾರ್ಚ್ 8 ರಂದು ಶುಭ ಶುಕ್ರವಾರ ದುಬೈನಲ್ಲಿ ಯುಎಇ ಬಸವ ಸಮಿತಿಯು ಅತೀ ವಿಜೃಂಭಣೆಯಿಂದ ಮಹಾ ಶಿವರಾತ್ರಿ ಹಬ್ಬವನ್ನು ನೂರಾರು ಶಿವ ಶರಣರ ಜೊತೆ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು ಆಗಮಿಸಿ ಆಶೀರ್ವಚನ ನೀಡಿ ಸದ್ಭಕ್ತರಿಗೆ ಆಶೀರ್ವದಿಸಿದರು.
ಇದನ್ನೂ ಓದಿ: Chitradurga: ನೀಟ್ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಸಾವು!
ಮಾರ್ಚ್ 8ರಂದು ಮಹಿಳಾ ದಿವಸದ ವಿಶೇಷವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ಬಸವ ಸಮಿತಿಯ ಮೊದಲ ವಚನ ಪಾಠ ಶಾಲೆಗೆ ಶ್ರೀ ಶ್ರೀ ವಚನಾನಂದ ಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಮಾರ್ಚ್ 24 ರಂದು ವಚನ ಪಾಠ ಶಾಲೆಯ ದ್ವಿತೀಯ ಸಂಚಿಕೆಯನ್ನು ಭಾರತೀಯ ಸಂಜಾತ ಮಕ್ಕಳಿಗಾಗಿ ನಡೆಸಲಾಯಿತು,ಇದರ ಅಂಗವಾಗಿ ಭಾಲ್ಕಿ ಹಿರೇಮಠದ ಶ್ರೀ ಶ್ರೀ Dr. ಬಸವಲಿಂಗಪಟ್ಟ ದೇವರು, ಅಧ್ಯಕ್ಷರು, ಅನುಭವ ಮಂಟಪ ಭಾಲ್ಕಿ ಅವರು ನಡೆಸಿಕೊಟ್ಟರು.
ಇದನ್ನೂ ಓದಿ: Lok sabha Election 2024: ಲೋಕಸಭಾ ಚುನಾವಣೆಯ ನಂತರ ಬದಲಾಗ್ತಾರಾ ಸಿಎಂ?
ವಚನಗಳ ಕುರಿತು ಹೊರದೇಶದಲ್ಲಿ ವಾಸಿಸುತ್ತಿರುವ ಮಕ್ಕಳ ಆಸಕ್ತಯನ್ನು ಕಂಡು ಸ್ವಾಮೀಜಿಗಳು ಹರ್ಷ ವ್ಯಕ್ತಪಡಿಸಿದರು.ಈ ತರಗತಿಗಳು ಹೀಗೆ ಮುಂದುವರಿದು ಹೆಮ್ಮರವಾಗಲಿ ಎಂದು ಆಶೀರ್ವದಿಸಿದರು.ಕಾರ್ಯಕ್ರಮವನ್ನು ಶರಣೆಯರಾದ ಶ್ರೀಮತಿ ಸ್ವರೂಪ ಗಡಮಿ ಹಾಗೂ ಶ್ರೀ ಮತಿ ಪವಿತ್ರ ಆದರ್ಶ್ ಅವರು ಬಹಳ ಚೆನ್ನಾಗಿ ನಡೆಸಿಕೊಟ್ಟರು.ಅವರ ಜೊತೆ ಶರಣೆ ಶ್ರೀಮತಿ ಶಕುಂತಲಾ ಹವಾಲ್ದಾರ್ ಅವರು ಎಲ್ಲ ಮಕ್ಕಳನ್ನು ಒಂದುಗೂಡಿಸುವಲ್ಲಿ ಸಹಕರಿಸಿದರು.
ಸುಮಾರು 36 ಮಕ್ಕಳು ಪಾಲ್ಗೊಂಡಿದ್ದ ಈ ದ್ವೀತಿಯ ಪಾಠಶಾಲೆಯ ಎಲ್ಲ ಮಕ್ಕಳಿಗೂ ಹಾಗೂ ಪಾಲಕರಿಗೆ ಬಸವ ಸಮಿತಿಯ ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳು ಶುಭ ಕೋರಿದರು.ಈ ವರ್ಷ ಬಸವ ಜಯಂತಿ-2024 ಕಾರ್ಯಕ್ರಮವನ್ನು May 19 ರಂದು ದುಬೈನ JSS ಪ್ರೈವೇಟ್ ಸ್ಕೂಲ್ - ದುಬೈನಲ್ಲಿ ನಡೆಸಲಾಗುವುದು ಎಂದು ಪ್ರಕಟಿಸಿದರು.
ಈ ಸಲದ ಬಸವ ಸಮಿತಿಯ ಎಲ್ಲ ಕಾರ್ಯಕ್ರಮಗಳನ್ನುಶರಣ Dr. ಬಸವರಾಜ್ ಹೊಂಗಲ ಇವರ ಅಧ್ಯಕ್ಷತೆ ಯಲ್ಲಿ ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಕಾರ್ಯಕಾರಿ ಸಮಿತಿಯ ಸದಸ್ಯರು ಇವರ ನೇತ್ರತ್ವದಲ್ಲಿ ನಡೆಸಲಾಗುವದು ಎಂದು UAE Basava Samithi Dubai ವತಿಯಿಂದ ಶರಣ ಶ್ರೀ ಚಂದ್ರಶೇಖರ ಲಿಂಗದಳ್ಳಿ ಸ್ಥಾಪಕ ಹಾಗು ಸಲಾಹ ಸಮಿತಿ ಸದಸ್ಯರು ಮಾಹಿತಿ ಒದಗಿಸಿದ್ದಾರೆ..