ತೊಂಡೆಕಾಯಿ ತಿನ್ನುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.ಇದು ದೇಹದ ಚಯಾಪಚಯ ದರವನ್ನು ಸರಿಪಡಿಸುತ್ತದೆ.
ಬೆಂಗಳೂರು : ತೊಂಡೆಕಾಯಿಯನ್ನು ಇಷ್ಟಪಡುವವರ ಸಂಖ್ಯೆ ಕಡಿಮೆಯೇ. ತೊಂಡೆಕಾಯಿ ಎಂದ ಕೂಡಲೇ ಮುಗು ಮುರಿಯುವವರೇ ಹೆಚ್ಚು. ಆದರೆ ತೊಂಡೆಕಾಯಿ ತಿನ್ನುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದು ಅನೇಕ ರೋಗಗಳಿಗೆ ಔಷಧಿಯಾಗಿಯೂ ಕಾರ್ಯನಿರ್ವಹಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್
ಮಾಡಿ.
ತೊಂಡೆಕಾಯಿಯ ಬೇರಿನಲ್ಲಿ ಬೊಜ್ಜು ಕರಗಿಸಲು ಸಹಾಯ ಮಾಡುವ ಅಂಶ ಇದೆ ಎನ್ನುವುದು ಸಂಶೋಧನೆಯಿಂದ ತಿಳಿದುಬಂದಿದೆ. ಇದು ದೇಹದ ಚಯಾಪಚಯ ದರವನ್ನು ಸರಿಪಡಿಸುತ್ತದೆ. ಜೀರ್ಣಕ್ರಿಯೆಯು ಉತ್ತಮವಾದಾಗ, ಬೊಜ್ಜು ಕ್ರಮೇಣ ಕಡಿಮೆಯಾಗುತ್ತದೆ.
ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿಂದಾಗಿ ನಮ್ಮ ದೇಹವು ಬೇಗನೆ ದಣಿದಿರುವುದು ಕಂಡುಬರುತ್ತದೆ. ಆಹಾರದಲ್ಲಿ ತೊಂಡೆಕಾಯಿಯನ್ನು ಸೇರಿಸುವುದರಿಂದ ಕಬ್ಬಿಣದ ಕೊರತೆ ದೂರವಾಗುತ್ತದೆ. ಇದರಿಂದ ದೇಹದಲ್ಲಿ ಆಯಾಸದ ಸಮಸ್ಯೆ ಇರುವುದಿಲ್ಲ. ಮಾತ್ರವಲ್ಲ ದೇಹದ ಸಕ್ಕರೆ ಪ್ರಮಾಣ ಕೂಡಾ ನಿಯಂತ್ರಣದಲ್ಲಿರುತ್ತದೆ.
ತೊಂಡೆಕಾಯಿ ದೇಹದಲ್ಲಿನ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಏಕೆಂದರೆ ಇದು ಥಯಾಮಿನ್ ಕಾರ್ಬೋಹೈಡ್ರೇಟ್‌ಗಳನ್ನು ಗ್ಲೂಕೋಸ್ ಆಗಿ ಪರಿವರ್ತಿಸಲು ಸಹಾಯ ಮಾಡುತ್ತದೆ ಮತ್ತು ಪ್ರೋಟೀನ್‌ಗಳ ವಿಭಜನೆಗೆ ಸಹಾಯ ಮಾಡುತ್ತದೆ.
ತೊಂಡೆಕಾಯಿಯನ್ನು ಆಹಾರದಲ್ಲಿ ಸೇರಿಸುವುದರಿಂದ, ಪೈಲ್ಸ್, ಗ್ಯಾಸ್ಟ್ರೋ-ಎಸೋಫೇಜಿಲ್, ರಿಫ್ಲಕ್ಸ್ ಮತ್ತು ಮಲಬದ್ಧತೆಯಂತಹ ರೋಗಗಳು ದೂರವಾಗುತ್ತವೆ. ಜೀರ್ಣಾಂಗ ವ್ಯವಸ್ಥೆಯಲ್ಲಿಯೂ ಸಾಕಷ್ಟು ಸುಧಾರಣೆ ಕಂಡು ಬರುತ್ತದೆ.
ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ತೊಂಡೆಕಾಯಿಯಲ್ಲಿ ಹೇರಳವಾಗಿ ಕಂಡುಬರುತ್ತವೆ. ತೊಂಡೆಕಾಯಿಯಲ್ಲಿಯೂ ಫ್ಲೇವನಾಯ್ಡ್‌ಗಳು ಕಂಡುಬರುತ್ತವೆ. ಇವೆಲ್ಲವೂ ಸೇರಿ ಹೃದಯದ ಚಟುವಟಿಕೆಯನ್ನು ಸುಧಾರಿಸುತ್ತದೆ. ಇದರಿಂದ ಹೃದಯದ ಸಮಸ್ಯೆಯನ್ನು ದೂರ ಉಳಿಸುತ್ತದೆ.